ಶ್ರೀರಾಮ ಮಂದಿರದ ಉದ್ಘಾಟನೆ ಸಮಸ್ತ ಹಿಂದೂಗಳ ಅಸ್ಮಿತತೆಯ ಕುರುಹು..
ಬೈಲಹೊಂಗಲ: ಪ್ರಪಂಚವೇ ಎದುರು ನೋಡುತ್ತಿರುವ ಸಮಸ್ತ ಹಿಂದೂಗಳ ಪರಮಾಧ್ಯ ದೈವ ಮಾರ್ಯಾದಾ ಪುರಷೋತ್ತಮ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇದೊಂದು ಹಿಂದೂಗಳ ಅಸ್ಮೀತತೆ ಎಂದು ಹೊಸರ ಗ್ರಾಮದ ಮಡಿವಾಳೆಶ್ವರಮಠದ ಪೂಜ್ಯ ಗಂಗಾಧರ ಸ್ವಾಮೀಜಿ ಹೇಳಿದರು.
ಹೊಸೂರ ಗ್ರಾಮದಲ್ಲಿ ಬುಧವಾರ ಅಯೋಧ್ಯೆಯ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಮಾತನಾಡಿ, ಅಯೋಧ್ಯೆಯಿಂದ ಮಂತ್ರಾಕ್ಷತೆ ಪ್ರತಿ ಊರಿಗೂ ತಲುಪುತ್ತಿದೆ, ಈ ಮಂತ್ರಾಕ್ಷತೆಯುನ್ನು ಗ್ರಾಮದ ಪ್ರತೀ ಮನೆಗೂ ತಲುಪಿಸುವ ಜವಾಬ್ದಾರಿಯನ್ನು ಹಿಂದೂ ಕಾರ್ಯಕರ್ತರೊಂದಿಗೆ ಮುಸ್ಲಿಂ ಯುವಕರು ಪಾಲ್ಗೊಂಡು ಸೌಹಾರ್ದ ಮೆರದಿದ್ದಾರೆ ಎಂದಿದ್ದಾರೆ..
ಇದೊಂದು ನಾಡಿಗೆ ಒಳ್ಳೆಯ ಸಂದೇಶವಾಗಿದ್ದು, ಆಡಹಳ್ಳಿಯ ಪಂಚಾಕ್ಷರಿ ಮಹಾಸ್ವಾಮಿಜಿ ಮಾತನಾಡಿ,
ಅಯೋಧ್ಯೆ ರಾಮ ಮಂದಿರದಿಂದ ಆಗಮಿಸಿರುವ ರಾಮ ಮಂತ್ರಾಕ್ಷತೆ ಪ್ರತೀ ಹಿಂದೂಗಳ ಮನೆಗೆ ತಲುಪಿ, ರಾಮನಲ್ಲಿದ್ದಂತಹ 16 ಸಾತ್ವಿಕ ಗುಣಗಳು ಪ್ರತೀ ಹಿಂದೂವಿನಲ್ಲಿ ಬರುವಂತಾಗಲಿ ಅನ್ನೋ ಆಶಯವೂ ಇದೆ.

ಜೊತೆಗೆ, ರಾಮ ಮಂತ್ರಾಕ್ಷತೆಯು ಸುಖ, ನೆಮ್ಮದಿ ಹಾಗೂ ಅಭಿವೃದ್ಧಿಯ ಸಂಕೇತವೂ ಆಗಿದೆ ಎಂದರು.
ಗ್ರಾಮದ ಹಿರಿಯರಾದ ಗುರುಪಾದ ಕಳ್ಳಿ ಮಾತನಾಡಿ,
ಕಾರ್ಯಕರ್ತರು ಮನೆಮನೆಗೆ ತೆರಳಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಿಸುವ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯ ಜೊತೆಗೆ ರಾಮ ಮಂದಿರದ ಭಾವಚಿತ್ರ ಇರಬೇಕು ಎಂದ ಅವರು,
ಮನೆಯ ಹೊರಗಡೆ ನಿಂತು ಮಂತ್ರಾಕ್ಷತೆ ನೀಡಬಾರದು. ರಾಮನ ಜಪ ಮಾಡುತ್ತಾ ಮನೆ ಒಳಗಡೆ ಹೋಗಿ ಮಂತ್ರಾಕ್ಷತೆಯ ಮಹತ್ವದ ಬಗ್ಗೆ ಮನೆ ಮಂದಿಗೆ ತಿಳಿಸಿಕೊಡಬೇಕು, ಜೊತೆಗೆ ಮಂತ್ರಾಕ್ಷತೆ ಸ್ವೀಕರಿಸುವ ಮನೆಯವರು ಕೂಡ ಭಕ್ತಿಯಿಂದ ತೆಗೆದುಕೊಳ್ಳಬೇಕು, ಮಂತ್ರಾಕ್ಷತೆ ಈಗಾಗಲೇ ಹಲವು ಮನೆಗಳಿಗೆ ತಲುಪಿದ್ದು, ಇನ್ನೂ ಕೆಲವೆಡೆ ತಲುಪಿಸುವ ಕಾರ್ಯ ನಡೆಯುತ್ತಿದೆ, ಮಂತ್ರಾಕ್ಷತೆ ಸಿಕ್ಕಿದ ಕೂಡಲೇ ಅದನ್ನು ಉಪಯೋಗಿಸುವಂತಿಲ್ಲ,
ಬದಲಾಗಿ ಜನವರಿ 22 ರವರೆಗೆ ತಮ್ಮ ತಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು, ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುವಾಗ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಬೇಕು, ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಮಂತ್ರಾಕ್ಷತೆಗೆ ದಿವ್ಯ ಶಕ್ತಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ ಎಂದರು.

ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ವಕ್ಕುಂದ ಮಾತನಾಡಿ,
ಮಂತ್ರಾಕ್ಷತೆಯನ್ನು ಜ22ನಂತರ
ಊಟದ ಅಕ್ಕಿ ಜೊತೆ ಸೇರಿಸಿ, ಬೇಯಿಸಿ ಅನ್ನ ಮಾಡಿ ಸೇವಿಸಬಹುದು, ಮನೆಯಲ್ಲಿ ಪಾಯಸ ಮಾಡಿ ಅದರ ಸೇವಿಸಬಹುದು,
ದೇವರ ಕೋಣೆಯಲ್ಲಿಯೂ ಇಟ್ಟುಕೊಳ್ಳಬಹುದು, ಮನೆಯ ಮುಂದಿನ ಬಾಗಿಲಿನ ಮೇಲೆ ಬಿಳಿ ಬಟ್ಟೆಯಲ್ಲಿ ಕಟ್ಟಿ ಇಟ್ಟುಕೊಳ್ಳಬಹುದು, ಮಂತ್ರಾಕ್ಷತೆಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಹಣ, ಚಿನ್ನ ಇಡುವ ಕಪಾಟು ಅಥವಾ ಗೋಡ್ರೇಜ್‍ನಲ್ಲಿಯೂ ಇಟ್ಟುಕೊಳ್ಳಬಹುದು, ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು.
ಇನ್ನು ಮಂತ್ರಾಕ್ಷತೆಯ ಜೊತೆಗೆ ರಾಮಮಂದಿರದ ಒಂದು ಫೋಟೋ ಹಾಗೂ ಅದರ ಹಿನ್ನೆಲೆ ಇರುವ ಕರಪತ್ರವೊಂದು ಸಿಗುತ್ತದೆ, ಇದನ್ನು ಕೂಡ ಶ್ರದ್ಧೆಯಿಂದ ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ, ಗ್ರಾಪಂ ಅಧ್ಯಕ್ಷೆ ಶ್ರೀದೇವಿ ತಳವಾರ, ಗೌಡಪ್ಪ ಹೊಸಮನಿ, ಮಾಜಿ
ತಾಪಂ ಸದಸ್ಯ ಜಗದೀಶ ಬುದಿಹಾಳ, ಸೋಮಲಿಂಗ ಮೆಳ್ಳಿಕೆರಿ, ಮಡಿವಾಳಪ್ಪ ಚಳಕೊಪ್ಪ, ಈರಣ್ಣ ಸಂಪಗಾಂವ, ಮಲ್ಲಿಕಾರ್ಜುನ ಕರಡಿಗುದ್ದಿ, ಮಡಿವಾಳಪ್ಪ ಚಳಕೊಪ್ಪ,
ಮೋಹನ ವಕ್ಕುಂದ, ಉಮೇಶ ಸಂಗೊಳ್ಳಿ, ದುಂಡಪ್ಪ ಪಣದಿ, ನಾಗರಾಜ ಬುಡಶೆಟ್ಟಿ, ಪ್ರಶಾಂತ ಮಾಕಿ, ಮಂಜುನಾಥ ಸಂಗೊಳ್ಳಿ, ಮಂಜುನಾಥ ಹೊಸಮನಿ, ಮುನೀರ ಶೇಖ, ದಿಲಾವಾರ ದುಪದಾಳ, ದಿಲಾವಾರ ಶೇಖ, ದಾದಾಪೀರ ಶೇಖ, ಅಪ್ಪು ಇಳಿಗೇರ, ಮಲ್ಲವ್ವ ಬಾರಿಗಿಡದ, ಸಂಜು ಪಾಟೀಲ, ಬಸವರಾಜ ವಿವೇಕಿ, ಸಿದ್ದನಗೌಡ ಇಂಗಳಗಿ, ಈರಣ್ಣ ಕಳ್ಳಿ, ಮಲ್ಲವ್ವ ಸುತಗಟ್ಟಿ, ಗಂಗವ್ವ ಅರವಳ್ಳಿ, ರೋಷನಬೀ ಶೇಖ, ಶಿವನಾಯಕ ಪಾಟೀಲ, ದೀಪಾ ಪಾಟೀಲ ಮುಂತಾದವರ ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..