ಶ್ರೀ ಸಿದರಾಯಿ ಪು ಶಿಗೀಹಳ್ಳಿ ಅವರ
ಸೇವಾ ನಿವೃತ್ತಿಯ ಭಾವನಾತ್ಮಕ ಬೀಳ್ಕೊಡುಗೆ..
ಸಾರಿಗೆ ಸಂಸ್ಥೆಯ ಯಶಸ್ವಿ ಸೇವೆಯ ಜೊತೆ ಸಾಮಾಜಿಕ ಕಾಳಜಿಯ ಸೇವಾ ಸಾಧಕರು..
ಆಪ್ತರಿಂದ ಸೇವಾನಿವೃತ್ತಿ, ಜನ್ಮದಿನ ಹಾಗೂ ರಾಜ್ಯೋತ್ಸವದ ತ್ರಿವಳಿ ಶುಭಾಶಯ ಪಡೆದ ಶೀಗಿಹಳ್ಳಿ ಗುರುಗಳು..
ಬೆಳಗಾವಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಲಾಖೆಯಲ್ಲಿ ಅಮೋಘ 27 ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿ, ಕಷ್ಟದಲ್ಲಿ ಇದ್ದವರಿಗೆ ಅನ್ಯಾಯಕ್ಕೆ ಒಳಗಾದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡಿ ಹಾಗೂ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟದಲ್ಲಿ ಭಾಗಿಯಾಗಿ ತಮ್ಮದೆ ಆದಂತಹ ಶಕ್ತಿ ಪ್ರದರ್ಶನ ತೋರಿಸಿ ಜನ ಮೆಚ್ಚುಗೆ ಪಡೆದಿರುವ ಸಿದರಾಯಿ ಶೀಗಿಹಳ್ಳಿ ಅವರಿಗೆ ಇಂದು ಭಾವನಾತ್ಮಕ ಬೀಳ್ಕೊಡುಗೆ ನೀಡುವ ಮೂಲಕ ಸೇವಾನಿವೃತ್ತಿ ನೀಡಲಾಗಿದೆ..
ಗುರುವಾರ ದಿನಾಂಕ 31/10/2024 ರಂದು ನೂರಾರು ಗಣ್ಯರ ಆಪ್ತರ ಸಮ್ಮುಖದಲ್ಲಿ ಸೇವಾನಿವೃತ್ತಿ ಕಾರ್ಯಕ್ರಮ ನಡೆಡಿದ್ದು, ಶ್ರೀಯುತರು ಸಾರಿಗೆ ಸಂಸ್ಥೆಯ ಸಹಕಾರಿ ಪತ್ತಿನ ಸಂಘದಲ್ಲಿ ನಿರ್ದೇಶಕರಾಗಿ ಅದ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ, ಸಿಬ್ಬಂದಿಗಳ ವಿಸ್ವಾಸಕ್ಕೆ ಪಾತ್ರರಾಗಿ ಜನಪ್ರಿಯತೆ ಗಳಿಸಿದ್ದಾರೆ,

ಸಾರಿಗೆ ಸಂಸ್ಥೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ, ತಮ್ಮ ವೃತ್ತಿಪರತೆಯಿಂದ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದು ಇಲಾಖೆ ಹೆಮ್ಮೆ ಪಡುವಂತಹ ನೌಕರರಾಗಿದ್ದು ಇದರೊಂದಿಗೆ ಸಮಾಜ ಸೇವೆ, ಹೋರಾಟದಲ್ಲಿ ಭಾಗಿಯಾಗಿ ಜನಸೇವೆ ಮಾಡುತ್ತಾ, ಜನ ನಾಯಕರಾಗಿಯೂ ಗುರ್ತಿಸಿಕೊಂಡಿದ್ದಾರೆ.
ಇಂತಹ ಸಾಧಕರಿಗೆ ಸಂಸ್ಥೆಯ ವತಿಯಿಂದ ಇವತ್ತು ಸೇವಾ ನಿವೃತ್ತಿಯ ಬೀಳ್ಕೊಡುಗೆಯ ಕಾರ್ಯಕ್ರಮವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನೆರವೇರಿಸಲಾಗಿದೆ..
ಈ ಸಂದರ್ಭದಲ್ಲಿ (ಹಿರಿಯ ಮುಖಂಡರು ಮಲ್ಲೇಶ್ ಚೌಗುಲೆ) ಹಾಗೂ (ಸುರೇಶ್ ಗವನ್ನವರ್ ಹೋರಾಟಗಾರರು)
(ಸಾರಿಗೆ ನೌಕರರ ರಾಜ್ಯ ಅದ್ಯಕ್ಷರು ಚಂದ್ರಶೇಖರ್ ರವರು)
(ಸಾರಿಗೆ ಬೆಳಗಾವಿ ೨ನೇ ಘಟಕ ವ್ಯವಸ್ಥಾಪಕರು ಅಧಿಕಾರಿಗಳು) ಹಾಗೂ (ಹಿರಿಯ ಸಾಹಿತಿ ಶಿವಯೋಗಿ ಕುಸುಗಲ್)
(ಮಹೇಶ ಕೊಲ್ಕಾರ್ ಹೋರಾಟಗಾರರು) (ಪ್ರವೀಣ್ ಮಾದರ ಹೋರಾಟಗಾರರು) (ಸಮಾಜ ಸೇವಕರು ಅಂಜನ ಗಂಡಗುದ್ರಿ) (ಭರಮು ಕುರಲಿ ಹೋರಾಟಗಾರರು)
(ಹೆಸರಾಂತ ವೈದ್ಯರು ಡಾ ಸತೀಶ್ ಚೌಳಿಗೆರ್)
(ರೈತ ಮುಖಂಡರು ಹನುಮಂತ ದೇವಗೀಹಳ್ಳಿ)
(ಮಹೇಶ ಎಸ್ ಶಿಗಿಹಳ್ಳಿ ಹೋರಾಟಗಾರರು) ಎಲ್ಲ ಮುಖಂಡರು ಒಂದೇ ವೇದಿಕೆಯಲ್ಲಿ ಶ್ರೀ ಸಿದ್ಧರಾಯಿ ಶಿಗಿಹಳ್ಳಿ ರವರ ವೃತ್ತಿ ಜೀವನ ಸಮಾಜಸೇವೆ ಹಾಗೂ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಒಳ್ಳೆಯ ಹಿತನುಡಿಗಳನ್ನು ಆಡಿದ್ದು, ಶ್ರೀಯುತರ ಮುಂದಿನ ಜೀವನದ ಬಗ್ಗೆ ಮತ್ತೊಮ್ಮೆ ಶುಭ ಹಾರೈಸಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..