ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಕ್ಕೆ ಹೊಸ ಪ್ರಾಚಾರ್ಯರ ನೇಮಕ.
ನೂತನ ಪ್ರಾಚಾರ್ಯರಿಗೆ ಸ್ವಾಗತ ಕೋರಿದ ವಿಧ್ಯಾರ್ಥಿ ಬಳಗ..
ಬೆಳಗಾವಿ : ನಗರದ ಶ್ರೀನಗರದಲ್ಲಿ ಇರುವ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಗೆ ಒಳಪಡುವ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯಕ್ಕೆ ನೂತನ ಪ್ರಾಚಾರ್ಯರ ಆಗಮನವಾಗಿದೆ..
ಇಂದು ಕಾಲೇಜಿಗೆ ಹೊಸ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಡಾ, ಪ್ರೊ ಎಂ ಜಿ ಹೆಗಡೆ ಅವರಿಗೆ ಅವರಿಗೆ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಆತ್ಮೀಯ ಹಾಗೂ ಗೌರವೀಯ ಸ್ವಾಗತವನ್ನು ಕೋರಿದ್ದಾರೆ..
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮಹೇಶ ಹೊಸೂರ, ಬೀರಪ್ಪ ನೇಸರಗಿ, ಶಶಿಕಾಂತ ನಡಗಡ್ಡಿ, ಫಕ್ಕಿರಗೌಡ ಪಾಟೀಲ, ರಾಹುಲ ಪಾಟೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ…