ಸಂಗೊಳ್ಳಿ ರಾಯಣ್ಣ ವಂಶಜರಾದ ಕರವೀರಪ್ಪ ದೇವಪ್ಪ ರೋಗನ್ನವರ ವಿಧಿವಶ..
ವಯೋಸಹಜ ನಿಧನದಿಂದ ಕೈಲಾಸವಾಸಿಯಾದ ರಾಯಣ್ಣ ಹಾಗೂ ಕುರುಬ ಸಮಾಜದ ಅಧ್ಯಯನಕಾರ..
ಬೆಳಗಾವಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವಂಶಸ್ಥರಾದ ಶ್ರೀ ಕರವೀರಪ್ಪ, ದೇಮಪ್ಪ, ರೋಗನ್ನವರ ಅವರು 24-1-26 ಮುಂಜಾನೆ ಬೆಳಗಾವಿ ನಗರದ ಸದಾಶಿವ ನಗರದ ತಮ್ಮ ಮನೆಯಲ್ಲಿ ಕೈಲಾಸವಾಸಿಗಳಾದರು.
ನಿಧನದ ಕಾಲಕ್ಕೆ ಅವರಿಗೆ 90 ವರ್ಷ ವಯಸ್ಸಾಗಿದ್ದು, ಅವರು ಪತ್ನಿ, ಇಬ್ಬರು ಪುತ್ರರು, ಒಬ್ಬರು ಪುತ್ರಿ, ಅಪಾರ ಬಂಧು ಬಳಗದವರು ಹಾಗೂ ಮಿತ್ರರನ್ನು ಅಗಲಿದ್ದಾರೆ.
ಅವರು ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾ ಕನಕ ನೌಕರರ ಸಂಘದ ಸ್ಥಾಪಕ ನಿರ್ದೇಶಕರಾಗಿದ್ದರು. ಅದರಂತೆ ದಿ.ಪ್ರೊಫಸರ್ ಹಾಗೂ ಸಂಶೋಧಕ ಜೋತಿ ಹೊಸೂರ ಅವರಿಗೆ ಸಂಗೊಳ್ಳಿ ರಾಯಣ್ಣನ ಸಂಬಂಧದ ಮಾಹಿತಿ ಹಾಗೂ ದಾಖಲೆಗಳನ್ನು ಪೂರೈಸಿ ಅವರಿಂದ ” ಸಂಗೊಳ್ಳಿ ರಾಯಣ್ಣ ಚರಿತ್ರೆ ಹಾಗೂ ಇತಿಹಾಸ ” ಎಂಬ ಸಂಶೋಧನಾತ್ಮಕ ಪುಸ್ತಕ ಬರೆಯುವುದಕ್ಕೆ ಕಾರಣಿಭೂತರಾಗಿದ್ದರು, ಈ ಪುಸ್ತಕವು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರಿಂದ ಬಿಡುಗಡೆಯಾಗಿತ್ತು.
ಕುಟುಂಬಸ್ಥರು, ಬಂದು ಬಳಗ ಸ್ನೇಹಿತರು ಹಿತೈಷಿಗಳು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ..