ಸಂತಿಬಸ್ತವಾಡದ ಗ್ರಾಮದ ಸಮರ್ಥ ಪೊಲೀಸ್ ಪೇದೆ ಮಲ್ಲಸರ್ಜ ಅಂಕಲಗಿ ನಿಧನ..
ಹೃದಯಾಘಾತದ ನಿಧನಕ್ಕೆ ಪೊಲೀಸ್ ಇಲಾಖೆಯಿಂದ ಸಂತಾಪ..
ಬೆಳಗಾವಿ : ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ವಿವಿಧ ಠಾಣೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಮುಖ್ಯ ಪೇದೆ ಮಲ್ಲಸರ್ಜ ಅಂಕಲಗಿ (45) ಇಂದು ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಬೆಳಗಾವಿ ಸಮೀಪದ ಸಂತಿ ಬಸ್ತವಾಡ ಗ್ರಾಮದ ನಿವಾಸಿಯಾದ ಅಂಕಲಗಿ ಅವರು, ನಿನ್ನೆ ರಾತ್ರಿ ಡ್ಯೂಟಿ ಮುಗಿಸಿಕೊಂಡು, ಮನೆಗೆ ತೆರಳಿ ಊಟ ಮಾಡಿ ಮಲಗಿದ್ದು, ಇಂದು ಬೆಳಿಗ್ಗೆ ತಡವಾದರೂ ಎಳದ ಕಾರಣ ಮನೆಯವರು ಎಬ್ಬಿಸಲು ಹೋದಾಗ ಆಘಾತಕಾರಿ ವಿಷಯ ತಿಳಿದಿದೆ.

ಮಲ್ಲಸರ್ಜ ಅಂಕಲಗಿ ಅವರ ಅಕಾಲಿಕ ನಿಧನಕ್ಕೆ ನಗರ ಪೊಲೀಸ್ ಆಯುಕ್ತರು ಸೇರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..