ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಕ್ಕೆ ಬೆಂಬಲ..

ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಕ್ಕೆ ಬೆಂಬಲ.

ಕರ್ನಾಟಕದಲ್ಲಿ 6 ರಿಂದ ಉಪವಾಸ ಸತ್ಯಾಗ್ರಹ..

ಬೆಳಗಾವಿ : ನವೆಂಬರ್ 26ರಿಂದ ದೇಶದ ರೈತರ ಹಿತಕ್ಕಾಗಿ ಉಪವಾಸ ನಡೆಸುತ್ತಿರುವುದು 7 ದಿನಕ್ಕೆ. ಕಾಲಿಟ್ಟಿದೆ ಪರಿಸ್ಥಿತಿ ಗಂಭೀರವಾಗಿದೆ. ದಲೈವಾಲರ ಉಪವಾಸ ಬೆಂಬಲಿಸಿ ಕರ್ನಾಟಕದ ರೈತ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಕೇಂದ್ರ ಸರ್ಕಾರ ಚಳುವಳಿ ನಿರತ ಮುಖಂಡರ ಜೊತೆ ಕೂಡಲೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿ ರೈತರನ್ನು ಉಳಿಸಬೇಕು ಎಂದು ಎಚ್ಚರಿಸುತಿದ್ದೇವೆ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು.

ರೈತರ ಸಾಲ ಸಂಪೂರ್ಣ ಮನ್ನಾ ಆಗಭೇಕು,
60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ, ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು ಎಂದು ದೆಹಲಿ ಗಡಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ.

ಹೋರಾಟ ಮಾಡುತ್ತಿದ್ದ
ರೈತ ಮುಖಂಡರನ್ನು ದೇಶದ್ರೋಹಿಗಳು. ಕಳ್ಳ ಕಾಕರು ರೀತಿಯಲ್ಲಿ ಮಧ್ಯರಾತ್ರಿ ಬಂಧಿಸಿ ದೇಶದ ರೈತರಿಗೆ ಅಪಮಾನ ಮಾಡಿದ್ದಾರೆ. ನೂರಾರು ರೈತರು ಕನೋರಿ ಬಾರ್ಡರ್ನಲ್ಲಿ ಉಪವಾಸ ಕುಳಿತಿದ್ದಾರೆ ಈ ಸತ್ಯಾಗ್ರಹ 7ನೇ ದಿನಕ್ಕೆ ಮುಂದುವರೆದಿದೆ.

ಸರ್ಕಾರ ರೈತರ ಹಕ್ಕನ್ನ ದಮನ ಮಾಡಲು ಯತ್ನಿಸುತ್ತಿದೆ. ಸರ್ಕಾರದ ವರ್ತನೆಯನ್ನು ಖಂಡಿಸುತ್ತೆನೆ ಎಂದು ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ರೈತ ಜಾಗೃತಿ ಸಭೆಯಲ್ಲಿ ತಿಳಿಸಿದ್ದರು.

ಡಿಸೆಂಬರ್ 23 ರಂದು ಮೈಸೂರಿನಲ್ಲಿ ರೈತರ ಹಬ್ಬ ವಿಶ್ವ ರೈತ ದಿನಾಚರಣೆಯ ರಾಜ್ಯಮಟ್ಟದ ರೈತ ಸಮಾವೇಶ ನಡೆಯಲಿದೆ ರೈತರು ಸ್ವಾಭಿಮಾನಿಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಎಂದು ಕರೆ ನೀಡಿದರು.

ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗಿರುವುದರಿಂದ ಎಪ್ಆರ್‌ಪಿ ಮೇಲೆ ಹೆಚ್ಚುವರಿ ದರ ನಿಗದಿ ಮಾಡಬೇಕು ಎಂದು ಕಬ್ಬು ಖರೀದಿ ನಿಯಂತ್ರಣ ಮಂಡಳಿ ಸಭೆಯಲ್ಲಿ ಒತ್ತಾಯಿಸಲಾಗಿದೆ ಒಂದು ವಾರದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಕ್ಕರೆ ಸಚಿವರು ಶಿವಾನಂದ ಪಾಟೀಲ್ 29 ರಂದು ನಡೆದ ಮಂಡಳಿ ಸಭೆಯಲ್ಲಿ ತಿಳಿಸಿದ್ದಾರೆ ಎಂದರು.

ರಾಜ್ಯಉಪಾಧ್ಯಕ್ಷ ಸುರೇಶ್ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು
ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ ಅಧ್ಯಕ್ಷತೆ ವಹಿಸಿದರು.
ಮುಖಂಡರುಗಳಾದ ರಮೇಶ್ ಹಿರೇಮಠ.
ಎಸ್ ಬಿ ಸಿದ್ದ್ನಾಳ.
ಮಾರುತಿ ನಲವಾಡೆ. ಪಂಚಪ್ಪ ಗಂಗಣ್ಣ. ಶಂಕರ್ ಗೌಡ ಹೂಸಗೌಡರು ಬಾಪು ಗೌಡ ಪಾಟೀಲ್ ಈರಣ್ಣ ರಾಜನಾಳ ಮುಂತಾದವರು ಇದ್ದರು.