ಸಚಿವ ಸತೀಶ್ ಜಾರಕಿಹೊಳಿ ಆದೇಶದ ಮೇರೆಗೆ ರಾಜು ಕಾಗೆ ಅವಿರೋಧ ಆಯ್ಕೆ..

ಸಚಿವ ಸತೀಶ್ ಜಾರಕಿಹೊಳಿ ಆದೇಶದ ಮೇರೆಗೆ ರಾಜು ಕಾಗೆ ಅವಿರೋಧ ಆಯ್ಕೆ..

ಶಾಸಕ ಬಾಲಚಂದ್ರ ಜಾರಕಿಹೊಳಿ..

ಬೆಳಗಾವಿ : ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಇಂದು ಕಾಗವಾಡ ಕ್ಷೇತ್ರಕ್ಕೆ ಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

ಕಾಗವಾಡ ಕ್ಷೇತ್ರದಿಂದ ಶಾಸಕ ರಾಜು ಕಾಗೆ ಹಾಗೂ ಶ್ರೀನಿವಾಸ ಪಾಟೀಲ್ ಅವರು ಸ್ಪರ್ಧೆ ಮಾಡಿದ್ದರು, ಇಂದು ಉಸ್ತುವಾರಿ ಸಚಿವರು, ಶಾಸಕ ರಾಜು ಕಾಗೆ ಅವರು, ಶ್ರೀಮಂತ ಪಾಟೀಲರು, ನಾವು, ಶ್ರೀನಿವಾಸ ಅವರು ಎಲ್ಲರೂ ಚರ್ಚೆ ಮಾಡಿದಾಗ, ಶ್ರೀನಿವಾಸ ಪಾಟೀಲ್ ಅವರು ನಾಮಪತ್ರ ಹಿಂಪಡೆಯಬೇಕು ಎಂದು ಸಚಿವರು ಸೂಚಿಸಿ, ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಆದೇಶ ಮಾಡಿದಾಗ, ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಎಲ್ಲರೂ ಸಹಕಾರ ನೀಡಿದ್ದೇವೆ ಎಂದಿದ್ದಾರೆ.

ರಾಜು ಕಾಗೆ ಅವರು ಬಹಳ ಹಿರಿಯರು, ಅನುಭವ ಹೊಂದಿದವರು, ಆ ಭಾಗದ ಶಾಸಕರು ಅವರಿಗೆ ಅವಕಾಶ ನೀಡಬೇಕು, ವಯಸ್ಸಾದ ಅವರು ಚುನಾವಣೆಯಲ್ಲಿ ಓಡಾಡಬಾರದು, ಶ್ರೀನಿವಾಸ ಪಾಟೀಲರಿಗೆ ಮುಂದೆಯೂ ಅವಕಾಶಗಳು ಬರುತ್ತವೆ ಎಂದಾಗ ಶ್ರೀನಿವಾಸ ಪಾಟೀಲ ಅವರು ತಮ್ಮ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ರಾಜು ಕಾಗೆ, ಶ್ರೀಮಂತ ಪಾಟೀಲ, ಶ್ರೀನಿವಾಸ ಪಾಟೀಲ್ ಎಲ್ಲರೂ ಸೇರಿ ತಾಲೂಕಿನ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದುಕೊಂಡಿದ್ದಾರೆ, ಈಗಾಗಲೇ ನಮ್ಮ ಗುಂಪಿನಿಂದ ಏಳು ಅವಿರೋಧ ಆಯ್ಕೆ ಆಗಿದ್ದಾವೆ, ಇನ್ನು ಏಳಕ್ಕೆ ಚುನಾವಣೆ ನಡೆಯುತ್ತವೆ, ಜನರ ಹಾಗೂ ದೇವರ ಆಶೀರ್ವಾದದಿಂದ ನಮ್ಮ ಬಣ ಅಧಿಕಾರ ಹಿಡಿಯುತ್ತದೆ ಎಂದಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..