ಸಚಿವ ಸತೀಶ ಜಾರಕಿಹೊಳಿ ಅವರಿಂದ ವಿಶೇಷ ಔತಣಕೂಟ..
ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನೆಗೆ ಹಾಗೂ ಪ್ರೋತ್ಸಾಹಕ್ಕಾಗಿ ಈ ಔತಣಕೂಟ..
ಬೆಳಗಾವಿ : ಮಾನ್ಯ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಸಂಸದರಾದ ಕು ಪ್ರಿಯಾಂಕಾ ಜಾರಕಿಹೊಳಿ ಹಾಗೂ ರಾಹುಲ್ ಜಾರಕಿಹೊಳಿ ಅವರ ಸಾನ್ನಿಧ್ಯದಲ್ಲಿ ಇಂದು ದಿನಾಂಕ 14/02/2026 ರಂದು ಮುಂಜಾನೆ 11:00 ಗಂಟೆಗೆ ಗೋಕಾಕ ನಗರದ ಹಿಲ್ ಗಾರ್ಡನ್ನಲ್ಲಿ 12ನೇ ಸತೀಶ್ ಪ್ರತಿಭಾ ಪುರಸ್ಕಾರ ಪ್ರಯುಕ್ತ ಯಮಕನಮರಡಿ ಕ್ಷೇತ್ರದ ಸ್ಪರ್ಧಾಳುಗಳು ಹಾಗೂ ಅವರ ಪಾಲಕ-ಪೋಷಕರಿಗೆ ವಿಶೇಷ ಔತಣ ಕೂಟವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಡೆಯಲಿದೆ.
ಆದ್ದರಿಂದ ಯಮಕನಮರಡಿ ಮತಕ್ಷೇತ್ರ ಹಾಗೂ ಹುದಲಿ ಜಿಲ್ಲಾ ಪಂಚಾಯತಿಯ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ, ಆತಿಥ್ಯವನ್ನು ಸ್ವೀಕರಿಸುವಂತೆ ಸಚಿವರ ಆಪ್ತ ವಲಯದಿಂದ ಮನವಿ ಮಾಡಿಕೊಳ್ಳಲಾಗಿದೆ..
ಅರವಿಂದ ಕಾರ್ಚಿ,
ಸಚಿವರ ಆಪ್ತ ಸಹಾಯಕರು ಹಿಲ್ ಗಾರ್ಡನ್ ಗೋಕಾಕ ಹಾಗೂ ಯಮಕನಮರಡಿ ವಿಧಾನಸಭಾ ಕ್ಷೇತ್ರ, ಜಿಲ್ಲಾ ಪಂಚಾಯತ ಹುದಲಿ.