ಸಚಿವ ಸತೀಶ ಜಾರಕಿಹೋಳಿ ಅವರ ವತಿಯಿಂದ 160 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆಯ ವಿತರಣೆ…

ಸಚಿವ ಸತೀಶ ಜಾರಕಿಹೋಳಿ ಅವರ ವತಿಯಿಂದ 160 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಮರಣಿಕೆಯ ವಿತರಣೆ..

ಬೆಳಗಾವಿ : ಜಿಲ್ಲೆಯ ತಾಲೂಕುಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಕ್ಕಳು ಅತೀ ಉತ್ಸಾಹದಿಂದ ಭಾಗಿಯಾಗಿರುವ ಸನ್ನಿವೇಶ ಸಾಮಾನ್ಯವಾಗಿತ್ತು..

ಜಿಲ್ಲೆಯ ಯಮಕನಮರಡಿ ಮತ ಕ್ಷೇತ್ರದ ಕಡೋಲಿ ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ, ಕೇದನೂರು ಗ್ರಾಮದಲ್ಲಿ, ಕಂಗ್ರಾಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳನ್ನು ಅತೀ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿತ್ತು..

ಈ ಶಾಲಾ ಮಕ್ಕಳ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಮಾನ್ಯ ಸಚಿವರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ, ಶಾಲಾ ಮಕ್ಕಳ ಜ್ಞಾನ ಹಾಗೂ ಕೌಶಲ್ಯಗಳು ಬೆಳೆಯುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪಾಲಕರು ಕಾಳಜಿ ವಹಿಸಬೇಕು, ಇಂದಿನ ಮಕ್ಕಳಲ್ಲಿ ಅಗಾಧವಾದ ಜಾಣ್ಮೆ ಇದೆ ಅದನ್ನು ಸರಿಯಾಗಿ ಪೋಷಿಸಿ, ಬೆಳೆಸಿ, ಮುಂದೆ ಅವರು ದೇಶಕ್ಕೆ ಉತ್ತಮ ಕೊಡುಗೆ ನೀಡುವ ಪ್ರಜೆಗಳಾಗಬೇಕು ಎಂಬ ಸಲಹೆ ನೀಡಿದರು..

ನಂತರ ಪ್ರತಿಭಾ ಕಾರಂಜಿ ಸ್ಪರ್ಧೆಯ ಸಮಾರಂಭದ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಕಡೆಯಿಂದ ಸುಮಾರು 160 ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು…

ಈ ಸಂಧರ್ಭದಲ್ಲಿ ಮಲಗೌಡ ಪಾಟೀಲ್ ಅವರೊಂದಿಗೆ, ಶಿಕ್ಷಣ ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಶಾಲಾ ಸಿಬ್ಬಂದಿಗಳು, ವಿಧ್ಯಾರ್ಥಿಗಳ ಪೋಷಕರು, ನೂರಾರು ವಿಧ್ಯಾರ್ಥಿಗಳು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ…