ಸಣ್ಣ ಗೃಹ ಉದ್ದಿಮೆದಾರರ ಬೆನ್ನು ತಟ್ಟಿದ ಸಚಿವರು..
ಆರ್ಸಿಬಿ ಬ್ರಾಂಡ್ ಚುನಮುರಿಗೆ ಮನಸೋತ ಸಚಿವ ಸತೀಶ್ ಜಾರಕಿಹೊಳಿ..
ಚಿಗಳಿ ಗಿರೀಶ ಅವರ ಉತ್ಪನ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ..
ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ನಗರದ ಜನಪ್ರಿಯ ಗ್ರಾಮೀಣ ಸೊಗಡಿನ ಚಿಗಳಿ ಉತ್ಪನ್ನದ ಉತ್ಪಾದಕರಾದ ಗಿರೀಶ್ ಅವರು ತಮ್ಮ ಉದ್ದಿಮೆಯಿಂದ ಆರ್ಸಿಬಿ ಎಂಬ ಹೊಸ ಬಡಂಗ ಪಾಕೆಟಗಳನ್ನು ಮಾರುಕಟ್ಟೆಗೆ ತಂದಿದ್ದು, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೊಸ ಬ್ರಾಂಡಿಗೆ ಮೆಚ್ಚುಗೆ ಸೂಚಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಬೆಳಗಾವಿ ಮತ್ತು ಕೆಪೇಕೆ ಲಿಮಿಟೆಡ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ “ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯ” ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪ್ರದರ್ಶನಕ್ಕೆ ಇಟ್ಟ ಸಣ್ಣ ಉದ್ದಿಮೆದಾರರ ಉತ್ಪನ್ನಗಳನ್ನು ವೀಕ್ಷಣೆ ಮಾಡಿದರು.
ಜಿಲ್ಲೆಯ ಗೃಹೋಪಯೋಗಿ ಸಣ್ಣ ಉದ್ದಿಮೆದಾರರ ಉತ್ಪನ್ನಗಳನ್ನು ವೀಕ್ಷಣೆ ಮಾಡಿ, ಅವರೊಂದಿಗೆ ಸಂವಾದ ಮಾಡಿದ ಸಚಿವರು, ವಿವಿಧ ಉತ್ಪನ್ನಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿ, ಉದ್ದಿಮೆದಾರರಿಗೆ ಪ್ರೋತ್ಸಾಹಕ ನುಡಿಗಳನ್ನು ಆಡಿದ್ದಾರೆ. ಈ ವೇಳೆ ಬೈಲಹೊಂಗಲದ ಚಿಗಳಿ ಉತ್ಪಾದಕ ಗಿರೀಶ್ ಅವರು ಉತ್ಪಾದಿಸಿದ ಹೊಸ ಉತ್ಪನ್ನವಾದ “ಆರ್ಸಿಬಿ ಚುನಮೂರಿ ಪಾಕೆಟನ” ಗುಣವಿಶೇಷತೆ ಬಗ್ಗೆ ತಿಳಿದುಕೊಂಡು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ.