ಸತೀಶ್ ಜಾರಕಿಹೊಳಿಯವರ ವನ್ಯಸಂಕೂಲ ಕಾಳಜಿಗೆ ಹಸಿರುಯೋಧರ ಸಂತಸ…

ಬೆಳಗಾವಿಯ ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಮತ್ತಷ್ಟು ಮೆರಗು..

ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಗೆ ಚಾಲನೆ..

ಸತೀಶ್ ಜಾರಕಿಹೊಳಿಯವರ ವನ್ಯಸಂಕೂಲ ಕಾಳಜಿಗೆ ಹಸಿರುಯೋಧರ ಸಂತಸ..

ಬೆಳಗಾವಿ : ನಗರಕ್ಕೆ ಸಮೀಪದಲ್ಲಿ ಭೂತರಾಮನಹಟ್ಟಿ ಗ್ರಾಮದ ಹತ್ತಿರ ಇರುವ, ಬೆಳಗಾವಿ ಅರಣ್ಯ ಇಲಾಖೆಯ, ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯವು ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರವಾಸಿಗರನ್ನು ಸೆಳೆಯುವ ಸುಂದರ ತಾಣವಾಗಿದೆ..

ಒಟ್ಟು 84 ಎಕರೆ ವಿಸ್ತಾರ ಇರುವ ಈ ಮೃಗಾಲಯವು 1989ರಲ್ಲಿ ಪ್ರಾರಂಭವಾಗಿದ್ದು, 2018ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯ ಎಂದು ಹೆಸರು ಪಡೆದಿದೆ, ಪರಿಸರ, ವನ್ಯಪ್ರೆಮಿ, ವನವಿಹಾರಿಗಳು ಇಲ್ಲಿ ಆಗಮಿಸುತ್ತಿದ್ದು ದಿನದಿಂದ ದಿನಕ್ಕೆ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಲೇ ಇದೆ..

ಈಗಾಗಲೇ ಹಲವಾರು ಪ್ರಾಣಿ, ಪಕ್ಷಿ, ಗಿಡಮರ, ವನ್ಯಸಂಕೂಲದಿಂದ ಚೈತನ್ಯಮಯವಾಗಿರುವ ಈ ಕಿರುಮೃಗಾಲಯದ ಮೆರಗನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು, ಜಿಲ್ಲಾ ಉಸ್ತುವಾರಿಗಳು, ಲೋಕೋಪಯೋಗಿ ಸಚಿವರು ಹಾಗೂ ವನ್ಯ ಪ್ರೇಮಿಗಳಾದ ಸತೀಶ್ ಜಾರಕಿಹೊಳಿ ಅವರು ತಮ್ಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿ, ಮೃಗಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಮಾಡಿಸಿದ್ದಾರೆ..

ಸುಮಾರು 3 ಕೋಟಿಯ ಕಾಮಗಾರಿಗೆ ಚಾಲನೆ ನೀಡಿದ ಸಚಿವರು, ಈಗಾಗಲೇ ಇಡೀ ಉತ್ತರ ಕರ್ನಾಟಕದಲ್ಲಿ ಹೆಸರುವಾಸಿಯಾದ ನಮ್ಮ ಬೆಳಗಾವಿ ಕಿರು ಮೃಗಾಲಯ ಮತ್ತಷ್ಟು ಅಭಿವೃದ್ದಿ ಆಗಬೇಕು, ಬರುವಂತ ಪ್ರವಾಸಿಗರಿಗೆ ಎಲ್ಲ ರೀತಿಯ ಉತ್ತಮ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ, ಅವಶ್ಯಕತೆ ಇದ್ದರೆ ಇನ್ನೂ ಹೆಚ್ಚಿನ ಕೆಲಸ ಮಾಡಿಸಿ, ಮಾದರಿ ಮೃಗಾಲಯ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ..

ಮಾರ್ಚ ಕೊನೆಯ ವಾರದಿಂದ ಕಾರ್ಯ ಪ್ರಾರಂಭವಾಗಿ, ಸೆಪ್ಟೆಂಬರ್ ಹೊತ್ತಿಗೆ ಎಲ್ಲಾ ಕಾಮಗಾರಿ ಪೂರ್ತಿಯಾಗುವ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಹಾಕಿಕೊಂಡಿದ್ದು, ಪ್ರಮುಖವಾಗಿ ಆಡಳಿತ ವಿಭಾಗ, ಉಪಹಾರ ಗೃಹ, ವಸ್ತು ಸಂಗ್ರಹಾಲಯ, ಮಾಹಿತಿ ಕೇಂದ್ರ, ಸಭಾ ಭವನ, ಪ್ರವಾಸಿಗರಿಗಾಗಿ ತೆರೆದ ರಂಗಮಂದಿರ ಸಭಾಂಗಣ ನಿರ್ಮಿಸುವ ಮಾಹಿತಿ ಇದ್ದು, ಎದುರು ಬದರು ನಿರ್ಮಿಸುವ ಎರಡು ಕಟ್ಟಡಗಳಲ್ಲಿ ಈ ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ..

ಈ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಬೆಳಗಾವಿಯ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯ ಅಧಿಕಾರಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಹಾಗೂ ಸಚಿವರ ಬೆಂಬಲಿಗರಾದ ಸಿದ್ದು ಸುಣಗಾರ, ಬಾಳೇಶ ದಾಸನಟ್ಟಿ, ಮತ್ತಿತರ ಮುಖಂಡರು ಹಾಗೂ ವನ್ಯಪ್ರಿಯರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..