ಸಮಯಪ್ರಜ್ಞೆ ಮೆರೆದು ಎಂಟು ಜನರ ಜೀವ ಕಾಪಾಡಿದ ಸಾಲಹಳ್ಳಿ (ಕಟಕೊಳ) 108 ಆಂಬುಲೆನ್ಸ್ ಸಿಬ್ಬಂದಿ..

ಸುಕ್ಷೇತ್ರ ಗೊಡಚಿ ಸಮೀಪ 15 ಜನ ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಅಪಘಾತ..

ಸಮಯಪ್ರಜ್ಞೆ ಮೆರೆದು ಎಂಟು ಜನರ ಜೀವ ಕಾಪಾಡಿದ ಸಾಲಹಳ್ಳಿ (ಕಟಕೊಳ) 108 ಆಂಬುಲೆನ್ಸ್ ಸಿಬ್ಬಂದಿ..

ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೊಳ ಪ್ರಾಥಮಿಕ ಆರೋಗ್ಯ ಕೇಂದ್ರದ 108 ಆಂಬುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಯಿಂದ ಎಂಟು ಜನ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸದೇ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಂತಾಗಿದೆ..

ಇಡೀ ರಾಜ್ಯದಲ್ಲಿಯೇ ಆರೋಗ್ಯ ಇಲಾಖೆಯಿಂದ ವತಿಯಿಂದ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ವಾಹನಗಳ ಸಿಬ್ಬಂದಿಯ ಸೇವೆಯು ಅತ್ಯಂತ ಶ್ಲಾಘನೀಯವಾಗಿದ್ದು, ಅನೇಕ ಸಮಯದಲ್ಲಿ ಅದು ಸಾಬೀತಾಗಿ, ಸಾವಿರಾರು ಜೀವಗಳನ್ನು ಬದುಕಿಸಿದ ಶ್ರೇಯಸ್ಸು ಆ ಸಿಬ್ಬಂದಿಗಳಿಗೆ ಸಲ್ಲುತ್ತದೆ..

ಅದೇ ರೀತಿ, ನಿನ್ನೆ ರಾಮದುರ್ಗ ತಾಲೂಕಿನ ಸುಕ್ಷೇತ್ರ ಗೋಡಚಿಯ ಜಾತ್ರೆ ಮುಗಿಸಿಕೊಂಡು ತಮ್ಮೂರಾದ ಸತ್ತಿಗೇರಿಗೆ ಪ್ರಯಾಣಿಸುತ್ತಿದ್ದ ಸುಮಾರು 15 ರಿಂದ 20 ಜನ ಪ್ರಯಾಣಿಕರು ಇದ್ದಂತ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿದ್ದು ಸುಮಾರು ಎಂಟು ಜನರಿಗೆ ಗಂಭೀರ ಗಾಯಗಳಾಗಿದ್ದವು..

ಸುದ್ದಿ ತಿಳಿದ ಸಾಲಹಳ್ಳಿ (ಕಟಕೊಳ) ಪ್ರಾಥಮಿಕ ಆರೋಗ್ಯ ಕೇಂದ್ರದ 108 ಆಂಬುಲೆನ್ಸ್ ವಾಹನವು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಎಂಟು ಪ್ರಯಾಣಿಕರನ್ನು, ಚಿಕಿತ್ಸೆಗಾಗಿ ರಾಮದುರ್ಗ ತಾಲೂಕು ಆಸ್ಪತ್ರೆಗೆ ಸಾಗಿಸಿ, ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಲಭಿಸುವಂತೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..

108 ವಾಹನದಲ್ಲಿ ಶುಶ್ರೂಷಾ ಅಧಿಕಾರಿ ಬಸವರಾಜ ಗೋಕಾಕ ಹಾಗೂ ವಾಹನ ಚಾಲಕ ಬಸವರಾಜ್ ಗಾಣಿಗೇರ ಅವರ ಕರ್ತವ್ಯಪ್ರಜ್ಞೆಗೆ ಇಲಾಖೆ ಹಾಗೂ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ..

ವರದಿ ಪ್ರಕಾಶ್ ಕುರಗುಂದ..