ಸಮರ್ಥನಾಡು ದಿನಪತ್ರಿಕೆಯಲ್ಲಿ ಸುದ್ದಿಗೂ ನನಗೂ ಸಂಬಂಧವಿಲ್ಲ..
ಬೆಳಗಾವಿ : ಬುಧವಾರ ದಿನಾಂಕ 30/10/2024ರಂದು “ಸಮರ್ಥನಾಡು” ಎಂಬ ಬೆಳಗಾವಿಯ ದಿನಪತ್ರಿಕೆಯಲ್ಲಿ “ನಕಲಿ ಪತ್ರಕರ್ತರು” ಎಂಬ ಸುದ್ದಿ ಪ್ರಕಟವಾಗಿದ್ದು, ಅದರ ವರದಿಯನ್ನು ಪ್ರಕಾಶ್ ಕುರಗುಂದ ಮಾಡಿರುವರು ಎಂದು ನನ್ನ ಹೆಸರನ್ನು ಹಾಕಲಾಗಿದೆ..
ಆದರೆ ಆ ಸುದ್ದಿಗೂ ನನಗೂ ಯಾವ ಸಂಬಂಧವೂ ಇಲ್ಲಾ, ಸಮರ್ಥನಾಡು ಪತ್ರಿಕೆಗೆ ಈ ಹಿಂದೆ ನಾನು ಯಾವತ್ತೂ ಸುದ್ದಿ ಕಳಸಿಲ್ಲ, ನಾನು ಬೆಳಗಾವಿಯಲ್ಲಿಯೇ ಮಾದ್ಯಮದಲ್ಲಿ ಕೆಲಸ ಮಾಡುತ್ತಿದ್ದು, ನನ್ನದೇ ಆದ ಸಮಾಜಮುಖಿ ವೆಬ್ ನ್ಯೂಸ್ ಹಾಗೂ ವೇನುವಾಹಿನಿ ಎಂಬ ಯೂಟುಬ ಚಾನೆಲ್ ಮೂಲಕ ಸುದ್ದಿ ಹಾಕುತ್ತೇನೆ..
ಸಮರ್ಥನಾಡು ಪತ್ರಿಕೆಯಲ್ಲಿ ಬಂದ ವರದಿ ನನ್ನದಲ್ಲ, ನಾನು ಅಂತಹ ವಿವಾದಾತ್ಮಕ ಸುದ್ದಿ ಮಾಡುವ ವರದಿಗರನಲ್ಲ, ಸಂಪಾದಕರು ಹಾಕಿದ ಸುದ್ದಿಗೆ ನಾನು ಹೊಣೆಗಾರನಲ್ಲ, ಅದಕ್ಕೆ ಅವರು ನನ್ನ ಹೆಸರು ಬಳಸಿದ್ದು ಅವರು ಮಾಡಿದ ದೊಡ್ಡ ತಪ್ಪು..
ಪ್ರಕಾಶ ಬಸಪ್ಪ ಕುರಗುಂದ..