ಸಮಸ್ತ ಬ್ರಾಹ್ಮಣರ ವಧು ವರ ಸಮಾವೇಶ.
ಬೆಳಗಾವಿ : ಬರುವ ಜೂನ್ 15ರ ರವಿವಾರದಂದು ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿ ಇರುವ ಶ್ರೀ ಸತ್ಯ ಪ್ರಮೋದ ಸಭಾಗೃಹದಲ್ಲಿ ಬೆಳಿಗ್ಗೆ 8ಗಂಟೆಯಿಂದ ಸಾಯಂಕಾಲ 6ಗಂಟೆ ವರೆಗೆ ಸಮಸ್ತ ಬ್ರಾಹ್ಮಣರ ವಧು ವರ ಸಮಾವೇಶವನ್ನು ಶ್ರೀ ಸಪ್ತಗಿರಿ ಸೇವಾ ಪ್ರತಿಷ್ಟಾನ ಬೆಳಗಾವಿ ಮತ್ತು ವಿಶ್ವ ಮಧ್ವ ಮಹಾ ಪರಿಷತ್ ಬೆಳಗಾವಿ ಇವರ ಸಂಯುಕ್ತ ಆಶಯದಲ್ಲಿ ಆಯೋಜಿಸಲಾಗಿದೆ.
ತಮಗೆಲ್ಲರಿಗೂ ತಿಳಿದಂತೆ ವಿವಾಹವು ಹಿಂದೂ ಕುಟುಂಬ ವ್ಯವಸ್ಥೆಯ ಮೌಲ್ಯಧಾರಿತವೆಂದು ಪರಿಗಣಿಸಲಾಗಿದೆ. ಈ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸದಾ ಈ ಸಂಸ್ಥೆಗಳು ಮುಂಚೂಣಿಯಲ್ಲಿ ಇರುತ್ತವೆ. ಈ ವಧು ವರರ ಸಮಾವೇಶ ಕಾರ್ಯಕ್ರಮವನ್ನು ಕಳೆದ ಬಾರಿ ಆಯೋಜಿಸಿದಾಗ ಸುಮಾರು 300 ವಧುಗಳ ಹಾಗೂ 450 ವರಗಳ ಹೆಸರುಗಳನ್ನೂ ನೋಂದಾಯಿಸಲಾಗಿತ್ತು ಅದರಲ್ಲಿ ಸುಮಾರು 25 ಮದುವೆಗಳು ಯಶಸ್ವಿಯಾಗಿ ನಡೆದಿವೆ ಹಾಗಾಗಿ ಈ ಬಾರಿಯು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಧು ವರರು ಒಟ್ಟಾಗಿ ಸೇರಿ ಜೀವಮಾನದ ವೈವಾಹಿಕ ಬಂಧನವನ್ನು ಸ್ಥಾಪೀಸುವ ಕಡೆಗೆ ಈ ವೇದಿಕೆ ಮುಖಾಂತರ ವಿನಂತಿಸುತ್ತೇವೆ.

ಇಂದು ನಡೆದ ಪತ್ರಿಕಾ ಸಭೆಯಲ್ಲಿ ಸಪ್ತಗಿರಿ ಸೇವಾ ಪ್ರತಿಷ್ಠಾನ ವತಿಯಿಂದ ಅಧ್ಯಕ್ಷರಾದ ವಿಜಯೇಂದ್ರ ಆಚಾರ್ಯ ಜೋಶಿ, ವಿಶ್ವಮಧ್ವ ಮಹಾಪರಿಷತ್ತಿನ ಕಾರ್ಯದರ್ಶಿಗಳು, ನಗರಸೇವಕರು ಆದ ಜಯತೀರ್ಥ ಸವದತ್ತಿ ಮತ್ತು ಸಂಘಟನೆಯ ಪದಾಧಿಕಾರಿಗಳಾದ ಶ್ರೀದೇವಿ ಕುಲಕರ್ಣಿ ಜ್ಯೋತಿ ಶೆಲ್ಲಿಕೇರಿ
ಶ್ರೀಧರ್ ಹಲಗತ್ತಿ ರಾಘವೇಂದ್ರ ಕಟ್ಟಿ ಇವರು ಉಪಸ್ಥಿತರಿದ್ದು ವಧು-ವರ ಸಮಾವೇಶದ ಸಮಸ್ತ ಮಾಹಿತಿಯನ್ನು ನೀಡಿ ವಧು ವರರ ಪಾಲಕರು ತಮ್ಮ ಮಕ್ಕಳ ಜೊತೆಗೋಡಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಮುಕ್ತ ಮನಸ್ಸಿನಿಂದ ಸಮಾಲೋಚನೆ ಮಾಡಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ರಾಘವೇಂದ್ರ ಕಟ್ಟಿ 7353351159
ಶ್ರೀಧರ ಹಲಗತ್ತಿ 7338233598
ಶ್ರೀದೇವಿ ಕುಲಕರ್ಣಿ 9480677976
ಜ್ಯೋತಿ ಶೆಳ್ಳಿಕೇರಿ 9845249632.
ವರದಿ ಪ್ರಕಾಶ್ ಬಸಪ್ಪ ಕುರಗುಂದ..