ಸಮಾಜಘಾತುಕ ಕ್ರಿಮಿಗಳನ್ನು ಕಟ್ಟಿಹಾಕಿದ ಪೊಲೀಸ್ ಸಿಬ್ಬಂದಿಗಳಿಗೆ ಅಭಿನಂದನಾ ಗೌರವ..
ಬೆಳಗಾವಿ ಮಿಡಟೌನ್ ಲಯನ್ಸ್ ಕ್ಲಬ್ ಕಡೆಯಿಂದ ಗೌರವೀಯ ಸನ್ಮಾನ..
ಬೆಳಗಾವಿ : ಶುಕ್ರವಾರ ದಿನಾಂಕ 13/09/2024 ರಂದು ಬೆಳಗಾವಿಯ ಮಿಡಟೌನ್ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿಕೊಂಡು, ನಗರದ ತಿಲಕವಾಡಿಯ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಪರಶುರಾಮ ಪೂಜೇರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿದ್ದಾರೆ..
24/08/2024ರಂದು ಆರ್ ಪಿಡಿ ಕಾಲೇಜಿನ ಹಿಂಬಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿ, ಬಂದಿಸಿ, ಕಸ್ಟಡಿಗೆ ತಗೆದುಕೊಂಡು, ಪ್ರಕರಣ ದಾಖಲು ಮಾಡಿಕೊಂಡಿದ್ದು, ಸಾಮಾಜಿಕ ಕಳಕಳಿಯ ಅಡಿಯಲ್ಲಿ, ಕರ್ತವ್ಯಪ್ರಜ್ಞೆ ಮೆರೆದ ಹಿನ್ನೆಲೆಯಲ್ಲಿ ತಿಲಕವಾಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿಗಳಿಗೆ ಗೌರವದ ಸನ್ಮಾನವನ್ನು ನೆರವೇರಿಸಿದ್ದಾರೆ..

ಈ ಸತ್ಕಾರದ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸದಸ್ಯರುಗಳಾದ ವಿ, ಎಸ್, ದೇಶಪಾಂಡೆ, ಎಚ್ ವಾಯ್ ಹನ್ನೂರ, ಪ್ರಶಾಂತ ರಾವ್, ಪ್ರಕಾಶ್ ಹೆಗನಾಯಕ, ಸತೀಶ ಪಾಟೀಲ್, ನಾಗರಾಜ ಮರೆನ್ನವರ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..