ಸಮಾಜಮುಖಿ ಗುಣ ಹಾಗೂ ತಮ್ಮ ವ್ಯಕ್ತಿತ್ವದಿಂದ ಜನನಾಯಕನಾದ ಚಂದ್ರು ಖನಗಾವಿ..
ಹಣ, ಅಧಿಕಾರದ ಬಲವಿಲ್ಲದೇ, ಇಡೀ ಜನಸಾಗರದಿಂದ ಜೈ ಎನಿಸಿಕೊಂಡ ಹೃದಯವಂತ..
ನನ್ನ ಜನರ ಸ್ನೇಹ, ಪ್ರೀತಿಗೆ, ಸದಾ ಅವರ ಸೇವಕನಾಗಿರುವೆ..
ಚಂದ್ರು ಬಸಪ್ಪ ಖನಗಾವಿ ಅಭಿಮತ..
ಬೆಳಗಾವಿ : ನಗರದ ಸಮೀಪ ಇರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾಲ್ ಅಂಕಲಗಿಯ ರಾಯಪ್ಪ ದೇವಸ್ಥಾನದ ಹತ್ತಿರ, ಮಂಗಳವಾರ ಸಂಜೆ ಒಂದು ಜಾತ್ರೆಯ ಸಂಭ್ರಮದ ವಾತಾವರಣವೇ ನಿರ್ಮಾಣವಾಗಿತ್ತು..
ವಿಶೇಷವೆಂದರೆ ಗ್ರಾಮದ ಜನರೆಲ್ಲರೂ ಸೇರಿ, ಒಬ್ಬ ಸಾಮಾನ್ಯರಲ್ಲಿ ಅಸಾಮಾನ್ಯನಾದ, ಇಡೀ ತಾಲೂಕಿನ ಜನರೇ ಮೆಚ್ಚಿ ಕೊಂಡಾಡುವಂತಹ ವ್ಯಕ್ತಿತ್ವದ, ಅಜಾತಶತ್ರು, ಜನಪರವಾದ ಕಾರ್ಯ ಮಾಡುತ್ತಾ, ಜನನಾಯಕನೆಂದೆ ಜನಮಾನಸದಲ್ಲಿ ನೆಲೆ ನಿಂತಿರುವ, ಬಡಾಲ್ ಅಂಕಲಗಿಯ ಸುಪುತ್ರ ಚಂದ್ರು ಬಸಪ್ಪ ಖನಗಾವಿ ಎಂಬ ಆದರ್ಶ ವ್ಯಕ್ತಿಯ 50 ನೇಯ ವರ್ಷದ ಜನ್ಮದಿನವನ್ನು ಅತೀ ಅರ್ಥಪೂರ್ಣವಾಗಿ ಆಚರಿಸಿದ್ದೇ , ಊರಿನಲ್ಲಿ ಒಂದು ಹಬ್ಬದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿತ್ತು..

ಚಂದ್ರು ಬಸಪ್ಪ ಖನಗಾವಿ ವೃತ್ತಿಪರವಾಗಿ ಇವರು ಅಂಗಡಿಯಲ್ಲಿ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿ, ಆದರೆ ಜನರ, ಸಮಾಜದ ಕೆಲಸ ಬಂದಾಗ ಅವರು ಮಾಡಿದ ಕಾರ್ಯಗಳ ಪರಿಣಾಮವಾಗಿ ಇಂದು ಅವರೊಬ್ಬ ಜನನಾಯಕರಾಗಿ ಜನಪ್ರಿಯರಾಗಿದ್ದಾರೆ..
ಹಣ, ಅಧಿಕಾರ ಇದ್ದು, ಹಣ ಕೊಟ್ಟು ಕರೆಸಿದರೂ, ಜನ ಸೇರದ ಈ ಪರಿಸ್ಥಿತಿಯಲ್ಲಿ, ಸ್ವಂತ ಊರಲ್ಲಿ ಅಷ್ಟೇ ಅಲ್ಲದೇ ದೂರದ ಊರಿಂದ ಜನರು ಬಂದು ಶುಭಾಶಯ ಕೊರುತ್ತಿರುವದು ಈ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಅವರ ಸ್ನೇಹ, ಪ್ರೀತಿಗೆ ನಿದರ್ಶನವಾಗಿತ್ತು…

ಯಾವುದೇ ವಯಸ್ಸಿನ, ಜಾತಿ, ಮತದ, ಪಕ್ಷದ ಬೇಧಭಾವ ಇಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಶುಭಾಶಯ ತಿಳಿಸಿ ಹರಸಿರುವದು ಚಂದ್ರು ಅವರ ಪ್ರಭಾವ ಎಂತದು ಎಂದು ತೋರಿಸುತ್ತದೆ, ಬಂದಂತ ಎಲ್ಲಾ ಜನರಿಗೂ ಉತ್ತಮವಾದ ವ್ಯವಸ್ಥೆ ಮಾಡಿ, ಆದರತೆಯಿಂದ ನೋಡಿಕೊಂಡಿದ್ದು ಚಂದ್ರು ಮತ್ತು ಅವರ ತಂಡ ಹಿರಿಮೆಯಾಗಿತ್ತು..

ಜನ್ಮ ದಿನದ ಶುಭಾಶಯ ತಿಳಿಸಲು ಬಂದ ಕಿರಿಯರು, ಹಿರಿಯರು, ಗಣ್ಯರು ತಮ್ಮ ಶುಭಾಶಯ ತಿಳಿಸಿ, ಚಂದ್ರು ಅವರು ಜನ ಮೆಚ್ಚಿದ ನಾಯಕ, ಅವರು ಇನ್ನು ಸಮಾಜಮುಖಿ ಕಾರ್ಯ ಮಾಡುತ್ತಾ, ಹೆಸರು, ಕೀರ್ತಿ, ಸ್ಥಾನಮಾನ, ಆಯುಷ್ಯ, ಅದೃಷ್ಟ, ಎಲ್ಲವೂ ಮತ್ತಷ್ಟು ದೊರಕಿ ಸದಾ ಜನಸೇವೆ ಮಾಡುತ್ತಾ ನೂರು ಕಾಲ ಬಾಳಲಿ ಎಂದು ತಮ್ಮ ಮಾತುಗಳಲ್ಲಿ ಹರಸಿದರು…

ಈ ವಿಶೇಷ ಜನ್ಮ ದಿನದ ಸಂದರ್ಭದಲ್ಲಿ ಪಕ್ಷಾತೀತವಾಗಿ ರಾಜಕೀಯ ಪದಾಧಿಕಾರಿಗಳು, ಊರಿನ ಪ್ರಮುಖ ಗಣ್ಯರು, ಯುವಸಮೂಹ, ಸ್ನೇಹಿತರು, ಹಿತೈಷಿಗಳು, ಸಾರ್ವಜನಿಕರು ಹಾಗೂ ಚಿಣ್ಣರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..