ಸಮಾಜಮುಖಿ ವೆಬ್ಸೈಟ್ ಸುದ್ದಿಯಿಂದ ಸ್ಪಷ್ಟೀಕರಣ..

ಸಮಾಜಮುಖಿ ವೆಬ್ಸೈಟ್ ಸುದ್ದಿಯಿಂದ ಸ್ಪಷ್ಟೀಕರಣ..

ಬೆಳಗಾವಿ : ಮಂಗಳವಾರ ದಿನಾಂಕ 05/11/2024ರಂದು ಜಿಲ್ಲಾ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಸತಿ ನಿಲಯಗಳ ನಿಲಯಪಾಲಕರ ಸಭೆಯನ್ನು ಕರೆಯಲಾಗಿತ್ತು..

ಸಭೆಯ ಮುಗಿದ ನಂತರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒಂದು ಮನವಿ (ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯ ಕುರಿತಾಗಿ) ನೀಡಿದ್ದರು.

ನಂತರ ಶನಿವಾರ ದಿನಾಂಕ 09/11/2024ರಂದು ನಮ್ಮ ಸಮಾಜಮುಖಿ ನಿವ್ಸ್ ವೆಬ್ಸೈಟನಲ್ಲಿ ಮನವಿ ನೀಡಿದ ಕುರಿತಾಗಿ ಸುದ್ದಿಯನ್ನು ಹಾಕಲಾಗಿತ್ತು, ಸುದ್ದಿಯಲ್ಲಿ ಸಚಿವರಿಗೆ ಮನವಿ ನೀಡಿದ ಫೋಟೋ ಕೂಡಾ ಹಾಕಲಾಗಿತ್ತು, ಆ ಫೋಟೋದಲ್ಲಿ ಬೆಳಗಾವಿಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಕಾಣಿಸಿಕೊಂಡಿದ್ದರು..

ಸಚಿವರಿಗೆ ಸನ್ಮಾನ ಆದ ನಂತರ ಸಹಜವಾಗಿ ಅವರು ಅಲ್ಲಿ ನಿಂತಿದ್ದರು, ಅದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿಗಳು ಮನವಿ ನೀಡಿದ್ದರು ಆ ವೇಳೆ ಪೋಟೋವನ್ನು ತೆಗೆಯಲಾಗಿತ್ತು, ಆದ್ದರಿಂದ ಸಚಿವರಿಗೆ ಮನವಿ ನೀಡಿದ ವಿಷಯಕ್ಕೂ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಫೋಟೋದಲ್ಲಿ ಇರುವುದಕ್ಕೂ ಯಾವುದೇ ಸಂಬಂಧ ಇಲ್ಲಾ.

ಹಿಂದುಳಿದ ವರ್ಗಗಳ ಇಲಾಖೆಯ ಸಮಸ್ಯೆಗೂ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೂ ಸಂಬಂಧವಿಲ್ಲ, ಸಚಿವರೊಂದಿಗೆ ಅವರು ನಿಂತಿರುವ ಕಾರಣಕ್ಕೆ ನಾವು ಮಾಡಿದ ಸುದ್ದಿಯಲ್ಲಿ ಅವರ ಫೋಟೋ ಕೂಡ ಬಂದಿದೆ, ಆದರೆ ಸಚಿವರಿಗೆ ನೀಡಿದ ಮನವಿಗೂ ಸಮಾಜ ಕಲ್ಯಾಣ ಇಲಾಖೆಯ ಜೆಡಿ ಅವರಿಗೂ ಸಂಬಂಧವಿಲ್ಲ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..