ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸರ್ಕಾರಿ ಸಿಬ್ಬಂದಿಯ ಕೊರತೆ.
ನಿರಾಶ್ರಿತರ ಕೇಂದ್ರಕ್ಕೆ ಬೇಕಾಗಿದೆ ದಕ್ಷ ಅಧಿಕಾರಿಯ ಆಶ್ರಯ..
ಹೊರಗುತ್ತಿಗೆ ನೌಕರರೇ ಇಲ್ಲಿ ಸಾರ್ವಭೌಮರು..
ಬೆಳಗಾವಿ : ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ಇರುವ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರ ಇಲಾಖೆಯ ಸ್ಥಳೀಯ ಸರ್ಕಾರಿ ಸಿಬ್ಬಂದಿಗಳು ಇಲ್ಲದೇ, ಗುತ್ತಿಗೆ ನೌಕರರ ಕೈಯಲ್ಲಿ ಸಿಕ್ಕು ಅವ್ಯವಸ್ಥೆಯ ಆಗರವಾಗಿದೆಯೇ ಎಂಬ ಅನುಮಾನ ಉಂಟಾಗಿದೆ.
ಹೌದು ಸರ್ಕಾರದ ಕಳಕಳಿಯ ಯೋಜನೆಯಲ್ಲಿ ಒಂದಾದ ನಿರಾಶ್ರಿತರ ಪರಿಹಾರ ಕೇಂದ್ರವು ಸ್ಥಳೀಯ ಭಿಕ್ಷುಕರ ಹಾಗೂ ಆಶ್ರಯ ಇಲ್ಲದವರಿಗೆ ಆಶ್ರಯ ನೀಡಿ ಉತ್ತಮ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಪ್ರತಿ ತಿಂಗಳು ಕನಿಷ್ಠ ಐದಾರು ಲಕ್ಷ ರೂಪಾಯಿಗಳನ್ನು ವ್ಯಯ ಮಾಡುತ್ತಿರುವ ಮಾಹಿತಿ ಇದ್ದು, ಬೆಳಗಾವಿಯಲ್ಲಿ ಈ ನಿರಾಶ್ರಿತರ ಪರಿಹಾರ ಕೇಂದ್ರ ಸರಿಯಾಗಿ ಕಾರ್ಯನಿರತವಾಗಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ..
ಹದಿನಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಇರುವ ಈ ನಿರಾಶ್ರಿತರ ಕೇಂದ್ರ ಉತ್ತಮವಾದ ಕಟ್ಟಡವನ್ನು ಒಳಗೊಂಡಿದ್ದು, ಸುಮಾರು 16 ಜನ ಹೊರಗುತ್ತಿಗೆ ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇಲಾಖೆಯ ಸರ್ಕಾರಿ ಸಿಬ್ಬಂದಿ ಎಂದು ಕೇವಲ ಒಬ್ಬರೇ ಇದ್ದಿದ್ದು, ಅವರು ಕೂಡಾ ಪ್ರಭಾರಿಯಾಗಿದ್ದು, ಬೇರೆ (ಧಾರವಾಡ) ಜಿಲ್ಲೆಯಿಂದ ವಾರಕ್ಕೆ ಒಮ್ಮೆ ಬಂದು ಹೋಗುವ ಇಲಾಖೆಯ ಒಬ್ಬ ಮಹಿಳಾ ಸಿಬ್ಬಂದಿಯವರು ಈ ಕೇಂದ್ರದ ಅಧೀಕ್ಷಕಿಯಾಗಿ ಕಾರ್ಯ ನಿರ್ವಹಿಸುವರು.
ಸಮಾಜ ಕಲ್ಯಾಣ ಇಲಾಖೆಯ ಅತೀ ಮುಖ್ಯ ಕಾಳಜಿಯ ಈ ಕೇಂದ್ರದಲ್ಲಿ ಜವಾಬ್ದಾರಿಯುತವಾಗಿ ನಿಂತು ಕೆಲಸ ಮಾಡಲು ಇಲಾಖೆಯ ಸ್ಥಳೀಯ ಸರ್ಕಾರಿ ಸಿಬ್ಬಂದಿಗಳನ್ನು ಇಲ್ಲಿ ಯಾಕೆ ನೇಮಿಸುತ್ತಿಲ್ಲ? ನೂರು ಕಿಮೀ ದೂರದ ಮಹಿಳಾ ಸಿಬ್ಬಂದಿಯನ್ನು ಅದು ಪ್ರಭಾರಿ ಆಗಿ ನೇಮಿಸಿದರೆ, ನೂರಾರು ನಿರಾಶ್ರಿತರು ವಾಸವಿರುವ ಈ ಕೇಂದ್ರ ಹೇಗೆ ಸುವ್ಯವಸ್ಥಿತವಾಗಿರುತ್ತದೆ? 16 ಜನ ಹೊರಗುತ್ತಿಗೆ ಸಿಬ್ಬಂದಿಗಳಿಂದ ಸರಿಯಾಗಿ ಕೆಲಸ ತಗೆಯಲಿಕ್ಕಾದರೂ, ನಿರಂತರವಾಗಿ ಅಲ್ಲಿ ಇರುವ ಒಬ್ಬ ಸ್ಥಳೀಯ ಅಧಿಕಾರಿ ಬೇಡವೇ? ಇದ್ದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕಿಲ್ಲವೇ?
ಪ್ರಭಾರಿ ಅಧೀಕ್ಷಕಿಯವರು ಹಾಗೂ ಹೊರ ಗುತ್ತಿಗೆಯ 16ಜನ ನೌಕರರು ಇಂದು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆಯೇ ? ಹಾಗಿದ್ದರೆ ಪ್ರತಿದಿನ ನಗರದ ಪ್ರಮುಖ ರಸ್ತೆಗಳಲ್ಲಿ, ಗುಡಿ ಗುಂಡಾರಗಳ ಮುಂದೆ, ಟ್ರಾಪಿಕ್ ಸಿಗ್ನಲ್ ಬಸ್ ರೇಲ್ವೆ ನಿಲ್ದಾಣಗಳಲ್ಲಿ ಅನೇಕ ಭಿಕ್ಷುಕರು ಇರುತ್ತಾರೆ ಅಂತವರನ್ನು ನಿರಾಶ್ರಿತರ ಕೇಂದ್ರಕ್ಕೆ ಹಾಕುವಂತ ಕಾರ್ಯ ಮಾಡಿದ್ದಾರಾ? ಸಾರ್ವಜನಿಕರ ತೆರಿಗೆ ಹಣದಿಂದ ತಿಂಗಳಿಗೆ ಸುಮಾರು ಐದಾರು ಲಕ್ಷ ಮಾಡುವ ಖರ್ಚು ಸದ್ಬಳಕೆ ಆಗುತ್ತಿದೆಯಾ? ಮಾಧ್ಯಮದವರು ಕೇಂದ್ರದ ಒಳಗೆ ಬರಬೇಕೆಂದರೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಅನುಮತಿ ಚೀಟಿ ಪಡೆದಿರಬೇಕು ಎಂದು ಅಲ್ಲಿಯ ಹೊರಗುತ್ತಿಗೆ ಸಿಬ್ಬಂದಿ ರಫೀಕ ಎಂಬಾತ ಹೇಳುತ್ತಿರುವದು ಸರಿಯಾ? ಒಂದು ಗಂಟೆ ನಿಂತು ವಾಪಸ್ ಬಂದರು ಯಾವುದೇ ಸಿಬ್ಬಂದಿಯ ಸ್ಪಂದನೆ ಇಲ್ಲಾ ಎಂದರೆ, ಅಲ್ಲಿ ಸುವ್ಯವಸ್ಥೆ ಇದೆಯಾ? ಹೊರಗುತ್ತಿಗೆಯವರೇ ಎಲ್ಲಾ ನಡೆಸಿದರೆ ಅದಕ್ಕೆ ಇಲಾಖೆಯ ಹೆಸರೇಕೆ? ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ದಯವಿಟ್ಟು ಗಮನಿಸಿ, ಆಗಬೇಕಾದ ಕಡೆಗಳಲ್ಲಿ ಸ್ವಲ್ಪ ಸುಧಾರಣೆ ತನ್ನಿ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..