ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಬಿಜೆಪಿಯ ಎನ್ ರವಿಕುಮಾರ ಭೇಟಿ..!!!

ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಬಿಜೆಪಿಯ ಎನ್ ರವಿಕುಮಾರ ಭೇಟಿ..!!!

ಮೂಲಭೂತ ಸೌಕರ್ಯ ಪರಿಶೀಲನೆ ಹಾಗೂ ಕುಂದುಕೊರತೆ ಆಲನೆ..!!!

ಬೆಳಗಾವಿ : ಶನಿವಾರ ದಿನಾಂಕ 30/12/2023 ರಂದು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್ ರವಿಕುಮಾರ್ ಅವರು ಬೆಳಗಾವಿಯ ಪ್ರವಾಸದ ಸಂದರ್ಭದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆ ಹಾಗೂ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿದರು.

ಹಾಸ್ಟೇಲಿನಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುತ್ತಾ, ವಸತಿ ನಿಲಯದ ಪ್ರತಿ ವಿಭಾಗಕ್ಕೂ ಬೇಟಿ ನೀಡಿ, ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿದರು..

ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಿ, ವಸತಿ ಕೊಠಡಿಗಳು, ಅಡಿಗೆ ಮನೆ ಸ್ವಚ್ಛದಿಂದ ಇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವರದಿ ಪ್ರಕಾಶ ಕುರಗುಂದ..