ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ..
ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ..
ಬೆಳಗಾವಿ : ಶುಕ್ರವಾರ ದಿನಾಂಕ 03/01/2025ರಂದು ನಗರದ ಎಸ್ಪಿ ಕಚೇರಿ ಎದುರಿನ ಪೊಲೀಸ್ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿವಿಧ ವೃಂಧಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರು ಚಾಲನೆ ನೀಡಿದ್ದಾರೆ.

ಬೆಳಿಗ್ಗೆ ಎಂಟು ಗಂಟೆಗಾಗಲೇ ಇಲಾಖೆಯ ಕ್ರೀಡಾಸಕ್ತರು ಮೈದಾನದಲ್ಲಿ ಹಾಜರಿದ್ದು, ಮೊದಲ ಕ್ರಿಕೆಟ್ ಪಂದ್ಯಕ್ಕೆ ಜಂಟಿ ನಿರ್ದೇಶಕರಾದ ಕನ್ನೊಳ್ಳಿ ಅವರು ಟಾಸ್ ಹಾರಿಸುವ ಮುಖಾಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದು, ಒಂದು ಸುತ್ತಿನ ಬ್ಯಾಟಿಂಗ್ ಕೂಡಾ ಮಾಡಿ ಕ್ರೀಡಾಸಕ್ತರ ಗಮನ ಸೆಳೆದಿದ್ದಾರೆ..

ಇಲಾಖೆಯ ವಿವಿಧ ವೃಂದಗಳ ಅಧಿಕಾರಿ ಹಾಗೂ ನೌಕರರುಗಳಿಗೆ ಕ್ರಿಕೆಟ್, ಶಟಲ್ ಕಾಕ್, (ಥ್ರೋ ಬಾಲ್ ಮಹಿಳೆಯರಿಗೆ ಮಾತ್ರ) ಜಾನಪದ ಗೀತೆ, ಇತರ ಸ್ಪರ್ಧೆಗಳು ಜರುಗಲಿದ್ದು, ವಿಭಾಗೀಯ ಮಟ್ಟದಲ್ಲಿ (ಕ್ರೀಡೆ ಮತ್ತು ಸಾಂಸ್ಕೃತಿಕ) ವಿಜಯಿಯಾದ ಪ್ರಥಮ ಹಾಗೂ ದ್ವಿತೀಯ ತಂಡಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂಬ ಮಾಹಿತಿಯಿದೆ.

ಎರಡರಿಂದ ಮೂರು ದಿನಗಳ ಕಾಲಾವಧಿಯಲ್ಲಿ ಜರುಗುವ ಈ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಚಾಲನೆಯ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಬಸವರಾಜ ಕುರಿಹುಲಿ, ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ವಿವಿಧ ತಾಲೂಕಿನ ಸಹಾಯಕ ನಿರ್ದೇಶಕರು, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..