ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ…

ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ..

👉 ಅಗಸಗೆ ಗೃಹ ಲಕ್ಷ್ಮೀ ಚಾಲನಾ ಯೋಜನೆಯಲ್ಲಿ ಮುದ್ದನ್ನವರ ಕರೆ..

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಷ್ಮೀ ಯೋಜನೆ ಸದುಪಯೋಗ ಪಡಿಸಿಕೊಂಡು ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸದೃಢ ರಾಗಬೇಕು ಎಂದು ಅಗಸಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಅಮೃತ ಮುದ್ದಣ್ಣವರ ಕರೆ ನೀಡಿದರು.

ತಾಲೂಕಿನ ಅಗಸಗೆ ಗ್ರಾಮದ ಕಲ್ಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗೃಹ ಲಕ್ಷ್ಮೀ ಯೋಜನೆ ಯ ಲೈವ್ ವೀಕ್ಷಣಾ ಕಾರ್ಯಕ್ರಮದಲ್ಲಿ ಅವರು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಬಡ ಜನರ ಅನುಕೂಲಕ್ಕಾಗಿ ಚುನಾವಣೆ ಪೂರ್ವದಲ್ಲಿಯೇ ಕೆಲವು ಭರವಸೆಗಳನ್ನು ನೀಡಿತ್ತು. ಅದರಲ್ಲಿ ಗೃಹ ಲಕ್ಷ್ಮೀ ಯೋಜನೆ ಕೂಡ ಒಂದು. ಮಹಿಳೆಯರು ಗೃಹ ಲಕ್ಷ್ಮೀ ಯೋಜನೆ ಹಣವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಿಡಿಓ ಮುಜಾವರ್ ಮಾತನಾಡಿ ಅಗಸಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಲುವೇನಟ್ಟಿ, ಮಾಳೆನಟ್ಟಿ ಹಾಗೂ ಅಗಸಗೆ ಈ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಮಹಿಳೆಯರು ಸರ್ಕಾರ ಜಾರಿ ಮಾಡುತ್ತಿರುವ ಇಂದಿನ ಗೃಹ ಲಕ್ಷ್ಮೀ ಯೋಜನೆ ಲಾಭ ಪಡೆಯಬೇಕು ಎಂದರು.

ಬಿರು ಬಿಸಿಲಿನಲ್ಲೂ ಲೈವ್ ವೀಕ್ಷಿಸಿದ ಮಹಿಳೆಯರು..

ರಾಜ್ಯ ಸರ್ಕಾರ ದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಅದರ ಲೈವ್ ಕಾರ್ಯಕ್ರಮವನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ವೀಕ್ಷಿಸುವ ವ್ಯವಸ್ಥೆಯನ್ನು ರಾಜ್ಯದೆಲ್ಲೆಡೆ ಮಾಡಲಾಗಿತ್ತು. ಅಗಸಗೆಯಲ್ಲಿ ಬಿರು ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು. ಎಪ್ಪತ್ತು ವರ್ಷಕ್ಕೂ ಅಧಿಕ ವಯಸ್ಸಿನ ವೃದ್ಧೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಂದಿಗನೂರು ಪಿಎಚ್ ಸಿ ವೈದ್ಯ ಡಾ. ಹುಸೇನ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶೋಭಾ ಕುರೆನ್ನವರ್, ಸದಸ್ಯರಾದ ಅಪ್ಪಯ್ಯಗೌಡ್ ಪಾಟೀಲ್, ಉಮಾ ಕೋಲಕಾರ, ನಿಂಗವ್ವ ಪಾಟೀಲ್, ಆರೋಗ್ಯ ಇಲಾಖೆ ಸಿಬ್ಬಂದಿ ಸಂಪಗಾವಿ, ಮಂಜುಳಾ ಬಡಿಗೇರ, ಅಶಕರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನಾಡಗೀತೆ ಯೊಂದಿಗೆ ಆರಂಭಿಸಲಾಯಿತು. ಶಿಕ್ಷಕ ಪಾಯನ್ನವರ್ ನಿರೂಪಿಸಿ ವಂದಿಸಿದರು.

ವರದಿ: ಸಂತೋಷ ಮೇತ್ರಿ, ಅಗಸಗೆ, ಸಮಾಜಮುಖಿ ಸುದ್ದಿ..