ಸರ್ಕಾರದ ಹಣದ ದುರ್ಬಳಕೆಯ ಆರೋಪಿತ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲು ಮೀನಾಮೇಷ..
ಮನವಿ ನೀಡಿ, ಧರಣಿ ಕುಳಿತರೂ, ಎಚ್ಚೆತ್ತುಕೊಳ್ಳದ ಜಿಪಂ ಅಧಿಕಾರಿಗಳು..
ಭ್ರಷ್ಟತೆ ಆರೋಪ ಹೊತ್ತಿರುವ ಅಧಿಕಾರಿ ಮೇಲಿನ ಕಾಳಜಿಗೆ ಕಾರಣವೇನು??
ಬೆಳಗಾವಿ : ಡಾ ಬಿ ಆರ್ ಅಂಬೇಡ್ಕರ್ ಶಕ್ತಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಡಿ ಕೋಲಕಾರ ಅವರು ಕಳೆದ ನಾಲ್ಕೈದು ತಿಂಗಳಿನಿಂದ ಬೆಳಗಾವಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ ಗಣೇಶ್ ಕೆ ಎಸ್ ಎಂಬ ಅಧಿಕಾರಿಯ ವಿರುದ್ಧ ಭಾಷ್ಟಾಚಾರದ ಆರೋಪ ಮಾಡಿದ್ದು, ತನಿಖೆಗಾಗಿ ಮನವಿ ನೀಡಿ, ಜಿಪಂ ಎದುರಿಗೆ ಉಪವಾಸ ಧರಣಿ ಕುಳಿತಿದ್ದರೂ, ಇಲ್ಲಿಯವರೆಗೂ, ಜಿಪಂ ಅಧಿಕಾರಿಗಳು ಯಾವುದೇ ವರದಿ ನೀಡದಿರುವುದು ಶೋಚನೀಯ..
ಆರೋಪ ಹೊತ್ತಿರುವ ಅಧಿಕಾರಿ ಗಣೇಶ ಕೆ ಎಸ್ ಎಂಬುವವರು ಸಧ್ಯಕ್ಕೆ ಬೆಳಗಾವಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾಗಿದ್ದು, ಹಿಂದೆ ಖಾನಾಪುರ ತಾಲೂಕಿನ ನಂದಗಡ, ಬೀಡಿ, ಕಸಬಾ ನಂದಗಡ, ಹಾಗೂ ಹೆಬ್ಬಾಳ ಪಂಚಾಯತಿಗಳಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸಿದ್ದು, ಆ ಸಮಯದಲ್ಲಿ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕಾಗಿ, ಅಧಿಕಾರಿಯ ಮೇಲೆ ಶಿಸ್ತಿನ ಕ್ರಮಕ್ಕಾಗಿ ಅಂಬೇಡ್ಕರ ಶಕ್ತಿ ಸಂಘದ ರಾಜ್ಯಾಧ್ಯಕ್ಷರ ಜೊತೆಗೆ ಸಾಮಾಜಿಕ ಕಾರ್ಯಕರ್ತರು ಈ ಹೋರಾಟಕ್ಕೆ ಕೈ ಜೋಡಿಸಿದ್ದರು.

ಆದರೆ ವಿಪರ್ಯಾಸ ಎಂದರೆ, ಇಂತಹ ಭ್ರಷ್ಟತೆಯ ಆರೋಪ ಹೊತ್ತ ಸಿಬ್ಬಂದಿಯ ಮೇಲೆ ಕ್ರಮ ತಗೆದುಕೊಂಡು, ಸರ್ಕಾರದ ಹಣವನ್ನು ರಕ್ಷಿಸಬೇಕಾದ ಜಿಲ್ಲಾ ಪಂಚಾಯತಿಯ ಉನ್ನತ ಅಧಿಕಾರಿಗಳೇ ಇನ್ನೂವರೆಗೂ ಈ ಅವ್ಯವಹಾರದ ಬಗ್ಗೆ ಸಮರ್ಪಕ ತನಿಖೆ ಮಾಡದೇ, ಕ್ರಮ ಜರುಗಿಸಿದೇ ವಿಳಂಬ ಮಾಡುತ್ತಿರುವದು ಹೋರಾಟಗಾರರ ಅಸಮಾಧಾನಕ್ಕೆ ಹಾಗೂ ಸಂಶಯಕ್ಕೆ ಕಾರಣವಾಗಿದೆ.
ವ್ಯವಸ್ಥೆ ಹಾಗೂ ಅಧಿಕಾರಿಗಳ ಮೇಲೆ ನಂಬಿಕೆ ಇಟ್ಟ ಸಾರ್ವಜನಿಕರ ನಂಬಿಕೆ ಉಳಿಸುವಂತಹ ಹಾಗೂ ಒಂದು ವೇಳೆ ಸರ್ಕಾರದ ಹಣ ದುರುಪಯೋಗ ಆಗಿದ್ದಲ್ಲಿ ಅದನ್ನು ಸರ್ಕಾರಕ್ಕೆ ಮರಳಿಸುವಂತಹ ಆದರ್ಶ ಕಾರ್ಯ ಮಾಡಿದ್ದಲ್ಲಿ, “ಕಾಯಕವೇ ಕೈಲಾಸ” ಎನ್ನುವ ಮಾಹನ್ ಸಾಧನೆಗೆ ಜಿಪಂ ಅಧಿಕಾರಿಗಳು ಸಾಕ್ಷಿಯಾಗುವರು.

ಇದರ ಮಧ್ಯ ಈ ಅವ್ಯವಹಾರದ ವಿರುದ್ಧ ಹೋರಾಟ ಮಾಡುವವರ ಮೇಲೆ ಒತ್ತಡ ತರುವ, ಹತ್ತಿಕ್ಕುವ ತೆರೆಮರೆಯ ಪ್ರಯತ್ನಗಳು ನಡೆಯುತ್ತಿರುವ ಮಾತು ಕೇಳಿ ಬರುತ್ತಿದ್ದು, ಇತ್ತ ನ್ಯಾಯ ಸಿಗುವವರೆಗೂ ಹೋರಾಟಗಾರರು ತಮ್ಮ ಹೋರಾಟವನ್ನು ಕೈಬಿಡುವ ಲಕ್ಷಣಗಳು ಕಾಣುತ್ತಿಲ್ಲ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..