ಸರ್ಕಾರಿ ಸಂಸ್ಥೆಗಳಿಗೆ ಲೋಕಾಯುಕ್ತರ ಸಹಜ ಭೇಟಿಯಂತೆ ಬೀಮ್ಸಗೆ ಭೇಟಿ ನೀಡಿದ್ದಾರೆ.

ಸರ್ಕಾರಿ ಸಂಸ್ಥೆಗಳಿಗೆ ಲೋಕಾಯುಕ್ತರ ಸಹಜ ಭೇಟಿಯಂತೆ ಬೀಮ್ಸಗೆ ಭೇಟಿ ನೀಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಕೇಳಿದ ಮಾಹಿತಿಯನ್ನು ನೀಡುತ್ತೇವೆ..

ಅಶೋಕ್ ಕುಮಾರ್ ಶೆಟ್ಟಿ, ನಿರ್ದೇಶಕರು ಬಿಮ್ಸ್..

ಬೆಳಗಾವಿ : ಸರ್ಕಾರಿ ಸಂಸ್ಥೆಗಳಿಗೆ ಲೋಕಾಯುಕ್ತರ ಸಹಜ ಭೇಟಿ ಇರುತ್ತದೆ, ಅದರಂತೆ ಇಂದು ಅವರ ತಂಡದೊಂದಿಗೆ ಬಿಮ್ಸಗೆ ಬೇಟಿ ನೀಡಿ , ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿವಿಧ ವಿಭಾಗಗಳಾದ ಆಡಳಿತ, ಹಣಕಾಸು, ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಅಶೋಕ್ ಕುಮಾರ ಶೆಟ್ಟಿ ತಿಳಿಸಿದ್ದಾರೆ.

ಬುಧವಾರ ದಿನಾಂಕ 05/03/2025 ರಂದು ಬೆಳಗಾವಿಯ ಲೋಕಾಯುಕ್ತರ ತಂಡ ಬಿಮ್ಸ್ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದರ ಬಗ್ಗೆ ಮಾಹಿತಿ ನೀಡಿದ ಬಿಮ್ಸ್ ನಿರ್ದೇಶಕರು, ಆಸ್ಪತ್ರೆಯ ಕಡೆಯಲ್ಲಿ ಸೂಪರ್ ಸ್ಪೆಸಿಯಾಲಿಟಿ ಆಸ್ಪತ್ರೆಯ ಪ್ರಾರಂಭದ ಬಗ್ಗೆ ಸಾರ್ವಜನಿಕರ ಕಡೆಯಿಂದ ಅನೇಕ ದುರುಗಳಿದ್ದು, ಅಲ್ಲಿ ಮಾನವ ಸಂಪನ್ಮೂಲದ ಕೊರತೆ ಇರುವದರಿಂದ, ಒಂದೆಂದೆ ವಿಭಾಗದಂತೆ ಹಂತಹಂತವಾಗಿ ಕೆಲ ಒಪಿಡಿಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದಿದ್ದಾರೆ.

ಇದೊಂದು ಸ್ವಾಭಾವಿಕ ಬೇಟಿ ಇದ್ದು, ಎಷ್ಟು ಜನ ಕೆಲಸ ಮಾಡುತ್ತಾರೆ, ಏನು ನ್ಯೂನತೆಗಳಿವೆ, ಸರ್ಕಾರಕ್ಕೆ ಏನು ವರದಿ ಮಾಡಬೇಕು, ಸೂಪರ್ ಸ್ಪೆಷಾಲಿಟಿ ಯಾಕೆ ತಡವಾಗುತ್ತಿದೆ ಎಂಬುದನ್ನು ಮಾಹಿತಿ ಕಲೆ ಹಾಕಿದ್ದಾರೆ, ಕಾಲೇಜಿನ ವಸತಿ ನಿಲಯಗಳನ್ನು ಬೇಟಿ ಮಾಡುವವರಿದ್ದಾರೆ, ನ್ಯೂನ್ಯತೆಗಳಿದ್ದರೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ, ಇನ್ನು ಬಾಣಂತಿಯರ ಸಾವಿನ ಬಗ್ಗೆ ವಿವರಣೆ ಕೇಳಿದ್ದಾರೆ, ಅದರ ಕುರಿತಾಗಿ ಕಳೆದ ಮೂರು ವರ್ಷದ ಮಾಹಿತಿಯನ್ನು ನೀಡುತ್ತೇವೆ, ನಮ್ಮಲ್ಲಿ ಪ್ರತಿವರ್ಷ ಎಂಟರಿಂದ ಹನ್ನೆರಡು ಸಾವಿರ ಡೆಲಿವರಿ ಆಗುತ್ತವೆ ಅದರಲ್ಲಿ ಐದರಿಂದ ಆರು ಸಾವಿರ ಸಿಜರಿನ್ ಆಗುತ್ತವೆ ಜೊತೆಗೆ ಹೈರಿಸ್ಕ್ ಕೇಸ್ ಗಳು ಬರುತ್ತವೆ, ಬೇರೆ ಆಸ್ಪತ್ರೆಗಳನ್ನು ನೋಡಿದರೆ ಬಾಣಂತಿಯರ ಸಾವಿನ ಪ್ರಮಾಣ ನಮ್ಮಲ್ಲಿ ಕಡಿಮೆ ಇದೆ ಎಂದಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..