ಸರ್ಕಾರಿ ಸೇವೆಗಳಲ್ಲಿ ಸಾಧನೆಗೈದ ಹೂಗಾರ ಸಮುದಾಯದ ಮಹನೀಯರಿಗೆ ಸತ್ಕಾರ…
ಬೆಳಗಾವಿ : ದಿನಾಂಕ
13/08/2023 ರಂದು ಬೆಳಗಾವಿ ನಗರದ ಲಿಂಗಾಯತ ಸಂಘಟನೆಯ ಹಳಕಟ್ಟಿ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲೆಯ ಹೂಗಾರ, ಗುರವ, ಪೂಜಾರ, ಫುಲಾರಿ ಹಾಗೂ ಜೀರ ಸಮಾಜ ಸೇವಾ ಸಂಘ (ರಿ) ಬೆಳಗಾವಿ ಜಿಲ್ಲಾ ಘಟಕದಿಂದ ಹಾಗೂ ಹೂಗಾರ ಸಮಾಜದ ಹಿರಿಯರು, ಪ್ರಮುಖರು ಪಧಾದಿಕಾರಿಗಳು, ಮಹಿಳಾ ಮಂಡಳದ ಸದಸ್ಯರಿಂದ ಸತ್ಕಾರ ಸಮಾರಂಭದ ಆಯೋಜನೆಯನ್ನು ಮಾಡಲಾಗಿತ್ತು..

ಇತ್ತೀಚಿಗೆ ಸರಕಾರಿ ನೌಕರಿಯಲ್ಲಿ ಪದೋನ್ನತಿ ಹೊಂದಿ, ಜಿಲ್ಲಾ ತರಬೇತಿ ಸಂಸ್ಥೆಯ ಧಾರವಾಡ ಜಿಲ್ಲೆಯ ಪ್ರಾಂಶುಪಾಲರಾದ ಶ್ರೀಮತಿ ನಾಗರತ್ನಾ ಶಿವಲಿಂಗಪ್ರಭು ಹೂಗಾರ ಅವರನ್ನು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಪಾಲಕರಾದ ರಾಜು ಮಾರುತಿ ಗುರವ ಅವರನ್ನು,,
ಅದೇರೀತಿ ವಯೋನಿವೃತ್ತಿ ಹೊಂದಿರುವ ಶಿವಾನಂದ ಹೂಗಾರ ಇಂಜನಿಯರ ಲೋಕೊಪಯೋಗಿ ಇಲಾಖೆ ಹಾಗೂ ಅಧ್ಯಕ್ಷರು ಅಖಿಲ ಭಾರತ ಇಂಜನಿಯರ್ಸ ಅಸೋಸಿಯೇಶನ್ (ರ) ನವದೆಹಲಿ, ಇವರುಗಳನ್ನು ಗೌರವಪೂರ್ವಕವಾಗಿ ಹೂಗಾರ ಸಮುದಾಯದ ಪ್ರಮುಖ ಪದಾಧಿಕಾರಿಗಳ ನೇತೃತ್ವದಲ್ಲಿ, ಸಮುದಾಯದ ಬಂದುಗಳೆಲ್ಲರೂ ಸೇರಿ, ಸಾಧಕ ಮಹನೀಯರಿಗೆ ಸತ್ಕರಿಸಿ, ಸನ್ಮಾನಿಸಲಾಯಿತು…
ವರದಿ ಪ್ರಕಾಶ ಕುರಗುಂದ…