ಸರ್ಕಾರ ಯಾವುದೇ ಬರಲಿ, ಕಿತ್ತೂರು ಕೋಟೆ ಅಭಿವೃದ್ಧಿ ಕಾರ್ಯ ನಡೆಯಬೇಕು..
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ..
ಕಿತ್ತೂರು : ಸೋಮವಾರ ದಿನಾಂಕ 23ರಂದು ಐತಿಹಾಸಿಕ ನೆಲೆಯಾದ ಕಿತ್ತೂರಿನಲ್ಲಿ ಅದ್ದೂರಿಯಾದ ಕಿತ್ತೂರು ಉತ್ಸವಕ್ಕೆ ಸ್ಥಳೀಯ ಶ್ರೀಗಳು ಸಚಿವ ಹಾಗೂ ಶಾಸಕರ ಸಮ್ಮುಖದಲ್ಲಿ ದ್ವೀಪ ಬೆಳಗಿಸುವ ಮೂಲಕ ಚಾಲನೆ ದೊರಕಿದೆ..
ಈ ವೇಳೆ ಉತ್ಸವ ಉದ್ಘಾಟನೆ ಮಾಡಿ, ಉದ್ಘಾಟಕ ಮಾತುಗಳನ್ನು ಆಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು, ಈ ಕ್ಷೇತ್ರದ ಶಾಸಕರ ಹಾಗೂ ಜಿಲ್ಲಾಧಿಕಾರಿಗಳ ಸಾಕಷ್ಟು ಪ್ರಯತ್ನದಿಂದ ಈ ಉತ್ಸವ ಇಂದು ಜರಗುತ್ತಿದೆ, ಯಾವುದೇ ಸರ್ಕಾರವಿದ್ದರೂ ಕೂಡಾ ಈ ಕಿತ್ತೂರು ಐತಿಹಾಸಿಕ ಕೋಟೆಯನ್ನು ರಕ್ಷಿಸುವ ಪೋಷಿಸುವ ಕಾರ್ಯ ಆಗಬೇಕು ಎಂದರು..

ನಮ್ಮ ಕಾಂಗ್ರೆಸ್ ಸರ್ಕಾರ ಕಿತ್ತೂರು ಅಭಿವೃದ್ಧಿಯಲ್ಲಿ ಯಾವತ್ತೂ ಹಿಂದೆ ಸರಿಯುವುದಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಎಲ್ಲಾ ಇಲಾಖೆಯಿಂದ ಕಿತ್ತೂರು ಅಭಿವೃದ್ದಿ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡಲು ಸಿದ್ದವಿದೆ, ನಮ್ಮ ಲೋಕೋಪಯೋಗಿ ಇಲಾಖೆಯಿಂದ ಪ್ರತಿವರ್ಷ ಐದು ಕೋಟಿ ಅನುದಾನ ಬಿಡುಗಡೆ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು..
ಚೆನ್ನಮ್ಮನ ಜೊತೆ, ಸಂಗೊಳ್ಳಿ ರಾಯಣ್ಣನ ನೆನೆಯುವುದು ನಮ್ಮ ಕರ್ತವ್ಯವಾಗಿದೆ, ಈ ಉತ್ಸವದ ಜೊತೆಗೆ ಚೆನ್ನಮ್ಮಾಜಿ ಅವರ ದೈರ್ಯ ಸಾಧನೆಗಳು ಮನೆಮನೆಗೂ ತಲುಪಲಿ, ಮೂರು ದಿನಗಳು ನಡೆಯುವ ಈ ಉತ್ಸವವು ಉತ್ತಮ ರೀತಿಯಲ್ಲಿ ನಡೆದು ಎಲ್ಲರಿಗೂ ಒಳ್ಳೆಯದಾಗಲಿ ಎಂಬ ತಮ್ಮ ಉದ್ಘಾಟಕ ಮಾತುಗಳನ್ನು ಆಡಿದರು..
ವರದಿ ಪ್ರಕಾಶ ಕುರಗುಂದ..