ಸರ್ದಾರ ಮೈದಾನದಲ್ಲಿ ಡಾ ಸತೀಶ್ ಜಾರಕಿಹೊಳಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ..
10 ದಿನ ನಡೆಯುವ ಪಂದ್ಯಾವಳಿಯಲ್ಲಿ ಕೇವಲ 40 ತಂಡಗಳಿಗೆ ಮಾತ್ರ ಅವಕಾಶ..
ಮೇ ತಿಂಗಳಿನ ಅಡ್ಡಮಳೆಯ ಆತಂಕದ ನಡುವೆ ಪಂದ್ಯಾವಳಿಯ ಆಯೋಜನೆ..
ಬೆಳಗಾವಿ : ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಸತೀಶ್ ಜಾರಕಿಹೊಳಿ ಅವರ ಹೆಸರಿನಲ್ಲಿ ನಗರದ ಸರ್ದಾರ ಆಟದ ಮೈದಾನದಲ್ಲಿ ಅಖಿಲ್ ಕರ್ನಾಟಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು, ನಾಳೆಯಿಂದ ತಂಡಗಳ ನೋಂದಣಿ ಕಾರ್ಯ ನಡೆಯಲಿದೆ ಎಂದು ಆಯೋಜಕರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯ ಬಾತಕಂಡೆ ಸ್ಪೋರ್ಟ್ಸ್ ಅಕಾಡೆಮಿ, ಬೆಳಗಾವಿ ಜಿಲ್ಲಾ ವಾಲ್ಮೀಕಿ ಸಮಾಜ ಹಾಗೂ ಡಾ ಸತೀಶ್ ಜಾರಕಿಹೊಳಿ ಪ್ಯಾನ್ಸ್ ಕ್ಲಬ್ ಸಹಯೋಗದಲ್ಲಿ ಈ ಕ್ರಿಕೆಟ್ ಪಂದ್ಯಾವಳಿಗಳು ಮೇ ಎರಡರಿಂದ ಹತ್ತು ದಿನಗಳ ಕಾಲ ನಡೆಯುತ್ತಿದ್ದು, ಇದರಲ್ಲಿ ಬೆಳಗಾವಿ ಹಾಗೂ ರಾಜ್ಯದ ಇತರ ಜಿಲ್ಲೆಗಳು ಸೇರಿ ಒಟ್ಟು 40 ತಂಡಗಳು ಮಾತ್ರ ಭಾಗಿಯಾಗಲು ಅವಕಾಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪಂದ್ಯಾವಳಿಯ ವಿಜೇತರಿಗೆ ಮೂರೂವರೆ ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ಎರಡು ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ಪಡೆಯುತ್ತಾರೆ, ಸರಣಿ ಶ್ರೇಷ್ಠ ಆಟಗಾರನಿಗೆ ಬೈಕ್, ಅತ್ಯುತ್ತಮ ಬ್ಯಾಟರ್, ಬೌಲರ್, ಪ್ರಭಾವಿ ಆಟಗಾರ, ಪಂದ್ಯಶ್ರೇಷ್ಠ ಹಾಗೂ ಇತರ ವೈಯಕ್ತಿಕ ಬಹುಮಾನಗಳನ್ನು ಆಯೋಜನೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ರಾಜ್ಯದ ಉದಯೋನ್ಮುಖ ಕ್ರಿಕೆಟ್ ಆಟಗಾರರಿಗೆ ವೇದಿಕೆ ಕಲ್ಪಿಸುತ್ತವೆ ಎಂಬ ಉದ್ದೇಶದ ಈ ಪಂದ್ಯಾವಳಿಯಲ್ಲಿ ಕೇವಲ 40ತಂಡಗಳಿಗೆ ಮಾತ್ರ ಅವಕಾಶ ಎನ್ನುತ್ತಿದ್ದಾರೆ, ಈಗಾಗಲೇ ಈ ಏಪ್ರಿಲ್ ತಿಂಗಳಲ್ಲೇ ಅಡ್ಡಮಳೆಯ ಹಾವಳಿ ಶುರುವಾಗಿದೆ, ತಾವು ಮುಂದಿನ ಮೇ ತಿಂಗಳು ಎರಡರಿಂದ ಹನ್ನೆರಡರವರೆಗೆ ಆಯೋಜನೆ ಮಾಡಿರುವದು, ಆಗ ಅಡ್ಡ ಮಳೆ ಆಗಿ ಮೈದಾನ ಒದ್ದೆಯಾಗಿ, ಒಂದು ವೇಳೆ ಮೈದಾನದಲ್ಲಿ ನೀರು ನಿಂತರೆ ಪಂದ್ಯಾವಳಿಯ ಗತಿಯೇನು ಎಂಬ ಪ್ರಶ್ನೆಗೆ, ಆಯೋಜಕರು ಅಂತಹ ಸಮಯದಲ್ಲಿ ಪಂದ್ಯ ಮುಂದುಡುತ್ತೇವೆ ಎಂಬ ಉತ್ತರ ನೀಡಿದ್ದಾರೆ..
ಆಸಕ್ತರು ನೋಂದಾಯಿಸಲು ಸಂಪರ್ಕಿಸುವ ಸಂಖ್ಯೆಗಳು :
ರೂಪೇಶ್ ಪಾವಲೆ, 9740757786.
ಪ್ರಸಾದ ಶಿರ್ವಾಲ್ಕರ್ 9731895083
ನಾಸಿರ್ ಪಠಣ್ 9448029622..
ವರದಿ ಪ್ರಕಾಶ್ ಬಸಪ್ಪ ಕುರಗುಂದ..