ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯ..!!

ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯ

ಕಾಂಗ್ರೆಸ್ ಸರ್ಕಾರದ ಶಕ್ತಿಯೋಜನೆಯಿಂದಾಗಿ ದೇವಿಗೆ ಕಾಣಿಕೆ ಪ್ರಮಾಣ ಹೆಚ್ಚಳ…

45 ದಿನಗಳಲ್ಲಿ ಯಲ್ಲಮ್ಮದೇವಿಗೆ 1.37 ಕೋಟಿ ಕಾಣಿಕೆ ಸಂಗ್ರಹ

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀರೇಣುಕಾ ಯಲ್ಲಮ್ಮದೇವಿಗೆ ಹರಿದು ಬಂದ ಭಕ್ತರ ಕಾಣಿಕೆಯಲ್ಲಿ ಹೆಚ್ಚಳವಾಗಿದೆ..

ಮೇ 17ರಿಂದ ಜೂನ್ 30ರ ಅವಧಿಯಲ್ಲಿ 1.37 ಕೋಟಿ ಕಾಣಿಕೆ ಸಂಗ್ರಹವಾಗಿದ್ದು,

1ಕೋಟಿ 30ಲಕ್ಷದ 42 ಸಾವಿರ ನಗದು, 4.44ಲಕ್ಷ ಮೌಲ್ಯದ ಚಿನ್ನಾಭರಣ ರೂಪದಲ್ಲಿ ಸಂಗ್ರಹವಾಗಿದ್ದು,
2.29 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 1.37 ಕೋಟಿ ಕಾಣಿಕೆ ಸಂಗ್ರಹವಾಗಿದೆ..

ಸರ್ಕಾರದ ‘ಶಕ್ತಿ’ ಯೋಜನೆಯಡಿ ಹೆಚ್ಚಾದ ಭಕ್ತರ ಸಂಖ್ಯೆ..

ಶಕ್ತಿ ಯೋಜನೆಯಿಂದಾಗಿಯೂ ದೇವಸ್ಥಾನಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಕಾಣಿಕೆ ಪ್ರಮಾಣದಲ್ಲಿ ಹೆಚ್ಚಳವಾಗಿ, ದೇವಸ್ಥಾನದ ಆದಾಯವೂ ವೃದ್ಧಿಯಾಗಿದೆ ಎಂಬ ಮಾಹಿತಿ ಇದೆ..

ಯಲ್ಲಮ್ಮಗುಡ್ಡದ ಶ್ರೀ ರೇಣುಕಾದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿಯಾದ ಎಸ್‍ಪಿಬಿ ಮಹೇಶರವರು ಕಾಣಿಕೆ ಸಂಗ್ರಹದ ಮಾಹಿತಿ ನೀಡಿದ್ದಾರೆ..

ವರದಿ ಪ್ರಕಾಶ ಕುರಗುಂದ..*