ಸವದತ್ತಿ ತಾಲೂಕು ಪಂಚಾಯತಿ ವ್ಯಾಪ್ತಿಗೆ ಬೇಟಿ ನೀಡಿದ ಜಿಪಂ ಮುಖ್ಯಲೆಕ್ಕಾಧಿಕಾರಿ…

ಸವದತ್ತಿ ತಾಲೂಕು ಪಂಚಾಯತಿ ವ್ಯಾಪ್ತಿಗೆ ಬೇಟಿ ನೀಡಿದ ಜಿಪಂ ಮುಖ್ಯಲೆಕ್ಕಾಧಿಕಾರಿ..

ಇಲಾಖೆಯ ವಿವಿಧ ಯೋಜನೆಗಳ ಕಾರ್ಯ ಪರಿಶೀಲಿಸಿದ ಅಧಿಕಾರಿ..

ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳ ಬಗ್ಗೆ ರೈತರೊಂದಿಗೆ ಸಂವಾದ..

ಬೆಳಗಾವಿ : ಬುಧವಾರ ದಿನಾಂಕ 25/09/2024ರಂದು ಜಿಲ್ಲೆಯ ಸವದತ್ತಿ ತಾಲೂಕು ಪಂಚಾಯತಿ ವ್ಯಾಪ್ತಿಗೆ ಒಳಪಡುವ ವಿವಿಧ ಸ್ಥಳಗಳಿಗೆ ಬೇಟಿ ನೀಡಿದ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ಸ್ಥಳೀಯ ತಾಲೂಕು ಪಂಚಾಯತಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯ ಜೊತೆಗೆ ಇಲಾಖಾ ಕಾರ್ಯ ಪರಿಶೀಲನೆಯನ್ನು ಮಾಡಿದ್ದಾರೆ..

ಮೊದಲಿಗೆ ಸವದತ್ತಿ ತಾಲೂಕು ಪಂಚಾಯತಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಹಾಗೂ ತಾಲೂಕು ಮಟ್ಟದ ಇತರ ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸಿ, ಇಲಾಖೆಯಿಂದ ಹೊರಡಿಸಲಾದ ವಿವಿಧ ಜನಪರ ಯೋಜನೆಗಳ ಪ್ರಾರಂಭ ಹಾಗೂ ಅವುಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದುಕೊಂಡರು..

ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಕೈಗೆತ್ತಿಕೊಂಡು, ಯೋಜನೆಗಳು ಸಾಕಾರಗೊಳ್ಳುವಂತೆ, ಜನರಿಗೆ ಉಪಯೋಗವಾಗುವಂತೆ ಕಾರ್ಯ ನಿರ್ವಹಿಸಲು ಸೂಚಿಸಿ, ಈಗಾಗಲೇ ಆಗಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ನಂತರ ತಾಲೂಕಿನ ಕೃಷಿ ಪ್ರದೇಶಗಳಿಗೆ ಬೇಟಿ ನೀಡಿದ ಅಧಿಕಾರಿಗಳು ಅಲ್ಲಿ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಗಳ ಜೊತೆಯಾಗಿ, ತೋಟಗಾರಿಕಾ ಬೆಳೆಗಳಾದ ಡ್ರಾಗನ್ ಫ್ರೂಟ್ಸ್, ಬಾಳೆ ಹಾಗೂ ಇತರ ಬೆಳೆಗಳ ಬಗ್ಗೆ ಮಾಹಿತಿ ಪಡೆದಿದ್ದು, ಈ ಬೆಳೆಗಳಿಗೆ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಪಡೆದಿರುವ ಬಗ್ಗೆ ವಿಚಾರಿಸಿ, ಅಧಿಕಾರಿಗಳಿಂದಲೂ ಮಾಹಿತಿಯನ್ನು ಪಡೆದುಕೊಂಡರು.

ನ್ಯಾಷನಲ್ ಹಾರ್ಟಿಕಲ್ಚರ್ ಮಿಷನ್ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡಗಳ ನಿರ್ಮಾಣದ ಬಗ್ಗೆ ರೈತರೊಂದಿಗೆ ಸಂವಾದ ಮಾಡಿದ ಅಧಿಕಾರಿಗಳು, ಅದರ ಅನ್ವಯ ಹಾಗೂ ಉಪಯೋಗಗಳ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡರು, ಅದೇ ರೀತಿ ತಾಲೂಕಿನಲ್ಲಿ ಯಾವ ಯಾವ ರೈತರು ಎಷ್ಟೆಷ್ಟು ಈ ಯೋಜನೆಯ ಲಾಭ ಪಡೆದಿದ್ದಾರೆ, ಅದರ ಪ್ರತಿಫಲ ಯಾವ ರೀತಿ ಆಗಿದೆ ಎಂದು ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ..

ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳ ಈ ಕಾರ್ಯಪರಿಶೀಲನಾ ಬೇಟಿಯ ಸಂದರ್ಭದಲ್ಲಿ ಜಿಪಂ ಸಿಬ್ಬಂದಿಯದ ಶಶಿಧರ ನೇಸರಗಿ ಹಾಗೂ ಸ್ಥಳೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..