ಸಹಕಾರಿ ಸಂಘ ಹಾಗೂ ಡಿಸಿಸಿ ಬ್ಯಾಂಕ ಚುನಾವಣೆಗಳನ್ನು ಗಂಭೀರವಾಗಿ ಮಾಡುತ್ತೇವೆ..

ಸಹಕಾರಿ ಸಂಘ ಹಾಗೂ ಡಿಸಿಸಿ ಬ್ಯಾಂಕ ಚುನಾವಣೆಗಳನ್ನು ಗಂಭೀರವಾಗಿ ಮಾಡುತ್ತೇವೆ..

ಮಿಕ್ಕಿದ್ದು ಜನರ ಹಾಗೂ ದೇವರ ಆಶೀರ್ವಾದಕ್ಕೆ ಬಿಟ್ಟಿದ್ದು..

ಲಿಂಗಾಯತ ಸಮುದಾಯಕ್ಕೆ ಪ್ರಮುಖ ಆಧ್ಯತೆ..

ಶಾಸಕ ಬಾಲಚಂದ್ರ ಜಾರಕಿಹೊಳಿ.

ಹುಕ್ಕೇರಿ : ರಮೇಶ ಕತ್ತಿ ಅವರು ಬಹಳ ವರ್ಷದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದವರು, ಅವರು ಚುನಾವಣೆ ಮಾಡುವವರೇ, ನಮ್ಮ ಬಣದಿಂದಲೂ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

ಗುರುವಾರ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಅಣ್ಣಾಸಾಹೇಬ ಜೊಲ್ಲೆ ಹಾಗೂ ನಾವು ಸೇರಿಕೊಂಡು ಚುನಾವಣೆ ಮಾಡುತ್ತೇವೆ. ಅಣ್ಣಾಸಾಹೇಬ ಅವರು ನಿಪ್ಪಾಣಿಯಲ್ಲಿ‌ ಚುನಾವಣೆ ಮಾಡುತ್ತಿದ್ದಾರೆ ಎಂದರು.

ಚನ್ನರಾಜ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಚನ್ನರಾಜ ಹಟ್ಟಿಹೊಳಿ ಅವರ ನಡುವೆ ಆದ ಸಂದಾನದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಇನ್ನು ರಾಹುಲ್ ಜಾರಕಿಹೊಳಿ ಅವರು ಡಿಸಿಸಿ ಬ್ಯಾಂಕ್ ಸ್ಪರ್ಧೆ ವಿಚಾರದ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಸ್ಪಷ್ಟವಾಗಿ ತಿಳಿದು ಬರಲಿದೆ, ಲಕ್ಷಣ ಸವದಿ ಅವರಿಗೂ ನಮ್ಮ ಗುಂಪಿಗೆ ಬನ್ನಿ ಎಂದು ಮನವಿ ಮಾಡಿದ್ದರೂ ಅವರು ಬರಲಿಲ್ಲ. ಆದ್ದರಿಂದ ಅಥಣಿ ಹಾಗೂ ಕಾಗವಾಡದಲ್ಲಿ ನಾವು ಅಭ್ಯರ್ಥಿಯನ್ನು ಹಾಕುವುದಿಲ್ಲ, ಅದರ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಲಿಂಗಾಯತ ಸಮುದಾಯದವರನ್ನೇ ಮಾಡುತ್ತೇವೆ ಎಂದರು.