ಸಾರಿಗೆ ನೌಕರರಲ್ಲಿ ಒಗ್ಗಟ್ಟಿನ ಮಂತ್ರ ಅತ್ಯಂತ ಅವಶ್ಯಕ..
ಮಹೇಶ್ ಎಸ್ ಶಿಗಿಹಳ್ಳಿ, ಗೌರವಾಧ್ಯಕ್ಷರು ಸಾರಿಗೆ ನೌಕರರ ಕೂಟ ಬೆಳಗಾವಿ..
ಬೆಳಗಾವಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದಿಂದ ವಿಚಾರ ಸಂಕೀರ್ಣ ಸಭೆ ಹುಬ್ಬಳಿಯಲ್ಲಿ ಜರುಗಿದ್ದು, ಈ ಸಮಯದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹೇಶ್ ಸಿಗಿಹಳ್ಳಿ ಅವರು ಸಾರಿಗೆ ನೌಕರರು ಹಕ್ಕುಗಳನ್ನು ನ್ಯಾಯವನ್ನು ಪಡೆಯಬೇಕಾದರೆ ಒಗ್ಗಟ್ಟಾಗಿ ಮುನ್ನಡೆಯಬೇಕು ಹಾಗೂ ಸಂಘಟನೆಯ ಮುಖಂಡರ ಕರೆಗೆ ಒಗ್ಗೂಡಿ ಹೋರಾಟಕ್ಕೆ ಸಿದ್ಧರಾಗಬೇಕು ಎಂಬ ಕಿವಿಮಾತು ಹೇಳಿದ್ದಾರೆ..
ಸಂಘಟನೆಯನ್ನು ಒಡೆದು ಆಳುವ ಜನರಿಗೆ ನಾವು ಆಹಾರವಾಗಬಾರದು ಇದರಿಂದ ನಿಮ್ಮ ಬಹುದಿನಗಳ ಹೋರಾಟದ ಶಾಶ್ವತ ಪರಿಹಾರದ ಬೇಡಿಕೆಗಳನ್ನು ಸರ್ಕಾರದಿಂದ ಗೆಲ್ಲಲು ಸಾಧ್ಯವಿಲ್ಲ, ಈಗಾಗಲೇ ನಾವು ಮಾಡಿರುವ ಹಲವು ಹೋರಾಟಗಳಲ್ಲಿ ನಮ್ಮ ಮೇಲೆ ಪೊಲೀಸ್ ಪ್ರಕರಣಗಳು ದಾಖಲು ಆಗಿದೆ ಆದರೂ ನಿಮಗೆ ನ್ಯಾಯ ಕೊಡಿಸಲು ನಾವು ನಿರಂತರವಾಗಿ ಹೋರಾಟದ ದಾರಿಯಲ್ಲಿ ಸರ್ಕಾರಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಸಾಗುತ್ತಿದ್ದೇವೆ ಅದಕ್ಕೆ ಸಾರಿಗೆ ನೌಕರರು ಒಗ್ಗಟ್ಟಾಗಿ ಇರುವುದು ಮುಖ್ಯ “ಒಗ್ಗಟ್ಟಿನ ಮಂತ್ರ ಗೆಲುವಿನ ತಂತ್ರ” ಅಡಿಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದ್ದು ಹೋರಾಟದಲ್ಲಿ ಯಶಸ್ವಿಯಾಗೋಣ ಇದಕ್ಕೆ ತಾಳ್ಮೆ ಒಗ್ಗಟ್ಟು ಪರಿಶ್ರಮ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ, ಜಿಲ್ಲೆ ಹಾಗೂ ತಾಲೂಕು ವಿಭಾಗದ ನಾಯಕರು ಉಪಸ್ಥಿತರಿದ್ದರು.