ಸಾರ್ವಜನಿಕರಾದ ನಾವು ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ತೆರಳುತ್ತೇವೆ..

ಸಾರ್ವಜನಿಕರಾದ ನಾವು ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ತೆರಳುತ್ತೇವೆ..

ಜನರ ಕೆಲಸ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವದು ಅಧಿಕಾರಿಗಳ ಜವಾಬ್ದಾರಿ..

ನಿರಾಶ್ರಿತರ ಹಾಗೂ ಗಂಜಿ ಕೇಂದ್ರಗಳ ಅವಲಂಭಿತರಿಗೆ ಅದೇ ವಿಚಾರವಿರುತ್ತದೆ..

ಜನಾಭಿಪ್ರಾಯ..

ಬೆಳಗಾವಿ : ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಾರ್ವಜನಿಕರ ಸೇವಕರು, ನಾವು ನಮ್ಮ ಕೆಲಸ, ಸಮಸ್ಯೆಗಳಿಗಾಗಿ ನಮ್ಮ ಸರ್ಕಾರಿ ಕಚೇರಿಗೆ ತೆರಳುವುದು ಸರ್ವೇ ಸಾಮಾನ್ಯ, ಬಂದವರ ಸಮಸ್ಯೆ ಆಲಿಸಿ ಪರಿಹಾರೋಪಾಯ ಸೂಚಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ, ಮುಂದೇನೂ ಮಾಡುತ್ತಾರೆ ಎಂಬ ನಂಬಿಕೆ ಇದೆ, ಕೆಲವರು ಪೂರ್ವಾಗ್ರಹ ಪೀಡಿತ ಕಾಯಿಲೆಯಿಂದ ಜಿಪಂ ಅಧಿಕಾರಿಗಳ ಕಾರ್ಯದ ಕುರಿತಾಗಿ ಹೇಳುವ ಇಲ್ಲಸಲ್ಲದ ಹೇಳಿಕೆಯನ್ನು ನಿಲ್ಲಿಸಲಿ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..

ಜಿಪಂ ಕಚೇರಿಯಲ್ಲಿ ಬೇರೆಯವರ ವಿಷಯಗಳ ಚರ್ಚೆ, ಇತ್ಯರ್ಥ ಮಾಡುತ್ತಾ ಕಾಲಹರಣ ಮಾಡುತ್ತಾರೆ, ಸಂಘ ಕಟ್ಟಿ ಕಚೇರಿಯನ್ನು ನಿರಾಶ್ರಿತರ ಕೇಂದ್ರ ಮಾಡಿದ್ದಾರೆ ಎಂಬ ಮಾತುಗಳು ಕೆಲವರಲ್ಲಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಉತ್ತರವೆಂಬಂತೆ ಕೆಲ ಸಾರ್ವಜನಿಕರೂ ಕೂಡಾ ಪ್ರತಿಕ್ರಿಯೆ ನೀಡಿದ್ದು, ಜಿಪಂ ಕಚೇರಿಯು ಜನಸ್ನೇಹಿ ಉತ್ತಮ ಆಡಳಿತಕ್ಕೆ ನಿದರ್ಶನವಾಗಿದೆ, ಇಲ್ಲಿ ಪ್ರತಿ ಸಿಬ್ಬಂದಿಯೂ ಸಮರ್ಥವಾಗಿ ಕರ್ತವ್ಯ ಮಾಡುತ್ತಿದ್ದಾರೆ, ಜನರ ಸಮಸ್ಯಗಳಿಗೆ ಎಲ್ಲರೂ ಸ್ಪಂದಿಸುತ್ತಾರೆ.

ಹೀಗಿರುವಾಗ ಕಛೇರಿಯ ಕುರಿತಾಗಿ ಇಲ್ಲಸಲ್ಲದ ಊಹಾಪೋಹ ಮಾಡುವದು ಸರಿಯಲ್ಲ, ಬೇರೆಯವರು ಸಮಸ್ಯೆ ಅಂತ ಇಲ್ಲಿಗೆ ಬಂದಾಗ ಪರಿಹಾರಕ್ಕಾಗಿ ಇಲ್ಲಿಯ ಅಧಿಕಾರಿಗಳು ಪ್ರಯತ್ನ ಮಾಡುತ್ತಾರೆ, ಇಲ್ಲಿ ಏನಿದ್ದರೂ ಸಿಬ್ಬಂದಿಗಳ ಸಂಘಟನೆ, ನಿರಾಶ್ರಿತರ ಕೇಂದ್ರ ಅನ್ನುವುದೆಲ್ಲ ಈ ಕಚೇರಿಗೆ ಸೂಕ್ತ ಆಗುವುದಿಲ್ಲ, ನಿರಾಶ್ರಿತರ ಹಾಗೂ ಗಂಜಿ ಕೇಂದ್ರದ ಅವಲಂಬಿಗಳಾದವರಿಗೆ ಇಂತಹ ವಿಚಾರಗಳು ಬರಬಹುದೇನೋ ಎಂಬ ಅಭಿಪ್ರಾಯ ನೀಡಿದ್ದಾರೆ..