ಸಾರ್ವಜನಿಕರು ತೆರಿಗೆ ಕಟ್ಟಿದ ಪಾಲಿಕೆಯ ಹಣ ಸದ್ಬಳಕೆ ಆಗಲಿ..

ಸಾರ್ವಜನಿಕರು ತೆರಿಗೆ ಕಟ್ಟಿದ ಪಾಲಿಕೆಯ ಹಣ ಸದ್ಬಳಕೆ ಆಗಲಿ..

ಮಾನ್ಯತಾ ಕಾರ್ಡ ಹೊಂದಿರುವ ಪತ್ರಕರ್ತರಿಗೆ ಪಾಲಿಕೆಯ ಆರೋಗ್ಯ ವಿಮೆ ಸಿಗುವಂತಾಗಲಿ..

ನಿಯಮಬಾಹಿರ ವಿಮೆಗಳ ಮೇಲೆ ಕ್ರಮ ಆಗಲಿ..

ಗಡಿನಾಡು ಕನ್ನಡಿಗರ ಸೇನೆಯ ಮನವಿ..

ಬೆಳಗಾವಿ : ನಮ್ಮ ಬೆಳಗಾವಿ ಮಹಾನಗರ ಪಾಲಿಕೆಗೆ ಸ್ಥಳೀಯ ಸ್ವ- ಸಂಪನ್ಮೂಲ ನಿಧಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನ ಎಂಬ ಆದಾಯದ ಮೂಲಗಳಿದ್ದು, ಅದರಲ್ಲಿ ಪ್ರಮುಖವಾಗಿ ನಮ್ಮ ನಗರ ನಿವಾಸಿಗಳು ಕಟ್ಟುವ ತೇರಿಗೆ, ಬಾಡಿಗೆ, ಸೇವಾಶುಲ್ಕದಂತಹ ಸ್ವ-ಸಂಪನ್ಮೂಲ ನಿಧಿಯ ಪ್ರಮಾಣ ಅಧಿಕಾವಾಗಿದ್ದು, ಸಾರ್ವಜನಿಕರು ಕಷ್ಟಪಟ್ಟು ಕಟ್ಟಿದ ಹಣವನ್ನು ಪಾಲಿಕೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಗಡಿನಾಡು ಕನ್ನಡಿಗರ ಸೇನೆಯ ಸದಸ್ಯರು ಇಂದು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ದಿನಾಂಕ 04/02/2026 ರಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೆನಟ್ಟಿ ಅವರ ನೇತೃತ್ವದಲ್ಲಿ ಪಾಲಿಕೆಯ ಆಯುಕ್ತರಿಗೆ ಮನವಿ ಪತ್ರ ನೀಡಿದ ಸದಸ್ಯರು, ಪಾಲಿಕೆಯಿಂದ ನೀಡುವ ಯಾವುದೇ ಸೌಲಭ್ಯ ಜವಾಬ್ದಾರಿಯುತವಾಗಿರಬೇಕು, ತಾವು ಪ್ರತಿವರ್ಷ ಪಾಲಿಕೆಯಿಂದ ಪತ್ರಕರ್ತರಿಗೆ ನೀಡುವ ಆರೋಗ್ಯ ವಿಮೆ ಯೋಜನೆಯಲ್ಲಿ ಕೆಲ ಲೋಪದೋಷಗಳಿದ್ದು, ಅವು ಸರಿಯಾಗಬೇಕು ಎಂದರು.

ಪತ್ರಕರ್ತರೆಲ್ಲರೂ ನಮ್ಮ ಸಹೋದರರೇ, ಅವರಿಗೆ ಅರೋಗ್ಯ ವಿಮೆ ನೀಡುವುದು ಸಂತೋಷದ ವಿಷಯವೇ, ಆದರೆ ಒಂದು ಸಂಸ್ಥೆಯಿಂದ ಎಷ್ಟು ಜನಕ್ಕೆ ನೀಡುವದು? ಪಾಲಿಕೆ ವ್ಯಾಪ್ತಿಯ ಒಳಗಿನವರಿಗೋ ಹೊರಗಿನವರಿಗೋ? ವಿದ್ಯುನ್ಮಾನ, ಮುದ್ರಣ, ಸಾಮಾಜಿಕ ಮಾಧ್ಯಮ ಯಾರಿಗೆಲ್ಲ ನೀಡಬೇಕು? 100, 200, 300, ಎಷ್ಟು ಜನಕ್ಕೆ ನೀಡಬೇಕು? ಎಂಬ ಕೆಲ ಗೊಂದಲದಲ್ಲಿ ತಾವು, ತಮ್ಮ ಪಾಲಿಕೆಯಿಂದ ಯಾವುದೇ ನಿಯಮಾವಳಿ ಅನುಸರಿಸದೇ ಈಗಾಗಲೇ ಸುಮಾರು 110 ಜನರಿಗೆ ಆರೋಗ್ಯ ವಿಮೆ ನೀಡಿದ್ದೀರಾ, ಇದರಿಂದ ವರ್ಷಕ್ಕೆ ಸುಮಾರು 50 ಲಕ್ಷದಷ್ಟು ಸಾರ್ವಜನಿಕರ ತೆರಿಗೆ ಹಣ ವೆಚ್ಚವಾಗುತ್ತಿದೆ.

ತಾವು ಎಷ್ಟು ದಾರಿ ತಪ್ಪಿದ್ದೀರಾ ಎಂದರೆ, ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿಗೂ ಪತ್ರಕರ್ತರ ಆರೋಗ್ಯ ವಿಮೆಯ ಸೌಲಭ್ಯ ನೀಡಿದ್ದೀರಾ ಎಂಬ ಮಾಹಿತಿ ಇದೆ. ಯಾವುದೇ ವಿಚಾರ ಮಾಡದೇ ಜನರ ಹಣ ವ್ಯಯ ಮಾಡಲು, ಪಾಲಿಕೆಯ ಅನುದಾನ ಏನು ಹಂಚಿಫಿಲ್ಲಿಯೇ? ಜನರು ಬೆವರು ಸುರಿಸಿ ದುಡಿದು ತೇರಿಗೆ ಕಟ್ಟಿದ ಹಣ ಅದು, ಅದು ಸದ್ಭಳಕೆ ಆಗಬೇಕು, ದುರ್ಬಳಕೆ ಮಾಡಿದವರು ಎಷ್ಟೇ ಪ್ರಭಾವಿಗಳಾದರೂ ಅವರ ಮೇಲೆ ಕ್ರಮ ಆಗಬೇಕು ಎಂದು ಪಾಲಿಕೆ ಆಯುಕ್ತರಲ್ಲಿ ಕೇಳಿಕೊಂಡರು.

ಬೆಳಗಾವಿಯಲ್ಲಿ ಮಾನ್ಯತೆ ಕಾರ್ಡ ಹೊಂದಿರುವ ಪತ್ರಕರ್ತರಿಗೆ ಪಾಲಿಕೆಯಿಂದ ಆರೋಗ್ಯ ವಿಮೆ ನೀಡಿದರೆ ಒಳ್ಳೆಯ ಕಾರ್ಯ ಆಗುತ್ತದೆ ಎಂಬುದು ನಮ್ಮ ನಂಬಿಕೆ, ಆಗ ನಿಯಮದ ಪ್ರಕಾರ ನೀಡಿದಂತೆ ಇರುತ್ತದೆ, ಪಾಲಿಕೆಯ ಅನುದಾನವೂ ಕೂಡಾ ಒಳ್ಳೆಯ ರೀತಿ ಬಳಕೆ ಆಗುತ್ತದೆ, ಆಗ ನಮ್ಮದು ಮಾಡಿ, ನಿಮ್ಮದು ಮಾಡಿ ಎನ್ನುವ ಸಮಸ್ಯೆಯೂ ಇರುವದಿಲ್ಲ, ಅದರಲ್ಲಿ ಪಾರದರ್ಶಕತೆ ಇರುತ್ತದೆ ಎಂಬ ಸಲಹೆಯ ಜೊತೆ, ಮನವಿಯನ್ನು ಮಾಡಿಕೊಂಡಿದ್ದಾರೆ.

ಈ ವೇಳೆ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೆನಟ್ಟಿ, ಜಿಲ್ಲಾಧ್ಯಕ್ಷರಾದ ಎಸ್ ಎಸ್ ಮೂಖನವರ, ಜಿಲ್ಲಾ ಖಜಾಂಚಿಯಾದ ಆನಂದ ಬಿಲಾವರ, ಪ್ರಸಾದ ಕವಳೆಕರ, ಇಮಾಮ ನದಾಫ್, ಸಂತೋಷ್ ಮಾಸೆನಟ್ಟಿ, ಕಿರಣ ಚಿಲಂಪಟಿ, ಪ್ರಕಾಶ್ ಕುರಗುಂದ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *