ಸಾಹಿತ್ಯ ಸಮ್ಮೇಳನವನ್ನೂ ಮೀರಿಸುವ ಕನ್ನಡದ ಮದುವೆ…

ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಕಲರವದ ಕಲ್ಯಾಣ..

ಕನ್ನಡ ಕುವರ ದೀಪಕನ ಕಲ್ಯಾಣದಲ್ಲಿ ಕನ್ನಡದ ಡಿಂಡಿಮ..

ಸಾಹಿತ್ಯ ಸಮ್ಮೇಳನವನ್ನೂ ಮೀರಿಸುವ ಕನ್ನಡದ ಮದುವೆ..

ಬೆಳಗಾವಿ : ಸೋಮವಾರ ದಿನಾಂಕ 26ರಂದು ಬೆಳಗಾವಿಯ ಅಟೋನಗರದ ಎಚ್ ಕೆ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದ ಕನ್ನಡಿಗ ದೀಪಕ ಹಾಗೂ ಕನ್ನಡತಿ ರಾಜೇಶ್ವರಿ ಅವರ ಕನ್ನಡಮಯ ವಿವಾಹವು ಅತ್ಯಂತ ವಿಶೇಷ ಮತ್ತು ಜನಾಕರ್ಷಣೆಯ ತಾಣವಾಗಿದ್ದು ಇಡೀ ಕನ್ನಡಿಗರನ್ನು ಕೈಬೀಸಿ ಕರೆಯುವ ಸನ್ನಿವೇಶ ಸೃಷ್ಟಿಯಾಗಿತ್ತು..

ಈ ವಿಶೇಷ ವಿವಾಹದಲ್ಲಿ ಹಲವಾರು ಅಚ್ಚರಿಗಳು ತುಂಬಿದ್ದು, ವಿವಾಹಕ್ಕೆ ಆಗಮಿಸುವ ಎಲ್ಲಾ ಕನ್ನಡ ಹೃದಯಗಳಿಗೆ ಮೊದಲು ದ್ವಾರದಲ್ಲಿಯೇ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಕೇಶಿ, ಜಗಜ್ಯೋತಿ ಬಸವೇಶ್ವರ, ಸಾಲುಮರದ ತಿಮ್ಮಕ್ಕ, ಪೂರ್ಣಚಂದ್ರ ತೇಜಸ್ವಿ, ಪುಟ್ಟರಾಜ ಗವಾಯಿಗಳು ಹಾಗೂ ಮತ್ತಿತರ ಕನ್ನಡ ನೆಲದ ಮಹಾಪುರುಷರ ಪುತ್ತಳಿಗಳು ಹಾಗೂ ಭಾವಚಿತ್ರಗಳು ಸ್ವಾಗತ ಕೊರುವಂತಿತ್ತು..

ಇನ್ನು ಮದುವೆಯ ಮಂಟಪದ ತುಂಬೆಲ್ಲ ಕನ್ನಡಪರ ನಾಡು, ನೆಲ, ಜಲ, ಸಂಸ್ಕೃತಿಯ, ಮಹಾಪುರುಷರ, ಇತಿಹಾಸದ ಬಗ್ಗೆ ವರ್ಣಿಸುವ ಹಲವಾರು ಬಿತ್ತಿ ಚಿತ್ರ ಹಾಗೂ ಬರಹಗಳು ರಾರಾಜಿಸುತ್ತಿದ್ದು, ಈ ವಿವಾಹವು ಯಾವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಕಮ್ಮಿ ಇಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿತ್ತು.

ಇನ್ನು ವಧು ವರನ ಹೆಸರಲ್ಲಿ ಕನ್ನಡ ಕನ್ನಡತಿ ಎಂದು ಹಕಿಸಿದ್ದು, ಮಾಡಿ ವಿವಾಹದ ಉಂಗುರದಲ್ಲೂ ಕನ್ನಡಿಗ ಕನ್ನಡತಿ ಎಂದು ಬರೆಸುವದರ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ, ಅದೇ ರೀತಿ ವಿಹಾಹಕ್ಕೆ ಆಗಮಿಸಿದ ಗಣ್ಯರಿಗೆ ಹಳದಿ ಕೆಂಪು ಬಣ್ಣದ ಪೇಟಾಗಳನ್ನು ತೊಡಸಿದ್ದು ವಿಶೇಷವಾಗಿತ್ತು..

ಅದೇ ರೀತಿ ಕಲ್ಯಾಣ ಮಂಟಪಕ್ಕೆ ಹೋಗುವ ದಾರಿಯುದ್ದಕ್ಕೂ ಕನ್ನಡ ವೀರ ಪುರುಷರ, ದಾಸರ, ಸಂತರ, ಕವಿಗಳ, ವೀರ ನಾರಿಯರ, ದಾರ್ಶನಿಕರ ಭಾವಚಿತ್ರದ ಪಟಗಳನ್ನು ಹಾಕಿ ಮದುವೆಯ ಸೊಬಗನ್ನು ದ್ವಿಗುಣಗೊಳಿಸಿದ್ದರು..

ಮದುವೆಯ ವರ ದೀಪಕ ಕೆ ಎನ್ನುವವರು ಬೆಳಗಾವಿಯಲ್ಲಿ ಕನ್ನಡಿಗ ದೀಪಕ್ ಎಂತಲೇ ಪರಿಚಿಯರಾಗಿದ್ದು, ಬೆಳಗಾವಿ ರಾಯಣ್ಣ ಪೆಸಬುಕ್ ಪುಟದ ಅಡ್ಮಿನ್ ಆಗಿದ್ದು ಕಳೆದ ಹತ್ತಾರು ವರ್ಷಗಳಿಂದ ಕನ್ನಡದ ಕಾಳಜಿ, ಅಭಿಮಾನ ಬೆಳಸಿಕೊಂಡು, ಕನ್ನಡಕ್ಕೆ ದಕ್ಕೆಯಾದಂತ ಸಂದರ್ಭದಲ್ಲಿ ಮುನ್ನುಗ್ಗಿ ಹೋರಾಟ ಮಾಡುವ ಪ್ರವೃತ್ತಿಯುಳ್ಳವರಾಗಿದ್ದು, ಇಂದು ಕನ್ನಡ ಸ್ವಾಮೀಜಿ, ಕನ್ನಡ ಮಂತ್ರಘೋಷದಲ್ಲಿ ಕನ್ನಡ ಮನಗಳ ಎದುರಿನಲ್ಲಿ ರಾಜೇಶ್ವರಿ ವಾಂಗಿ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಕನ್ನಡದ ಕನ್ನಡ ತಾಯಿ ಭುವನೇಶ್ವರಿಯ ಆಶೀರ್ವಾದದ ನವಜೋಡಿಗಳಾಗಿದ್ದಾರೆ.

ಒಟ್ಟಿನಲ್ಲಿ ಅತ್ಯಂತ ಸೊಗಸಾದ ಹಾಗೂ ಮೆಚ್ಚುಗೆಯ ಕನ್ನಡದ ಈ ಕಲ್ಯಾಣದಲ್ಲಿ ಹೊಸತನದ ಅನೇಕ ಅಚ್ಚರಿಗಳು ನೆರವೇರಿದ್ದು ಬಂದಂತ ಕನ್ನಡದ ಮನಸ್ಸುಗಳಿಗೆ ಮೃದ ನೀಡುವ ವಾತಾವರಣ ನಿರ್ಮಾಣವಾಗಿತ್ತು..

ವರದಿ ಪ್ರಕಾಶ ಕುರಗುಂದ..