ಸಿದ್ದರಾಮೇಶ್ವರ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ..
ಸಂಸ್ಥೆಯ ಹಳೆಯ ವಿಧ್ಯಾರ್ಥಿಗಳಿಗೆ ಸಾಧನಾ ಸನ್ಮಾನ..
ಬೆಳಗಾವಿ : ಗುರುವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿಯ ಸಿದ್ದರಾಮೇಶ್ವರ ಎಜುಕೇಷನ್ ಟ್ರಸ್ಟ್ ಪಧಾದಿಕಾರಿಗಳು ಮಾತನಾಡಿ, ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮದ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ..
ನಾಗನೂರು ಸ್ವಾಮಿಗಳು ಎಂದೇ ಖ್ಯಾತಿ ಪಡೆದ ಡಾ ಶಿವಬಸವ ಮಹಾಸ್ವಾಮಿಗಳು 1969ರಲ್ಲಿ ಸ್ಥಾಪಿಸಿದ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯ ಸುವರ್ಣ ಸಂಭ್ರಮವನ್ನು ಗುರುವಾರ 7 ನೆ ಡಿಸೆಂಬರ್ 2023ರಂದು ಸಾಯಂಕಾಲ 6 ಗಂಟೆಗೆ ಆಚರಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ..

ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರ ಮಠ ಹುಬ್ಬಳ್ಳಿ, ಹಾಗೂ ಶ್ರೀ ನಿರಂಜನ ಜಗದ್ಗುರು ಡಾ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಗದಗ ಇವರ ದಿವ್ಯಸಾನಿಧ್ಯದಲ್ಲಿ ಈ ಸುವರ್ಣ ಸಂಭ್ರಮ ಜರಗುತ್ತಿದ್ದು, ನಿವೃತ್ತ ಐಎಎಸ್ ಅಧಿಕಾರಿಯಾದ ಡಾ ಎಸ್ ಎಂ ಜಾಮದಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ..
ಈ ವಿಶೇಷ ಮಹೋತ್ಸವದಲ್ಲಿ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಹಾಗೂ ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ..
ವರದಿ ಪ್ರಕಾಶ ಕುರಗುಂದ..