ಸಿಬ್ಬಂದಿ ಕೊರತೆಯ ನಡುವೆಯೂ, ರೈತಸ್ನೇಹಿ ಕಾರ್ಯದತ್ತ ಕೃಷಿ ಇಲಾಖೆ..!!!

ಸಿಬ್ಬಂದಿ ಕೊರತೆಯ ನಡುವೆಯೂ, ರೈತಸ್ನೇಹಿ ಕಾರ್ಯದತ್ತ ಕೃಷಿ ಇಲಾಖೆ…

ಕೃಷಿ, ಜಂಟಿ ನಿರ್ದೇಶಕರ ಕಚೇರಿಯಿಂದ ಅನ್ನದಾತನಿಗೆ ಹತ್ತು ಹಲವು ಯೋಜನೆಗಳು..

ಬೆಳಗಾವಿ : ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಬೆಳಗಾವಿ ಜಿಲ್ಲೆಯೂ ವಿಸ್ತಾರ ಹಾಗೂ ಜನಸಂಖ್ಯೆಯಲ್ಲಿ ರಾಜ್ಯದ ಬಹುದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ, ಬಹುತೇಕ ಕೃಷಿಯನ್ನೇ ನೆಚ್ಚಿಕೊಂಡಿರುವ ಈ ಜಿಲ್ಲೆಯಲ್ಲಿ ನೀರಾವರಿ, ಅರೇ ನೀರಾವರಿ, ಒಣಬೇಸಾಯ ಅಂತಾ ಹತ್ತು ಹಲವು ವಿವಿಧ ಕೃಷಿ ಬೆಳೆಗಳನ್ನು ಬೆಳೆದು, ಈ ಜಿಲ್ಲೆ ವಿಶೇಷತೆಗಳಲ್ಲಿ ವಿಶೇಷವಾಗಿದೆ.

ಕೃಷಿ ಅಥವಾ ಬೇಸಾಯಕ್ಕೆ ಸಂಬಂಧಪಟ್ಟಂತೆ ಬೆಳಗಾವಿ ಜಿಲ್ಲೆಯಲ್ಲಿ ಮಣ್ಣಿನ ಗುಣಗಳಿಗೆ ಅನುಗುಣವಾಗಿ ಇಲ್ಲಿ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ, ಕೃಷಿ ಪ್ರಧಾನ ಜಿಲ್ಲೆಯಾಗಿರುವದರಿಂದ ಕೃಷಿ ಅವಲಂಬಿತ ಚಟುವಟಿಕೆಗಳು ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ..

ಹೀಗಿರುವಾಗ ಇಲ್ಲಿಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯೂ ಕೂಡಾ, ಜಿಲ್ಲೆಯ ರೈತರಿಗೆ ಅನುಕೂಲಕರವಾದ ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವ ಯಶಸ್ವಿ ಕಾರ್ಯ ಮಾಡುತ್ತಿದೆ, ಅದರ ಬಗ್ಗೆ ಕೃಷಿ ಅಧಿಕಾರಿಗಳು ಈ ಕೆಳಗಿನ ಮಾಹಿತಿ ಒದಗಿಸಿದ್ದಾರೆ..

ಜಂಟಿ ನಿರ್ದೇಶಕರ ಹಾಗೂ ಅದರ ಕೆಳಹಂತದ ಜಿಲ್ಲಾ, ತಾಲೂಕು, ಹಾಗೂ ಹೋಬಳಿ ಮಟ್ಟದ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಕೂಡಾ, ಉಪಸ್ಥಿತ ಸಿಬ್ಬಂದಿಯಲ್ಲಿಯೇ ರೈತರಿಗೆ ಮಾಹಿತಿ ನೀಡಿ, ಸರ್ಕಾರದ ಸೌಲಭ್ಯ ಹಾಗೂ ಯೋಜನೆಗಳನ್ನು ನೀಡುವಂತ ಕಾರ್ಯವಾಗುತ್ತಿದೆ..

ಸ್ವತಃ ಅಧಿಕಾರಿಗಳೇ ಜಿಲ್ಲೆಯ ತಾಲೂಕುಗಳು ಬೇಟಿ ನೀಡಿ, ಅಲ್ಲಿಯ ರೈತರ, ಅವರ ಭೂಮಿ, ಬೇಳೆ, ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿ, ಅವರೊಂದಿಗೆ ಸಮಾಲೋಚನೆ ಮಾಡಿ, ಅವರಿಗೆ ಯಾವ ರೀತಿಯ ಯೋಜನೆ ನೀಡಬೇಕು, ಯಾವ ಬೀಜ, ಗೊಬ್ಬರ ಬಳಸಬೇಕು ಅದರಿಂದ ಯಾವ ಬೆಳೆ ಬೆಳೆಯಬೇಕು ಎಂಬ ಮಾಹಿತಿ ನೀಡುವರು…

ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಅನೇಕ ಸೌಲಭ್ಯಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ತಲುಪಿಸುವ ಕಾರ್ಯ ನಡೆಯುತ್ತಿದ್ದು, ಅದರಲ್ಲಿ ಗುಣಮಟ್ಟದ ಬೀಜ ಹಾಗೂ ಗೊಬ್ಬರಗಳನ್ನು ಆಯಾ ಪ್ರದೇಶಕ್ಕೆ ಅನುಕೂಲ ಆಗುವಂತ, ಬೀಜ ಹಾಗೂ ರಸಗೊಬ್ಬರಗಳ ಗುಣಮಟ್ಟದ ಪರೀಕ್ಷೆ ಮಾಡಿ, ಬೀಜ, ಗೊಬ್ಬರ ವಿತರಣೆ ಮಾಡಲಾಗುವುದು ಎಂದರು..

ಇನ್ನು ಕೇಂದ್ರ ಸರ್ಕಾರದ ಪಸಲ್ ಭೀಮಾ ಯೋಜನೆ, ರಸಗೊಬ್ಬರದ ಸಹಾಯಧನ, ರಾಜ್ಯ ಸರ್ಕಾರದ ಕೃಷಿಭಾಗ್ಯ ಯೋಜನೆ, ಕೃಷಿಹೊಂಡ ನಿರ್ಮಾಣಕ್ಕೆ ಸಹಾಯಧನ, ತುಂತುರು ನೀರಾವರಿ ಘಟಕ ನಿರ್ಮಾಣಕ್ಕೆ ಸಹಾಯಧನ, ರೈತ ಸಂಪರ್ಕ ಕೇಂದ್ರಗಳ ಮೂಲಕ ಕೃಷಿ ಪರಿಕರಗಳಾದ, ಟ್ರ್ಯಾಕ್ಟರ್ ಚಾಲಿತ ಉಪಕರಣಗಳ ವಿತರಣೆ, ಕೃಷಿ ಸಂಸ್ಕರಣಾ ಯೋಜನೆ ಅಡಿಯಲ್ಲಿ ಮೇವುಕಟಾವು, ಖಾರಾ ಕುಟ್ಟುವ ಮಸಿನ್, ಹಿಟ್ಟಿನ ಗಿರಣಿ, ಮುಂತಾದ ಸೌಲಭ್ಯ ಹಾಗೂ ಯೋಜನೆಗಳನ್ನು ಇಲಾಖೆಯ ಈ ಕಚೇರಿಯಿಂದ ರೈತರಿಗೆ ಕಲ್ಪಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದರು..

ಒಟ್ಟಿನಲ್ಲಿ ಇಡೀ ದೇಶ, ರಾಜ್ಯ, ಜಿಲ್ಲೆ, ತಾಲೂಕು, ಹಾಗೂ ಪ್ರತಿ ಹಳ್ಳಿಗಳು ಇಂದು ಕೃಷಿಯನ್ನು ನೆಚ್ಚಿಕೊಂಡು ಬದುಕುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಗಳು ಕೃಷಿ ಹಾಗೂ ರೈತರಿಗೆ ಸಂಬಂಧಿಸಿದಂತ ಇಲಾಖೆಗಳಿಗೆ ಸೂಕ್ತ ಸಂಖ್ಯೆಯಲ್ಲಿ ಸಿಬ್ಬಂದಿ ನಿಯೋಜನೆ ಮಾಡಿ, ರೈತರಿಗೆ ಅನುಕೂಲ ಆಗುವ ಹಾಗೂ ಕೃಷಿ ಅಭಿವೃದ್ದಿ ದೃಷ್ಟಿಯಿಂದ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತ, ಕೃಷಿ, ಇಲಾಖೆ, ರಾಜ್ಯ, ಎಲ್ಲವೂ ಉನ್ನತಿಯತ್ತ ಸಾಗಬೇಕು ಎನ್ನುವದೇ ಎಲ್ಲರ ಆಶಯ..

ವರದಿ ಪ್ರಕಾಶ್ ಕುರಗುಂದ..