ಸಿಬ್ಬಂದಿ ಸ್ನೇಹಿ ಅಧಿಕಾರಿ ಎನಿಸಿಕೊಂಡ ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ..

ಸಿಬ್ಬಂದಿ ಸ್ನೇಹಿ ಅಧಿಕಾರಿ ಎನಿಸಿಕೊಂಡ ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ..

ಬೆಳಗಾವಿ : ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಪಡೆದ ನಂತರ ಮಾನ್ಯ ಆಯುಕ್ತರು ತಮ್ಮ ಶಿಸ್ತು ಹಾಗೂ ಮಾನವೀಯ ಗುಣಗಳಿಂದ, ಪಾಲಿಕೆಯ ನೌಕರರ ಹಿತದೃಷ್ಟಿಯುಳ್ಳ ಆದೇಶಗಳನ್ನು ಹೊರಡಿಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..

ನೌಕರರ ಬಹುದಿನಗಳ ಬೇಡಿಕೆಯಾದ ಪದೋನ್ನತಿ ವಿಷಯವನ್ನು ಸುಖಾಂತ್ಯ ಗೊಳಿಸಿದ್ದು, ಗ್ರೂಪ್ ಸಿ ದ್ವಿ.ದ.ಸ ಹುದ್ದೆಯಿಂದ ಪ್ರ.ದ.ಸ ಹುದ್ದೆಗೆ ಹಾಗೂ ಗ್ರೂಪ್ ಡಿ ವೃಂದ ನೌಕರರಿಗೆ ಗ್ರೂಪ್ ಸಿ, ದ್ವಿ.ದ.ಸ ಹುದ್ದೆಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದ್ದಾರೆ..

ಪಾಲಿಕೆಯ ಎಲ್ಲ ಸಿಬ್ಬಂದಿಗಳಿಗೆ 17% ಮಧ್ಯಂತರ ಪರಿಹಾರ, ಗಳಿಕೆ ರಜೆ ನಗಧಿಕರಣ, ತುಟ್ಟಿಭತ್ಯೆ ವ್ಯತ್ಯಾಸದ ವೇತನ ಹೀಗೆ ಅನೇಕ ಸಿಬ್ಬಂದಿ ಸ್ನೇಹಿ ನಿರ್ಧಾರಗಳಿಂದ ನೀಡುವುದರ ಮೂಲಕ ಪಾಲಿಕೆಯ ನೌಕರರ ಮೇಲೆ ಅಪಾರವಾದ ಕಾಳಜಿಗೆ ಪಾತ್ರವಾದ ಹಾಗೂ ಸೇವಾ ಸೌಲಭ್ಯಗಳನ್ನು ನೀಡುವಲ್ಲಿ ಯಾವತ್ತು ಮುಂಚೂಣಿಯಲ್ಲಿ ನಿಲ್ಲುವ ಮಾನ್ಯ ಆಯುಕ್ತರಿಗೆ ಇಂದು ಪಾಲಿಕೆಯ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು..

ಈ ಸಂದರ್ಭದಲ್ಲಿ ಉಪ ಆಯುಕ್ತರು (ಆಡಳಿತ) ನೌಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸಹಸದಸ್ಯರು ಹಾಜರಿದ್ದರು.

ವರದಿ ಪ್ರಕಾಶ ಕುರಗುಂದ..