ಆಯುಕ್ತರು ಕೆಲವೇ ತಿಂಗಳಲ್ಲಿ ಮುಂಬಡ್ತಿ ಪಡೆದು ಐಎಎಸ್ ಆಗುವವರು..
ಪಾಲಿಕೆ ಆಯುಕ್ತರ ಮೇಲೆ ನಮಗೇನು ಅಸಮಾಧಾನವಿಲ್ಲ..
ಶಾಸಕ ಅಭಯ ಪಾಟೀಲ್..
ಬೆಳಗಾವಿ : ಗುರುವಾರ ದಿನಾಂಕ 10/01/2024ರಂದು ಪಾಲಿಕೆಯ ಪರಿಷತ ಸಭಾ ಭವನದಲ್ಲಿ ಮಹಾಪೌರರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯು ಕೆಲವು ಸಣ್ಣಪುಟ್ಟ ಚರ್ಚೆ ಹಾಗೂ ಕೆಲ ವಿಷಯಗಳ ಅನುಮೋದನೆಗಳೊಂದಿಗೆ ಶಾಂತ ರೀತಿಯಲ್ಲಿ ಸಮಾಪ್ತಿಗೊಂಡಿದೆ..
ಪ್ರಾರಂಭದಲ್ಲಿ ನಗರ ಸೇವಕರಾದ ಹನುಮಂತ ಕೊಂಗಾಲಿ ಅವರು ಪಾಲಿಕೆಗೆ ಬರಬೇಕಾದ ಅನುದಾನದ ಕಡಿತದ ಕುರಿತಾಗಿ ಪ್ರಶ್ನೆ ಕೇಳಿದ್ದು, (ಕಳೆದ ವರ್ಷದಲ್ಲಿ %10, ಈ ವರ್ಷದ 15% ಸರ್ಕಾರದಿಂದ ಬರುವ ಅನುದಾನ ಕಡಿತವಾಗಿ ಬಂದಿರುವ ಬಗ್ಗೆ) ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳನ್ನು ಕೇಳಿದಾಗ, ಸರ್ಕಾರದಿಂದ ಪಾಲಿಕೆಗೆ ಬರುವ ಅನುದಾನದಲ್ಲಿ ಕಡಿತವಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಉತ್ತರ ಅಧಿಕಾರಿಗಳಿಂದ ಇತ್ತು..

ಇನ್ನು ಪಾಲಿಕೆಯ ವಿದ್ಯುತ್ ವಿಭಾಗಕ್ಕೆ ಸರ್ಕಾರದಿಂದ ಬರಬೇಕಾದ ಬಾಕಿ ಉಳಿದ 17 ಕೋಟಿ ಅನುದಾನವನ್ನು ಆದಷ್ಟು ಬೇಗ ತರಿಸಿಕೊಳ್ಳಲು ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಮಹಾಪೌರರು ಸೂಚಿಸಿ, ಸಭೆಯ ಸಮ್ಮತಿ ಪಡೆದು ಈ ವಿಷಯವನ್ನು ಮಂಡನೆ ಮಾಡಿದರು..
ಆಡಳಿತ ಪಕ್ಷದ ನಾಯಕ ಗಿರೀಶ್ ದೊಂಗಡಿ ಅವರು ಮಾತನಾಡಿ ಎಲ್ ಆಂಡ್ ಟಿ ಅವರು ಬಾಕಿ ಉಳಿಸಿಕೊಂಡಿರುವ ಕೆಲಸ ಅಚ್ಚು ಕಟ್ಟಾಗಿ ಮಾಡಲಿ ಎಂದಾಗ ಇದಕ್ಕೆ ದ್ವನಿ ಗುಡಿಸಿದ ಬೆಳಗಾವಿ ದಕ್ಷಿಣದ ಶಾಸಕ ಅಭಯ ಪಾಟೀಲ್ ಅವರು, ರಿಸ್ಟೊರೇಶನ್ ಸರಿಯಾಗಿ ಮಾಡಬೇಕು, ಎಷ್ಟು ಅಂತ ಜನರಿಂದ ಬೆಯಿಸುಕೊಳ್ಳುತ್ತಿರಿ, ನಿಮ್ಮ ಅರ್ಧಮರ್ಧ ಕೆಲಸದಿಂದ ನಾವು ಜನರಿಂದ ಬೇಯಿಸಿಕೊಳ್ಳುತ್ತಿದ್ದೇದೆ, ನೀವು ಯಾವುದೇ ಕೆಲಸವನ್ನು ಪೂರ್ಣವಾಗಿ ಸರಿಯಾಗಿ ಮಾಡುವದಿಲ್ಲ ಎಂದು ಆರೋಪ ಮಾಡಿದರು, ಇದಕ್ಕೆ ಉತ್ತರದ ಶಾಸಕರಾದ ಆಶಿಫ್ ಸೇಠ್ ಅವರು ಸಹಮತ ವ್ಯಕ್ತಪಡಿಸಿದರು..

ಜೊತೆಗೆ ಅನೇಕ ನಗರ ಸೇವಕರು ಎಲ್ ಆಂಡ್ ಟಿ ಕೆಲಸದ ಕುರಿತಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಭಾಗದ ಕೆಲಸಗಳು, ಸಮಸ್ಯೆಗಳು ತ್ವರಿತವಾಗಿ ಬಗೆಹರಿಸಬೇಕೆಂದು ಮಹಪೌರರಲ್ಲಿ ವಿನಂತಿಸಿಕೊಂಡರು..
ನಂತರ ವಿವಾದಾತ್ಮಕ 80 ಆಡಿ ಅಗಲದ ಎಸ್ಬಿಐ ಬ್ಯಾಂಕಿನಿಂದ ಓಲ್ಡ್ ಪಿಬಿ ರಸ್ತೆವರೆಗಿನ ನಿರ್ಮಾಣದ ಜಾಗವನ್ನು ಮರಳಿ ಮಾಲೀಕರಿಗೆ ನೀಡಿ, ರಸ್ತೆ ಬಂದು ಮಾಡಿದ ವಿಷಯದ ಕುರಿತಾಗಿ ವಿಸ್ತಾರವಾಗಿ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು, ನಾವು ರಸ್ತೆ ಮಾಡುವಾಗ ಸಾರ್ವಜನಿಕರ ಹಿತದೃಷ್ಟಿಯಿಂದಲೇ ಮಾಡಿದ್ದು, ಅದರಲ್ಲಿ ಯಾವುದೇ ಸ್ವಾರ್ಥ ಇರಲಿಲ್ಲ, ಆ ರಸ್ತೆ ನಿರ್ಮಾಣದ ಪೂರ್ವದಲ್ಲಿ ಹತ್ತರಿಂದ ಹನ್ನೆರಡು ಸಲ ಅಲ್ಲಿಯ ಜನರೊಂದಿಗೆ ಚರ್ಚೆ ಮಾಡಿದ್ದೇವೆ, 95 ರಷ್ಟು ಜನ ತಮ್ಮ ಸಮ್ಮತಿ ನೀಡಿದ್ದು, ನಾಲ್ಕೈದು ಜನ ಮಾತ್ರ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಹೋಗಿದ್ದರು, ಅಲ್ಲಿ ಆಸ್ತಿ ಕಳೆದುಕೊಂಡವರಿಗೂ ನಾವು ಯಾವುದೇ ರೀತಿಯ ಅನ್ಯಾಯ ಮಾಡದೇ ಸೂಕ್ತ ನ್ಯಾಯ ನೀಡುವ ತೀರ್ಮಾನವನ್ನು ನಮ್ಮ ಪಾಲಿಕೆಯ ಪರಿಷತ್ ಮಾಡಿತ್ತು ಎಂದರು..
ಆಗಿನ ಆಯುಕ್ತರು ಭೂ ಒತ್ತುವರಿ ಮಾಡದೇ, ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು, ಆರೋಪ ಮಾಡಿ ರಸ್ತೆ ನಿರ್ಮಾಣ ಕಾನೂನುಬಾಹಿರ ಎನ್ನುವದು ಸರಿಯಲ್ಲ, ಈ ರಸ್ತೆಯ ನಿರ್ಮಾಣದ ವಿಷಯ ಸರ್ಕಾರದ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳ ನಿರ್ಣಯದಂತೆ ಆಗಿದೆ, ಅಲ್ಲಿ ನಾಲ್ಕೈದು ಐಎಎಸ್ ಅಧಿಕಾರಿಗಳು ಇದನ್ನು ಅನುಮೋದನೆ ಮಾಡಿದ್ದಾರೆ, ಜನರಿಗೆ ಒಳ್ಳೆಯದಾಗುವುದು ನಿಟ್ಟಿನಲ್ಲಿ ಕೆಲ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ, ಇಲ್ಲವಾದರೆ ಬೆಳಗಾವಿ ನಗರದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ನಡೆಯುವುದಿಲ್ಲ ಎಂದರು.

ಏಷ್ಟೋ ಅಭಿವೃದ್ಧಿ ಕಾರ್ಯಗಳು 100 ರೂಪಾಯಿಯ ಬಾಂಡಿನ ಆಸ್ತಿಗಳ ಮೇಲೆ ಆಗಿವೆ, ಹಾಗಂತ ಅವೆಲ್ಲವನ್ನೂ ಕಾನೂನುಬಾಹಿರ ಅನಧಿಕೃತ ಅಂತ ನಾಶ ಮಾಡಲು ಬರುವದಿಲ್ಲ ಎಂದರು, ಎಲ್ಲರ ಅಧಿಕಾರಗಳಲ್ಲಿಯೂ ಇಂತಹ ಲೋಪದೋಷ ಆಗಿರುತ್ತವೆ, ಅದು ಜನರಿಗಾಗಿ, ಅವರಿಗೆ ಸೌಲಭ್ಯ ನೀಡುವುದಕ್ಕಾಗಿ ಎಂದರು..
ಅಧಿಕಾರಿಗಳು ನಮ್ಮ ಮಾತು ಕೇಳಿ ಆಗ ಕೆಲಸ ಮಾಡಿರುತ್ತಾರೆ, ಪಾಪ ಈಗ ಎಲ್ಲದಕ್ಕೂ ಅವರನ್ನು ಹೊಣೆ ಮಾಡಿದರೆ ನಾವು ಅವರ ಜೊತೆ ನಿಲ್ಲಬೇಕಾಗುತ್ತದೆ ಎಂದರು, ಈಗ ಇರುವ ಪಾಲಿಕೆ ಆಯುಕ್ತರ ಮೇಲೆಯೂ ನಮಗೇನು ಕೋಪ ಅಸಮಾಧಾನವಿಲ್ಲ, ಅವರ ವಿರುದ್ಧ ನಾವು ಯಾವುದೇ ನಿರ್ಣಯ ಪಾಸು ಮಾಡುವದಿಲ್ಲ,ಇನ್ನೇನು ಕೆಲವು ತಿಂಗಳಲ್ಲಿ ಅವರು ಮುಂಬಡ್ತಿ ಪಡೆದುಕೊಂಡು ಐಎಎಸ್ ಅಧಿಕಾರಿ ಆಗುವರು, ಅವರಿಗೆ ಒಳ್ಳೆಯದಾಗಲಿ, ಆದರೆ ಕೋರ್ಟ್ ಆದೇಶದಂತೆ ರಸ್ತೆಯ ಜಾಗ ಬಿಟ್ಟು ಕೊಡುವಾಗ ಪಾಲಿಕೆಯ ಪರಿಷತ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು, ಇಲ್ಲವೇ ಮಹಾಪೌರರಿಗೆ ಒಂದು ಕರೆ ಮಾಡಿ ವಿಷಯವಾದರೂ ತಿಳಿಸಬೇಕಿತ್ತು ಎಂಬುದೇ ನಮ್ಮ ಕೊರಗು ಎಂದರು..
ಈಗ ರಸ್ತೆ ಬಂದ ಆಗಿರುವದರಿಂದ ಬಾತ್ಕಾಂಡೆ ಶಾಲೆಯ ರಸ್ತೆಯಲ್ಲೇ ಬ್ರಹತ್ ವಾಹನಗಳು ಸಂಚರಿಸುತ್ತಿದ್ದು, ಆ ಮಕ್ಕಳ ಹಾಗೂ ಅವರ ಪಾಲಕರ ಕಷ್ಟ ನೋಡಲಾಗದು, ಆ ಶಾಲೆಯ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಈ 80 ಆಡಿ ರಸ್ತೆಯನ್ನು ನಿರ್ಮಿಸಿದ್ದು, ಈಗ ಆ ಶಾಲೆಯ ಮಕ್ಕಳ ಗೋಳು ಕೇಳುವವರ್ಯಾರು? ದಕ್ಷಿಣದ ನಾಗರಿಕರಿಗೆ, ವ್ಯಾಪಾರಸ್ಥರಿಗೆ, ಸಾರಿಗೆಗೆ, ಕೊನೆಗೆ ಸಂಚಾರಿ ಪೊಲೀಸರಿಗೂ ಈ ರಸ್ತೆ ಬಂದ ಆಗಿರುವ ತೀವ್ರ ಸಮಸ್ಯೆ ಕಾಡುತ್ತಿದೆ, ಬಾಕಿ ಇರುವ ಸಣ್ಣ ಪುಟ್ಟ ರಸ್ತೆಗಳೆಲ್ಲ ಸಂಚಾರ ವ್ಯಸ್ಥವಾಗಿ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚುತ್ತಿದೆ ಎಂದಿದ್ದಾರೆ..

ಇದಕ್ಕೆ ಪ್ರತಿಕ್ರಿಯೆ ನೀಡಿದ ಉತ್ತರದ ಶಾಸಕ ಆಷಿಪ್ ರಾಜು ಸೇಠ್ ಅವರು, ಜನರ ಕಲ್ಯಾಣದ ಸಲುವಾಗಿ ಮಾಡುವ ಪ್ರತಿ ಕೆಲಸಕ್ಕೂ ನಮ್ಮ ಸಹಕಾರ ಇದೆ, ಈಗಲೂ ಸಾಧ್ಯವಾದರೆ ನಾವು ನೀವು ಸೇರಿ ಹೋಗಿ ಬಾಳಾಸಾಹೇಬ ಪಾಟೀಲ್ ಹತ್ತಿರ ಮಾತನಾಡಿ, ಸಾಧ್ಯ ಆದರೆ ರಸ್ತೆಯನ್ನು ಮತ್ತೆ ಪ್ರಾರಂಭಿಸುವ ಪ್ರಯತ್ನ ಮಾಡೋಣ ಎಂದರು..
ಒಟ್ಟಿನಲ್ಲಿ ಇಂದಿನ ಪಾಲಿಕೆಯ ಸಾಮಾನ್ಯ ಸಭೆ ಅತ್ಯಂತ ಕುತೂಹಲದ ಚರ್ಚೆ ಆಗುತ್ತವೆ, ಗಂಭೀರ ತೀರ್ಮಾನಗಳು ಆಗುತ್ತವೆ ಅಂದುಕೊಂಡವರ ವಿಚಾರ ಉಲ್ಟಾ ಆಗಿ ಎಲ್ಲಾ ಚರ್ಚೆಗಳು ಸಮಾಧಾನಕರವಾಗಿ ನಡೆದು, ಸಭೆಯು ಊಟದ ವೇಳೆಗೆನೇ ಸುಖಾಂತ್ಯ ಕಂಡಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..