ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹರಕೆ ಹೊತ್ತ ಸತೀಶ ಜಾರಕಿಹೊಳಿ ಬೆಂಬಲಿಗರು..
ಬೆಳಗಾವಿ : ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಬೆಂಬಲಿಗರು ಇದ್ದಾರೆ, ಅವರ ಸಮಾಜಮುಖಿ ಕಾರ್ಯವೈಖರಿಗೆ ಮೆಚ್ಚಿ ಅವರ ಅನುಯಾಯಿಗಳಾಗಿರುವವರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಇದ್ದಿದ್ದು, ಅಂತವರಲ್ಲಿ ಕೆಲ ಬೆಂಬಲಿಗರು ಮೊನ್ನೆ ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೇಟಿ ನೀಡಿ ಹರಕೆ ಹೊತ್ತಿದ್ದು ವಿಶೇಷವಾಗಿದೆ.
ಸ್ವತಃ ತಮ್ಮ ಸಮಸ್ಯೆ, ಕೆಲಸ, ಬೇಡಿಕೆಗಾಗಿ ಗುಡಿ ಗೋಪುರಗಳಿವೆ, ಪುಣ್ಯ ಕ್ಷೇತ್ರಗಳಿಗೆ ಹೋಗಿ ಬೇಡಿಕೊಳ್ಳುವ ಪರಿಪಾಠ ಮೊದಲಿನಿಂದಲೂ ಬಂದಿದ್ದು, ಈಗ ಬೆಳಗಾವಿ ಜಿಲ್ಲೆಯ ಸತೀಶ ಜಾರಕಿಹೊಳಿ ಅವರ ಅಪ್ಪಟ ಅನುಯಾಯಿಗಳು ತಮ್ಮ ನಾಯಕನ ಶ್ರೇಯಸ್ಸಿಗಾಗಿ ದೈವಸನ್ನಿಧಿಯಲ್ಲಿ ಹರಕೆ ಹೊತ್ತುದ್ದು ವಿಶೇಷವಾಗಿದೆ.

ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ಸಿನ ಎಸ್ಟಿ ಘಟಕದ ಅಧ್ಯಕ್ಷರಾದ ಬಾಳೇಶ ದಾಸನಟ್ಟಿ ಅವರ ನೇತೃತ್ವದ ಬಳಗ ಸುಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಸತೀಶ್ ಜಾರಕಿಹೊಳಿ ಅವರು ಆದಷ್ಟು ಬೇಗ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ತಮ್ಮ ಬೇಡಿಕೆಯನ್ನು ಹರಕೆಯ ರೂಪದಲ್ಲಿ ಸ್ವಾಮಿಯ ಸನ್ನಿಧಿಯಲ್ಲಿ ಇಟ್ಟು, ಸ್ವಾಮಿ ತಮ್ಮ ಹರಕೆಯನ್ನು ಈಡೇರಿಸಲಿ ಎಂದು ಬೇಡಿಕೊಂಡಿದ್ದಾರೆ..
ಸತೀಶ ಜಾರಕಿಹೊಳಿ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಬೇಕು ಎನ್ನುವ ಬೆಂಬಲಿಗರ, ಅನುಯಾಯಿಗಳ ಅಭಿಲಾಷೆ ಇಂದು ದೈವ ಸನ್ನಿಧಿವರೆಗೂ ಬಂದಿದ್ದು, ಎಲ್ಲವೂ ಒಳ್ಳೆಯದಾಗುವ ಭರವಸೆ ಇಟ್ಟುಕೊಂಡಿದ್ದಾರೆ.
ಇನ್ನು ಈ ಭೇಟಿಯ ಸಂದರ್ಭದಲ್ಲಿ ಬಾಳೇಶ ದಾಸನಟ್ಟಿ ಅವರ ಜೊತೆ, ಹುಕ್ಕೇರಿ ಕೆಇಬಿ ನಿರ್ದೇಶಕರಾದ ಈರಪ್ಪ ಬಂಜಿರಾಮ, ಯಮಕನಮರಡಿ ಕಾಂಗ್ರೆಸ್ ಎಸ್ಟಿ ಉಪಾಧ್ಯಕ್ಷರಾದ ಮಾರುತಿ ಕುದರಿ, ಗ್ರಾಮ ಪಂಚಾಯತ ಸದಸ್ಯ ಲಗಮಣ್ಣ ಗುರವ, ರಾಮಚಂದ್ರ ನಾಯಿಕ, ಹಾಗೂ ಗಂಗಾರಾಮ ಈರಬಾವಿ ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..