ಸುಮಾರು 70 ಲಕ್ಷ ಮೌಲ್ಯದ ಹಣ ಹಾಗೂ ಚಿನ್ನಾಭರಣ ಕದ್ದ ಕದೀಮ ಕಳ್ಳರು..
ಕಳ್ಳರು ಕದ್ದ ಕಾರನ್ನು ಬೆಳಗಾವಿಯಲ್ಲಿ ಪತ್ತೆ ಹಚ್ಚಿದ ಹುಬ್ಬಳ್ಳಿಯ ಗೋಕುಲನಗರ ಪೊಲೀಸ್ ಠಾಣೆಯ ಸಿಬ್ಬಂದಿ..
ಬೆಳಗಾವಿ : ಗುರುವಾರ ಸಂಜೆ 8ರ ಸುಮಾರಿಗೆ ನಗರದ ಪೋರ್ಟ್ ರಸ್ತೆಯ ದೇಶಪಾಂಡೆ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಹುಂಡೈ ಕಾರನ್ನು ಪೊಲೀಸ್ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರು, ಇತರ ಪರಿಣಿತರು ತೀವ್ರ ತಪಾಸಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು..
ಹೋಗಿ ವಿಚಾರಿಸಿದಾಗ, ಸುಮಾರು ಹತ್ತಾರು ಸಂಖ್ಯೆಯಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳೆಲ್ಲ ಹುಬ್ಬಳ್ಳಿಯ ಗೋಕೂಲ ನಗರದ ಪೊಲೀಸ್ ಠಾಣೆಯ ಸಿಬ್ಬಂದಿ ಎಂದು ತಿಳಿದು ಬಂದಿದ್ದು, ಗೋಕುಲ್ ನಗರ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮನೆಯಲ್ಲಿ ಬೆಳಿಗ್ಗೆ ಕಳ್ಳರು ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ್ದು, ಅದರ ಮೊತ್ತ ಸುಮಾರು 70 ರಿಂದ 80 ಲಕ್ಷ ಎಂದು ಅಂದಾಜಿಸಲಾಗಿದೆ..

ಕಳ್ಳರು ಹಣ ಮತ್ತು ಆಭರಣ ಲೂಟಿ ಮಾಡಿದ್ದಲ್ಲದೇ, ಆ ಮನೆಯವರ ಕಾರನ್ನೂ ಕೂಡಾ ಕದ್ದುಕೊಂಡು ಬಂದಿದ್ದು, ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುವಾಗ ಎಲ್ಲಾ ಚೆಕ್ ಪೋಸ್ಟ್ ಗಳಿಂದ ಹಾಗೂ ಸಿಸಿ ಕ್ಯಾಮರಾಗಳಿಂದ ಮಾಹಿತಿ ಪಡೆದ ಪೊಲೀಸರು, ಕೊನೆಗೆ ಬೆಳಗಾವಿಯಲ್ಲಿ ಕಳ್ಳರು ಕಳವು ಮಾಡಿದ ಕಾರನ್ನು ಪತ್ತೆಹಚ್ಚಿದ್ದಾರೆ..
ಕಳ್ಳರು ಕಾರನ್ನು ಇಲ್ಲಿ ನಿಲ್ಲಿಸಿ, ಹಣದೊಂದಿಗೆ ಪರಾರಿಯಾಗಿದ್ದು, ತನಿಖೆ ಮುಂದುವರೆಸುತ್ತಾ, ಕಳ್ಳರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಪೊಲೀಸ್ ಪಡೆ ನಿರತವಾಗಿದೆ..
ಈ ಪ್ರಕರಣದ ತನಿಖೆಯಲ್ಲಿ ಹುಬ್ಬಳ್ಳಿ ಪೊಲೀಸರಿಗೆ ಬೆಳಗಾವಿಯ ಮಾರ್ಕೆಟ್ ಠಾಣೆಯ ಪೊಲೀಸರು ಕೂಡಾ ಸಹಕರಿಸಿ, ತನಿಖೆ ಮುಂದುವರೆಸಿದ್ದಾರೆ..
ವರದಿ ಪ್ರಕಾಶ ಕುರಗುಂದ..