ಸುಳೇಭಾವಿ ಹಾಗೂ ಮೊದಗಾ ಗ್ರಾಮಗಳ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ..

ಸುಳೇಭಾವಿ ಹಾಗೂ ಮೊದಗಾ ಗ್ರಾಮಗಳ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ..

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಕ್ತಿದೇವತೆಗಳ ಆಶೀರ್ವಾದ ಪಡೆದ ಗೋಕಾಕ ಸಾಹುಕಾರರು.

ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಸುಳೆಭಾವಿ ಹಾಗೂ ಮೊದಗಾ ಗ್ರಾಮಗಳ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ಜಾತ್ರೆಗಳು ಅತೀ ಅದ್ದೂರಿಯಾಗಿ ಹಾಗೂ ಶ್ರದ್ಧಾ ಭಕ್ತಿಪೂರ್ವಕವಾಗಿ ನಡೆಯುತ್ತಿದ್ದು, ಮೊದಲಿನಿಂದಲೂ ಆ ಕ್ಷೇತ್ರದಲ್ಲಿ ಹೆಚ್ಚು ಒಡನಾಟವಿರುವ ಮಾಜಿ ಸಚಿವರು ಹಾಗೂ ಗೋಕಾಕ ಮತಕ್ಷೇತ್ರದ ಶಾಸಕರಾದ ರಮೇಶ ಜಾರಕಿಹೊಳಿ ಅವರು ಜಾತ್ರೆಯ ನಿಮಿತ್ತ ಶಕ್ತಿದೇವಿಗಳ ಸನ್ನಿಧಿಗೆ ಬೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಶುಭ ಶುಕ್ರವಾರ ದಿವಸವಾದ ಇಂದು ಎರಡೂ ಗ್ರಾಮಗಳ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನಗಳಿಗೆ ಬೇಟಿ ನೀಡಿ, ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುವ ಮೂಲಕ ಎರಡೂ ಗ್ರಾಮಗಳ ಶಕ್ತಿ ದೇವತೆಗಳು ಎಂದೆನಿಸಿರುವ ಅಮ್ಮನವರ ಆಶೀರ್ವಾದವನ್ನು ಪಡೆದಿದ್ದಾರೆ.

ಅಪಾರ ದೈವಿಭಕ್ತರು ಹಾಗೂ ಆಧ್ಯಾತ್ಮ ವಿಚಾರಗಳಲ್ಲಿ ನಂಬಿಕೆಯಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಇಂತಹ ಧಾರ್ಮಿಕ ಕಾರ್ಯಗಳ ಉತ್ಸವಗಳಲ್ಲಿ ಅತೀ ಆನಂದದಿಂದ ಭಾಗಿಯಾಗುವುದು ಮೊದಲಿನಿಂದಲೂ ರೂಢಿಯಿದೆ, ಜೊತೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತುಂಬಾ ಜನರು ರಮೇಶ ಸಾಹುಕಾರರ ಅನುಯಾಯಿಗಳು ಇರುವದರಿಂದ ಇಂದು ತಮ್ಮ ಎಲ್ಲಾ ಆತ್ಮೀಯರ ಜೊತೆ ಬೆರೆತು, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ, ಆದಿಶಕ್ತಿ ದೇವತೆಗಳಾದ ಶ್ರೀ ಮಹಾಲಕ್ಷ್ಮಿ ಅಮ್ಮನವರ ಆಶೀರ್ವಾದ ಪಡೆದಿದ್ದಾರೆ ಎಂಬ ಮಾಹಿತಿಯಿದೆ..

ಜಾತ್ರೋತ್ಸವದ ಭೇಟಿಯ ಈ ವೇಳೆಯಲ್ಲಿ, ಶಾಸಕರ ಆಪ್ತರಾದ ಸತೀಶ ಶಹಾಪೂರ್ಕರ, ಪ್ರಕಾಶ್, ಎರಡೂ ಗ್ರಾಮಗಳ ಪ್ರಮುಖರು, ಸಾಹುಕಾರರ ಅನುಯಾಯಿಗಳು, ಸ್ಥಳೀಯ ಯುವಸಮೂಹ ಶಾಸಕರ ಜೊತೆಗಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ