ಸುವರ್ಣ ಕರ್ನಾಟಕ ಸವಿನೆನಪಿಗಾಗಿ ನಾಟಕೋತ್ಸವ..!!!
ಬೆಳಗಾವಿ : ಉಡುಪಿಯ ನಮ ತುಳುವೆರ್ ಕಲಾ ಸಂಘಟನೆಯಿಂದ ಸರಜೂ ಕಾಟ್ಕರ್ ರಚಿಸಿದ “ಅಂಬೆ” ಹಾಗೂ ಗುರುರಾಜ್ ಮಾರ್ಪಾಳ್ಳಿ ನಿರ್ದೇಶಿಸಿದ “ಅವ್ವ ನನ್ನವ್ವ” ನಾಟಕ ಫೆ.3 ಮತ್ತು 4 ರಂದು 2 ದಿನಗಳ ಕಾಲ ಬೆಳಗಾವಿಯ ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಮ ತುಳುವೆರ್ ಕಲಾ ಸಂಘದ ಅಧ್ಯಕ್ಷರಾದ ಸುಕುಮಾರ ಮೋಹನ ತಿಳಿಸಿದರು..
ನಗರದ ಕನ್ನಡ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಗಳ ಪ್ರದರ್ಶನಗಳ ಜೊತೆಗೆ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಸವಿನೆನಪಿಗಾಗಿ ಬೆಳಗಾವಿಯ 4 ಜನರಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಪ್ರಶಸ್ತಿ ಪ್ರಧಾನ ಸಮಾರಂಭ ಫೆ.3 ರಂದು ಸಂಜೆ 6 ಗಂಟೆಗೆ ಬೆಳಗಾವಿ ಕನ್ನಡ ಭವನದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಡಾ.ಪ್ರಭಾಕರ ಕೋರೆ, ಕಲಾಸೇವೆಗೆ ವೀಣಾ ಲೋಕೊರ, ಸಾಹಿತ್ಯಕ್ಷೇತ್ರದಲ್ಲಿ ಡಾ ವಿ ಎಸ್, ಮಾಳಿ ಹಾಗೂ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದ ಬಿ.ಎಸ್. ಗವಿಮಠ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಮ ತುಳುವೆರ್ ಕಲಾ ಸಂಘಟನೆಯ ಕಾರ್ಯದರ್ಶಿ ಜಗದೀಶ ಜಾಲ, ಸಾಹಿತಿ ಸರಜೂ ಕಾಟ್ಕರ್ ಸೇರಿದಂತೆ ಇತರರು ಉಪಸ್ಥತರಿದ್ದರು..
ವರದಿ ಪ್ರಕಾಶ ಕುರಗುಂದ..