ಸೆಕೆಯಲ್ಲಿ ಸಾರ್ವಜನಿಕರಿಗೆ ಸಂಕಟ ತಂದಿರುವ ಬೆಳಗಾವಿ ಪಾಲಿಕೆ..

ಸೆಕೆಯಲ್ಲಿ ಸಾರ್ವಜನಿಕರಿಗೆ ಸಂಕಟ ತಂದಿರುವ ಬೆಳಗಾವಿ ಪಾಲಿಕೆ..

ಜನನ, ಮರಣ ಪ್ರಮಾಣಪತ್ರ ಕೇಂದ್ರದಲ್ಲಿ ದಿನಗಟ್ಟಲೇ ಕಾಯುವ ಸ್ಥಿತಿ..

ಸಿಬ್ಬಂದಿ ಕೊರತೆ ಹಾಗೂ ಸರ್ವರ್ ಸಮಸ್ಯೆಗೆ ಯಾವಾಗ ಪರಿಹಾರ ??

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯು ವಿಶಾಲವಾಗಿದ್ದು, ಜನಸಂಖ್ಯೆಯಲ್ಲಿಯೂ ಕೂಡಾ ದೊಡ್ಡ ಗಾತ್ರದಲ್ಲಿದೆ, 58 ವಾರ್ಡುಗಳ ಬ್ರಹತ್ ಜನವಸತಿ ಇರುವ ಈ ನಗರ ಪ್ರದೇಶದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರದ ಬೇಡಿಕೆ ಹೆಚ್ಚು ಇರುವ ಕಾರಣ, ವಿತರಣೆ ಕೂಡಾ ವ್ಯವಸ್ಥಿತವಾಗಿರಬೇಕಾಗುತ್ತದೆ, ಆದರೆ ಪಾಲಿಕೆ ಈ ವಿಷಯದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂಬ ಶಂಕೆ ಉಂಟಾಗಿದೆ..

ಇತ್ತೀಚೆಗೆ ಜನನ ಮತ್ತು ಮರಣ ಕೇಂದ್ರದಲ್ಲಿ ಗಮನಿಸಿದಾಗ ಮುಂಜಾನೆಯಿಂದ ಸಂಜೆವರೆಗೂ ಪ್ರಮಾಣಪತ್ರಕ್ಕಾಗಿ ಸಾರ್ವಜನಿಕರ ಸರದಿಸಾಲು ಇದ್ದೆ ಇರುತ್ತದೆ, ಸುಮಾರು ನಾಲ್ಕೈದು ಗಂಟೆ ಕಾದು ಸರದಿ ಸಾಲಿನಲ್ಲಿ ನಿಂತರೂ, ಕೆಲವೊಂದು ಸಾರಿ ಪ್ರಮಾಣಪತ್ರ ಸಿಗುವದಿಲ್ಲ,, ಇದರಿಂದ ಸಾರ್ವಜನಿಕರು ಬೇಜಾರಾಗಿ ಪಾಲಿಕೆ ಅಧಿಕಾರಿಗಳ ಮೇಲೆ ಸಿಡುಕುವದು ಸಾಮಾನ್ಯವಾಗಿದೆ..

ಈ ಸಮಸ್ಯೆಯ ಬಗ್ಗೆ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ವಿಚಾರಿಸಿದಾಗ, ಚುನಾವಣೆಯ ಕೆಲಸಕ್ಕೆ ಕೆಲ ಸಿಬ್ಬಂದಿ ಹೋಗಿದ್ದರಿಂದ ಒಬ್ಬರೇ ಕೆಲಸ ಮಾಡಬೇಕಿತ್ತು, ಕೆಲಸ ತುಂಬಾ ಇರುವದರಿಂದ ಇಲ್ಲಿ ಇನ್ನು ಸಿಬ್ಬಂದಿಗಳ ಅವಶ್ಯಕತೆ ಇದೆ, ಅದೇರೀತಿ ಸರ್ವರ ಕೂಡಾ ಪದೇ ಪದೇ ಇಲ್ಲದಿರುವುದರಿಂದ ಪ್ರಮಾಣಪತ್ರ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ, ಅದಕ್ಕಾಗಿ ಈ ರೀತಿಯ ವಿಪರೀತತೆ ಉಂಟಾಗುತ್ತದೆ ಎಂದಿದ್ದಾರೆ..

ಜನಸಂದನಿಯ ವಿಪರೀತತೆಯನ್ನು ನಿವಾರಿಸಲೆಂದೇ ಅರ್ಜಿ ಕೊಡುವ ವಿಭಾಗ, ತಿದ್ದುಪಡಿ ವಿಭಾಗ, ಪ್ರಮಾಣಪತ್ರ ನೀಡುವ ವಿಭಾಗ ಎಂದು ಬೇರೆ ಮಾಡಿದ್ದೇವೆ ಎಂದು ಹೇಳುವ ಸಿಬ್ಬಂದಿಗಳು, ಸರ್ವರ್ ಸಮಸ್ಯೆಗೆ ಹಾಗೂ ಇನ್ನಷ್ಟು ಸಿಬ್ಬಂದಿಗಳ ನೇಮಿಸುವ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಸ್ವಲ್ಪ ಅನುಕೂಲ ಆಗುತ್ತದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..