ಸೋರುತಿಹಹು ಸರ್ಕಾರಿ ಕಚೇರಿಗಳ ಕಟ್ಟಡಗಳು..
ಸಿಬ್ಬಂದಿಗಳ ಜೊತೆಗೆ ಸಾರ್ವಜನಿಕರಿಗೂ ಸಮಸ್ಯೆ.
ಬೆಚ್ಚನೆಯ ಭಾಗ್ಯ ಬಯಸುತ್ತಿರುವ ಸರ್ಕಾರಿ ಕಚೇರಿಗಳು..
ಬೆಳಗಾವಿ : ಮಲೆನಾಡ ಮಳೆ ಬಲು ಬಿರುಸು ಎನ್ನುವ ಧಾಟಿಯಲ್ಲಿ ಈ ವರ್ಷದ ಬೆಳಗಾವಿಯ ಮಳೆ ವಿಪರೀತ ಸುರಿಯುತ್ತಿದ್ದು, ಜನವಸತಿ, ರಸ್ತೆ ಸಂಚಾರ, ಕೃಷಿ ವಲಯ, ವ್ಯಾಪಾರ ವಹಿವಾಟು, ಜನಜೀವನ, ಆರೋಗ್ಯ ಹಾಗೂ ಇನ್ನಿತರ ಸಾಮಾಜಿಕ ವ್ಯವಸ್ಥೆಗಳ ಏರಿಳಿತಕ್ಕೆ ಕಾರಣವಾಗಿದೆ ಎನ್ನಬಹುದಾಗಿದೆ..
ಅದೇ ರೀತಿ, ಈ ವರ್ಷದ ನಗರದಲ್ಲಿ ಆದ ವಿಪರೀತ ಮಳೆಯ ಆರ್ಭಟ ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆಯೂ ತನ್ನ ಪ್ರಭಾವ ಬೀರಿದೆ,
ಬಹುತೇಕ ಇಲಾಖೆಯ ಕಟ್ಟಡಗಳು ನಿರಂತರ ಸುರಿಯುವ ಮಳೆಗೆ ನಲುಗಿಹೋಗಿದ್ದು ಸರ್ಕಾರದಿಂದ ಬೆಚ್ಚನೆಯ ಭಾಗ್ಯವನ್ನು ಬಯಸುತ್ತವೆ..
ನಗರದ ಮುಖ್ಯ ಕಚೇರಿಯಾದ ಮಹಾನಗರ ಪಾಲಿಕೆಯ ಮುಖ್ಯ ಕಟ್ಟಡವು ನೋಡಲು ಹೋಸದರಂತೆ ಕಂಡರೂ, ವಿಧ್ಯುತ್ ವಿಭಾಗ, ಆಶ್ರಯ ವಿಭಾಗ, ಹಾಗೂ ನಗರ ಯೋಜನಾ ವಿಭಾಗಗಳಲ್ಲಿ ಮಳೆಯ ನೀರೇ ಇರುತ್ತದೆ, ವಿದ್ಯುತ್ ವಿಭಾಗ ಅಂತೂ ನೀರಿನಿಂದಲೇ ಆವರಿಸಿರುತ್ತದೆ..

ಇನ್ನು ಸಾರ್ವಜನಿಕರ ಮೌಲ್ಯಯುತವಾದ ಆಸ್ತಿಗಳ ದಾಖಲೆಗಳು ಇರುವ ಭೂಮಾಪನ ಕಚೇರಿಯ ಕಟ್ಟಡವೂ ಸೋರುವುಕೆಯಿಂದ ಮುಕ್ತವಾಗಿಲ್ಲ, ಅರ್ಜಿ ಪಡೆಯುವ ಹಾಗೂ ದಾಖಲೆಗಳನ್ನು ನೀಡುವ ಕೊಠಡಿಯಲ್ಲಿ ಮಳೆಯ ನಿರಿದ್ದೇ ದರ್ಬಾರು, ಮಳೆ ನೀರು ಬೀಳುವ ಅಂಜಿಕೆಗೆ ಸಿಬ್ಬಂದಿ ಒಬ್ಬರ ಪಕ್ಕ ಒಬ್ಬರು ಕುಳಿತು ಕೆಲಸ ಮಾಡುವ ಸ್ಥಿತಿ ಉಂಟಾಗಿದೆ..

ಇನ್ನು ನಗರದ ಉತ್ತರದ ಉಪನೊಂದನಾಧಿಕಾರಿ ಕಚೇರಿ ಸ್ವಲ್ಪ ನವೀಕರಣ ಮಾಡಿದ್ದರೂ ಕೂಡಾ ಗೋಡೆಗಳಿಂದ ಮಳೆ ನೀರು ಇಳಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ..
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಟ್ಟಡವು ಕೂಡಾ ಹಳೆಯದಾಗಿದ್ದು, ತೀವ್ರ ಮಳೆಗೆ ಕಚೇರಿಯ ಹಿಂದೆ ಇರುವ ಬ್ರಹತ್ತಾದ ಮರ ಕಟ್ಟಡದ ಮೇಲೆ ಬಿದ್ದಿರುವ ಕಾರಣ, ಎಲ್ಲಿ ಕಟ್ಟಡಕ್ಕೆ ಹಾನಿಯಾಗುತ್ತದೆಯೋ ಎಂಬ ಭಯದಲ್ಲಿ ಸಿಬ್ಬಂದಿಗಳು ಕಾರ್ಯ ಮಾಡುತ್ತಿದ್ದಾರೆ..

ಇನ್ನು ಬೆಳಗಾವಿಯ ತಹಶೀಲ್ದಾರ ಕಚೇರಿ ಕಟ್ಟಡ ಕೂಡಾ ತೀವ್ರ ಮಳೆಗೆ ತುತ್ತಾಗಿದ್ದು, ಸಾರ್ವಜನಿಕರು ಬಂದರೆ ಬೀಳುತ್ತಾರೆ ಎಂದು ಯಾರೂ ಬರದಂತೆ ನಡುವೆ ಕಟ್ಟಿಗೆಯ ದೊಡ್ಡ ಪಳಿಯನ್ನೆ ಇಟ್ಟಿದ್ದಾರೆ, ಇನ್ನು ಭೂಮಿ ಶಾಖೆಯಲ್ಲಿ ಎಲ್ಲಿ ಅಂದರಲ್ಲಿ ಮಳೆ ನೀರು ಬೀಳುತ್ತಿದ್ದು, ದಾಖಲೆಗಳನ್ನು ಸುರಕ್ಷಿತವಾಗಿಡುವದೇ ಸಾಹಸದ ವಿಷಯವಾಗಿದೆ..

ಇನ್ನು ಪಾಲಿಕೆಯ ಕಂದಾಯ ವಲಯಗಳಾದ ರಿಷಿಲ್ದಾರ ಗಲ್ಲಿಯ ಕಂದಾಯ ಕಚೇರಿ ಹಾಗೂ ದಾಖಲೆಗಳ ಕಚೇರಿಗಳ ಕಟ್ಟಡಗಳು ಅತೀ ಹಳೆಯದ್ದಾಗಿದ್ದು, ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಎಲ್ಲೆಂದರಲ್ಲಿ ಮಳೆ ನೀರು ಕಾಣಸಿಗುತ್ತದೆ..
ಪಾಲಿಕೆಯ ದಕ್ಷಿಣ ಕಂದಾಯ ವಲಯದ ಕಚೇರಿಯೂ ಕೂಡಾ ತೀವ್ರ ಮಳೆ ತುತ್ತಾಗಿದ್ದು, ಸೋರುವ ಮಳೆ ನೀರಿಗೆ ಬಜೆಟ್ ಇಟ್ಟು ಕೆಲಸ ಮಾಡುವ ಪರಿಸ್ಥಿತಿಯಲ್ಲಿ ಸಿಬ್ಬಂದಿಗಳಿದ್ದಾರೆ..

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯ ಕಟ್ಟದಲ್ಲಿಯಂತೂ ಸಿಬ್ಬಂದಿಗಳು ಜೀವ ಕೈಲಿಡಿದು ಕೆಲಸ ಮಾಡುವ ಪರಿಸ್ಥಿತಿ ಇದೆ, ಸರ್ಕಾರಿ ದಾಖಲೆ ಇರುವ ಬೀರು ಆಧಾರವಾಗಿ ಇಟ್ಟಿರುವೇವು ಅಂತಾ ಗೋಡೆ ಇನ್ನು ಹಾಗೆ ಇದೆ, ಇಲ್ಲವಾದರೆ ಯಾವತ್ತೂ ಬಿದ್ದು ಹೋಗುತ್ತಿತ್ತು ಎಂಬ ಭಯಬಿತವಾದ ಮಾತುಗಳನ್ನು ಸಿಬ್ಬಂದಿಗಳು ನೋವಿನಿಂದ ಹೇಳುವರು..

ತೀವ್ರ ಮಳೆಗೆ ಕಟ್ಟಡದ ಹಿಂಬಾಗದ ಮೇಲೆ ಮರ ಮುರಿದು ಬಿದ್ದಿದ್ದು, ಕಟ್ಟಡ ಹಾನಿಗೊಳ್ಳುವ ಭಯ ಸಿಬ್ಬಂದಿಯಲ್ಲಿ, ಮಳೆಗೆ ಗೋಡೆಯ ಮೂಲೆಯಲ್ಲಿ ನೀರು ಶೇಖರಣೆಗೊಂಡಿದ್ದು, ಸರ್ಕಾರಿ ದಾಖಲೆಗಳು ಹನಿಗೊಳ್ಳುವ ಪರಿಸ್ಥಿತಿ ಇದೆ, ಉಪನಿರ್ದೇಶಕರ ಕೊಠಡಿಯ ಸಮೇತ ಎಲ್ಲಾ ಕೋಣೆಗಳು ಹಳೆಯದಾಗಿದ್ದು ಗೋಡೆಗಳು ಕೂಡಾ ಸಿಳಿವೆ..
ಇನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಕಟ್ಟಡವೂ ಕೂಡಾ ಮಳೆ ನೀರಿನ ಸೋರಿಕೆಯಿಂದ ಹೊರತಾಗಿಲ್ಲ, ಮುಂಜಾನೆಯಿಂದ ಮಧ್ಯಾಹ್ನದ ವರೆಗೆ ಮೂರು ಸಾರಿ ಮಳೆ ನೀರನ್ನು ವರೆಸಿ ಸ್ವಚ್ಛ ಮಾಡಿದ್ದಾಗಿ ಅಲ್ಲಿಯ ಸಿಬ್ಬಂದಿ ಹೇಳಿಕೊಂಡಿದ್ದು, ಇಲ್ಲಿಯೂ ಕೂಡಾ ಬಕೆಟ್ ಇಟ್ಟಿರುವ ದೃಶ್ಯ ಸಾಮಾನ್ಯವಾಗಿತ್ತು..

ಈ ರೀತಿ ಸೋರುತ್ತಿರುವ ಸರ್ಕಾರಿ ಕಚೇರಿಗಳಿಂದ ಸಿಬ್ಬಂದಿಗಷ್ಟೇ ಅಲ್ಲದೇ, ಕೆಲಸದ ನಿಮಿತ್ತ ಬೇಟಿ ನೀಡುವ ಸಾರ್ವಜನಿಕರಿಗೂ ಕೂಡಾ ತೊಂದರೆ ಆಗುತ್ತಿದ್ದು, ಸರ್ಕಾರದ ಪ್ರತಿನಿಧಿಗಳು ಆದಷ್ಟು ಬೇಗ ಇಂತಹ ಹಳೆಯ ಕಟ್ಟಡಗಳ ಬಗ್ಗೆ ಕಾಳಜಿವಹಿಸಿ ನವೀಕರಿಸಬೇಕು, ಇಲ್ಲವಾದರೆ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಬೇಕು,

ಆ ಮೂಲಕ ಸರ್ಕಾರಿ ದಾಖಲೆಗಳು ಸುರಕ್ಷಿತವಾಗಿರುವುದಲ್ಲದೇ, ಸಿಬ್ಬಂದಿಗಳು ಕೂಡಾ ನೆಮ್ಮದಿಯಿಂದ ಕೆಲಸ ಮಾಡಿ, ಉತ್ತಮ ಆಡಳಿತದೊಂದಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬಹುದು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..