ಸ್ಟ್ರಾಂಗ್ ರೋಮ್ ಓಪನ್, ಅಂಚೆ ಮತಗಳ ಕೋಣೆ ತೆರೆದ ಚುನಾವಣಾಧಿಕಾರಿಗಳು.
ಬೆಳಗಾವಿ : ಮಂಗಳವಾರ ದಿನಾಂಕ 04/06/2024ರಂದು ನಗರದ ಆರ್ ಪಿಡಿ ಮಹಾವಿದ್ಯಾಲಯದಲ್ಲಿ ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ, ಚುನಾವಣಾಧಿಕಾರಿ ನಿತೇಶ್ ಪಾಟೀಲ್ ಅವರ ಸಮ್ಮುಖದಲ್ಲಿ ಚಾಲನೆ ದೊರಕಿದೆ..

ಬೆಳಿಗ್ಗೆ 6,30 ರಾಜಕೀಯ ಪಕ್ಷಗಳ ಮತಎಣಿಕೆಯ ಏಜೆಂಟರು, ಚುನಾವಣಾ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಯೊಂದಿಗೆ, ಮಾಧ್ಯಮದವರ ಎದುರಿಗೆ ಮೊದಲಿಗೆ ಅಂಚೆ ಮತಗಳು ಇರುವ ಕೊಠಡಿಯನ್ನು ತೆರೆಯಲಾಗಿದೆ..

ನಂತರ ಸಾಂಕೇತಿಕವಾಗಿ ಪತಪೆಟ್ಟಿಗೆ ಇರುವ ಮೂರ್ನಾಲ್ಕು ಕೋಣೆಗಳನ್ನು ತೆರೆದು, ಮಾಹಿತಿ ನೀಡಿದ್ದು, ಚುನಾವಣಾ ಏಜೆಂಟರು, ಮತಎಣಿಕೆ ಏಜೆಂಟರಿಗೆ ಮಾಹಿತಿ ನೀಡಿ, ಸುವ್ಯವಸ್ಥಿತ ರೀತಿಯಲ್ಲಿ ಮತಎಣಿಕೆ ನಡೆಯಲು ಚುನಾವಣಾ ಸಿಬ್ಬಂದಿ ವ್ಯವಸ್ಥೆ ಮಾಡಿದಂತಿತ್ತು..
ವರದಿ ಪ್ರಕಾಶ್ ಬಸಪ್ಪ ಕುರಗುಂದ.