ಸ್ನೇಹಜೀವಿ ಅಧಿಕಾರಿಗೆ ಹೊಸ ಹುದ್ದೆಯ ಜವಾಬ್ದಾರಿ…!!!
ಬೆಳಗಾವಿ : ನಮ್ಮ ಬೆಳಗಾವಿ ನಗರದ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಜನಪರವಾದ ಕಾರ್ಯಮಾಡುವ ಅನೇಕ ಅಧಿಕಾರಿಗಳು ಇದ್ದಿದ್ದು ಸಾರ್ವಜನಿಕರಿಗೆ ಸಹಕಾರಿಯಾಗಿದೆ…
ಅದರಂತೆಯೇ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಬಸವರಾಜ್ ಕುರಿಹುಲಿ ಅವರು ತಮ್ಮ ಜನಸ್ನೇಹಿ ಕೆಲಸದಿಂದ ಹೆಸರುವಾಸಿಯಾಗಿದ್ದು, ಕೆಲಸದ ನಿಮಿತ್ತ ಯಾರೇ ತಮ್ಮ ಕಚೇರಿಗೆ ಬಂದರೂ, ಅವರ ಸಮಸ್ಯ ಕೇಳಿ, ಸಾಧ್ಯವಾದಷ್ಟು ಸಹಾಯ ಮಾಡಿ ಪರಿಹಾರ ನೀಡುವಂತಹ ಅಧಿಕಾರಿ..
ಸಾರ್ವಜನಿಕರು, ಜನಪ್ರತಿನಿಧಿಗಳ ಆಪ್ತರು, ಬೆಂಬಲಿಗರು, ಸಂಘ ಸಂಸ್ಥೆಯವರು, ಸಮಾಜದ ವಿವಿಧ ರಂಗಗಳ ಪ್ರಮುಖರು, ಸಾಮಾನ್ಯರು, ವಿಧ್ಯಾರ್ಥಿಗಳು, ಹೀಗೆ ಯಾರೇ ಬಂದರೂ, ಅವರಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದನೆ ನೀಡಿ, ಸರ್ಕಾರದ ಸೌಲಭ್ಯಗಳು ಸಾಮಾನ್ಯರಿಗೆ ತಲುಪುವಂತೆ ಉತ್ತಮ ಹಾಗೂ ಜವಾಬ್ದಾರಿಯುತ ಕಾರ್ಯ ಮಾಡುತ್ತಾ ಬಂದಿದ್ದಾರೆ..
ಆದರೆ ಮೊನ್ನೆ ಶನಿವಾರ ಸರ್ಕಾರದ ಒಂದು ಆದೇಶದ ಮೇರೆಗೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಸ್ಥಾನದಲ್ಲಿ ಇದ್ದ, (ಅಪರ ನಿರ್ದೇಶಕ) ಕಲ್ಲೇಶ ಎಂಬ ಅಧಿಕಾರಿಯ ವರ್ಗಾವಣೆಯಿಂದ ಖಾಲಿಯಾಗಿರುವ ಜಂಟಿ ನಿರ್ದೇಶಕರ ಸ್ಥಾನದ ಉಸ್ತುವಾರಿಯನ್ನು ಪಡೆಯುವ ಮೂಲಕ ಹೊಸ ಹುದ್ದೆಯ ಜವಾಬ್ದಾರಿ ಹೊಂದಿದಂತ ಸಂತಸದಲ್ಲಿದ್ದಾರೆ..
ಅದೇನೇ ಇರಲಿ, ಇಂತಾ ಜನಸ್ನೇಹಿ ಅಧಿಕಾರಿಗಳು ನಮ್ಮ ಬೆಳಗಾವಿಯಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ, ಆ ಮೂಲಕ ಜನರಿಗೆ ಸರ್ಕಾರದಿಂದ ಸಿಗುವ ಸಕಲ ಸೌಲಭ್ಯಗಳು ದೊರಕುವಂತಾಗಲಿ ಎನ್ನುತ,
ಇಂತಹ ಒಳ್ಳೆಯ ಅಧಿಕಾರಿ ತಮ್ಮ ಹೊಸ ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯಮಾಡುತ್ತಾ, ತಮ್ಮ ವೃತ್ತಿ ಬದುಕಿನಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿ ಎಂಬುದು ಸಾರ್ವಜನಿಕರ ಅಭಿಮತ…
ವರದಿ ಪ್ರಕಾಶ ಕುರಗುಂದ..