ಸ್ನೇಹ ಕಂಬೈನ್ಸನ ಪ್ರೊಡಕ್ಷನ್ ನಂ1 ಚಿತ್ರದ ಅದ್ದೂರಿ ಮುಹೂರ್ತ..
ಅದ್ಬುತ ಕಥೆಯ, ಅತ್ಯುತ್ತಮ ಚಿತ್ರತಂಡದಿಂದ ಯಶಸ್ವಿ ಚಿತ್ರದ ವಿಶ್ವಾಸ..
ಬೆಳಗಾವಿಯ ಹೊಸಬರ ಈ ಚಿತ್ರಕ್ಕೆ ದಾಖಲೆಯ ಗೆಲುವು ಸಿಗಲೆಂದು ಗಣ್ಯರ ಹಾರೈಕೆ..
ಬೆಳಗಾವಿ : ಗಡಿಭಾಗ ಬೆಳಗಾವಿಯಂತಹ ಜಿಲ್ಲೆಯಲ್ಲಿ, ಸ್ಥಳೀಯ ಕಲಾವಿದರನ್ನು ಹಾಕಿಕೊಂಡು ಕನ್ನಡ ಚಿತ್ರವನ್ನು ನಿರ್ಮಿಸಲು ಸಿದ್ಧವಾದ ಸ್ನೇಹ ಕಂಬೈನ್ಸ್ ಅವರಿಗೆ, ಅವರ ಪ್ರೊಡಕ್ಷನ್ಸ್ 1ಚಿತ್ರವು ಭರ್ಜರಿಯಾಗಿ ಗೆಲುವು ಸಾಧಿಸಿ, ಚಿತ್ರದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಉತ್ತಮ ಹೆಸರು ಮತ್ತು ಭವಿಷ್ಯ ಲಭಿಸುವಂತಾಗಾಲಿ, ಈ ಮೂಲಕ ಮತ್ತಷ್ಟು ಚಿತ್ರಗಳು ಈ ಬೆಳಗಾವಿಯಲ್ಲಿ ನಿರ್ಮಾಣವಾಗಲಿ ಎಂದು ಚಿತ್ರದ ಮುಹೂರ್ತಕ್ಕೆ ಆಗಮಿಸಿದ ಗಣ್ಯರು ಶುಭ ಹಾರೈಸಿದ್ದಾರೆ..

ರವಿವಾರ ದಿನಾಂಕ 16/03/2025 ರಂದು ನಗರದ ಟಿಳಕವಾಡಿಯ ಸಾಯಿ ಮಂದಿರದಲ್ಲಿ ವಿಧಿವತ್ತಾಗಿ ಮಹೂರ್ತ ಕಾರ್ಯ ನಡೆದಿದ್ದು, ಸಾಮಾಜಿಕ ಕಾರ್ಯಕರ್ತೆ ಹಾಗೂ ಬಿಜೆಪಿಯ ಮಹಿಳಾ ಪದಾಧಿಕಾರಿ ಡಾ ಸೋನಾಲಿ ಸರ್ನೋಬತ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಬಿಜೆಪಿಯ ಯುವ ಧುರೀಣರಾದ ಚೇತನ ಅಂಗಡಿ ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ, ವಿಧಿವತ್ತಾಗಿ ಚಿತ್ರಕ್ಕೆ ಚಾಲನೆ ನೀಡಿದ್ದಾರೆ, ಇದೇ ವೇಳೆ ಚಿತ್ರದ ಮೊದಲ ದೃಶ್ಯವನ್ನು ಕೂಡಾ ಸೆರೆಹಿಡಿಯಲಾಗಿದೆ.

ನಂತರ ವೇದಿಕೆ ಕಾರ್ಯಕ್ರಮದಲ್ಲಿ ಚಿತ್ರದ ಮುಹೂರ್ತಕ್ಕೆ ಆಗಮಿಸಿದ ಗಣ್ಯರೆಲ್ಲರೂ ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು, ಇದೇ ವೇಳೆ ಮಹುರ್ತಕ್ಕೆ ಆಗಮಿಸಿದ ಎಲ್ಲಾ ಗಣ್ಯರನ್ನು, ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಸ್ನೇಹ ಕಂಬೈನ್ಸ್ ವತಿಯಿಂದ ಆತ್ಮೀಯವಾಗಿ ಸತ್ಕರಿಸಲಾಯಿತು..

ವೇದಿಕೆ ಮೇಲೆ ಬೆಳಗಾವಿಯ ಪ್ರತಿಷ್ಠಿತ ಉದ್ಯಮಿ ಹಾಗೂ ಬಿಜೆಪಿಯ ಪ್ರಮುಖ ಯುವರಾಜ ಜಾಧವ ಅವರು ಮಾತನಾಡಿ, ಗ್ರಾಮೀಣ ಜನರಲ್ಲಿ ಉತ್ತಮವಾದ ಕಲೆ ಇರುತ್ತದೆ, ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶೇಖರ್ ಕಾಲೇರಿ ಅವರ ಊರಿಗೆ ಕೆಲ ದಿನಗಳ ಹಿಂದೆ ನಾಟಕ ನೋಡಲು ಹೋಗಿದ್ದೆ, ಆಗ ಅಲ್ಲಿಯ ಕಲಾವಿದರ ಕಲೆಯನ್ನು ನೋಡಿ, ಆದಷ್ಟು ಬೇಗ ಇವರಿಗಾಗಿ ಒಂದು ಚಿತ್ರ ನಿರ್ಮಾಣವಾಗಲಿ ಎಂದು ಆ ದೇವಿಯಲ್ಲಿ ಕೇಳಿಕೊಂಡಿದ್ದೆ, ಆದರೆ ಒಂದೇ ತಿಂಗಳಲ್ಲಿ ಅದು ಇಡೆರಿದ್ದು ಖುಷಿ ತಂದಿದೆ ಎಂದಿದ್ದಾರೆ.

ಇನ್ನು ಸಮಾಜ ಸೇವಕರು ಹಾಗೂ ಕಾಂಗ್ರೆಸ್ಸಿನ ಹಿರಿಯ ಮುತ್ಸದ್ದಿ ಆದ ವೀರನಗೌಡ ಪಾಟೀಲ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಿನಿಮಾ ಚಟುವಟಿಕೆಗಳು ಮತ್ತಷ್ಟು ನಡೆಯಬೇಕು ಆ ಮೂಲಕ ಇಲ್ಲಿಯ ಕಲಾವಿದರು ಹಾಗೂ ತಂತ್ರಜ್ಞರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು, ಸರ್ಕಾರದ ಹಾಗೂ ನಮ್ಮ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರವನ್ನು ನಾವು ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಇನ್ನು ಚಿತ್ರದ ನಿರ್ದೇಶಕ, ನಾಯಕ, ನಾಯಕಿಯರು, ಮಾತನಾಡಿದ್ದು, ಈ ಚಿತ್ರದ ಕಥೆ ಗಟ್ಟಿಯಾಗಿದ್ದು, ಕುಟುಂಬ ಸಮೇತ ಕುಳಿತು ನೋಡುವಂತಹ ಫ್ಯಾಮಿಲಿ ಫ್ಯಾಕ್ ಮೋವಿ, ಚಿತ್ರರಸಿಕರಿಗೆ ತುಂಬು ಮನರಂಜನೆ ನೀಡಿ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಈ ನಮ್ಮ ಚಿತ್ರ ಖಂಡಿತ ಚಿತ್ರರಸಿಕರ ಮನ ಗೆದ್ದು ಯಶಸ್ವಿ ಆಗುತ್ತದೆ ಎಂದಿದ್ದಾರೆ.

ಬೆಳಗಾವಿಯ ಒಳ್ಳೆಯ ಬ್ಯಾನರಿನಡಿ ನಟನೆ ಮಾಡುತ್ತಿರುವ ನಮೆಗೆ ತುಂಬಾ ಸಂತಸವಿದೆ, ನಾವೆಲ್ಲಾ ನಮ್ಮ ಶಕ್ತಿ ಮೀರಿ, ನಟನೆ ಮಾಡಿ, ಎಲ್ಲಾ ವರ್ಗದ ಜನರಿಗೆ ಇಷ್ಟವಾಗುವ ಹಾಗೂ ಸೆಳೆಯುವ ಒಳ್ಳೆಯ ಚಿತ್ರವನ್ನು ನಿಡಬೇಕೆಂಬ ಉದ್ದೇಶದಿಂದ ಕಾರ್ಯ ಮಾಡುತ್ತೇವೆ, ನಮ್ಮ ಈ ತಂಡ ಉತ್ತಮವಾಗಿದ್ದು, ಪಲಿತಾಂಶ ಕೂಡಾ ಸಕಾರಾತ್ಮಕವಾಗಿಯೇ ಇರುತ್ತದೆ ಎಂದಿದ್ದಾರೆ.

ಬೆಳಗಾವಿಯ ನವಯುವಕ ಸಂತೋಷ ಹೀರೋ ಆಗಿರುವ ಸ್ನೇಹ ಕಂಬೈನ್ಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಶೇಖರ್ ಕಾಲೆರಿ, ಸಂತೋಷ ಬೆಳಗಾವಿ, ವಿಠ್ಠಲ್ ಅಂಕಲಗಿ, ಬಸನಾಯ್ಕ ಕಾಲೆರಿ, ರಮೇಶ ಬಸರಿಮರದ ಅವರು ಬಂಡವಾಳ ಹುಡುತ್ತಿದ್ದು, ಡಿ ಜಿ ಉಮೇಶಗೌಡ ಅವರ ನಿರ್ದೇಶನ, ರವಿ ಅವರ ಛಾಯಾಗ್ರಹಣ ಹಾಗೂ ಸೂರಾಜ್ ವಾಸುದೇವ ಅವರ ಸಂಗೀತವಿರುವ ಈ ಚಿತ್ರ ಉತ್ತಮವಾಗಿ ಮೂಡಿ ಬರಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡದವರು ವ್ಯಕ್ತಪಡಿಸಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..