ಸ್ವಾಭಿಮಾನದ ಗೆಲುವನ್ನು ಸಂಭ್ರಮಿಸಿದ ಬೆಳಗಾವಿ ಗ್ರಾಮೀಣ ಬಿಜೆಪಿ ಸೇನೆ…

ಶಾಸಕ ರಮೇಶ ಜಾರಕಿಹೊಳಿ ಅವರ ತಂಡದಿಂದ ನೂತನ ಸಂಸದ ಜಗದೀಶ್ ಶೆಟ್ಟರಗೆ ಅಭಿನಂದನೆ..

ಸ್ವಾಭಿಮಾನದ ಗೆಲುವನ್ನು ಸಂಭ್ರಮಿಸಿದ ಬೆಳಗಾವಿ ಗ್ರಾಮೀಣ ಬಿಜೆಪಿ ಸೇನೆ..

ಬೆಳಗಾವಿ : ಇಂದು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವರು ಹಾಗೂ ಗೋಕಾಕಿನ ಜನಪ್ರಿಯ ಶಾಸಕರಾದ ರಮೇಶ ಜಾರಕಿಹೊಳಿ ಅವರ ಆತ್ಮೀಯ ಬಿಜೆಪಿ ತಂಡದಿಂದ, ಬೆಳಗಾವಿಯ ನವ ಸಂಸದರಾದ ಜಗದೀಶ್ ಶೆಟ್ಟರ್ ಅವರಿಗೆ ಅಭಿನಂದನೆಯ ಗೌರವ ಸಪರ್ಪನೆ ಮಾಡಲಾಯಿತು..

2024ರ ಲೋಕಸಭಾ ಚುನಾವಣೆಯಲ್ಲಿ, ಬೆಳಗಾವಿ ಮತಕ್ಷೇತ್ರದ ಅಭ್ಯರ್ಥಿಯ ಗೆಲುವಿಗಾಗಿ ರಮೇಶ ಜಾರಕಿಹೊಳಿ ಅವರು ಹಗಲಿರುಳು ಪ್ರಯತ್ನ ಮಾಡಿದ್ದು, ಅವರ ಬೆಂಬಲಿಗರು ಕೂಡಾ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ ಗೆಲ್ಲಲು ಸತತ ಪ್ರಯತ್ನ ಮಾಡಿದ್ದರು.

ಅದರ ಫಲವಾಗಿಯೇ ಜೂನ್ ನಾಲ್ಕರ ಪಲಿತಾಂಶದ ದಿನದಂದು ಬಿಜೆಪಿ ಅಭ್ಯರ್ಥಿ ಅತ್ಯಂತ ಬಹುಮತದಿಂದ ಗೆದ್ದು, ಎಲ್ಲೆಡೆ ಬಿಜೆಪಿಯ ವಿಜಯದ ಬಾವುಟ ಬಾನೆತ್ತರಕ್ಕೆ ಹಾರಾಡಿತ್ತು..

ಬೆಳಗಾವಿಯ ಲೋಕಸಭಾ ಅಭ್ಯರ್ಥಿಯ ಗೆಲುವು, ಅತೀ ಹೆಚ್ಚು ಖುಷಿ ಮತ್ತು ತೃಪ್ತಿ ನೀಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರ ಇಡೀ ತಂಡಕ್ಕೆ, ಏಕೆಂದರೆ ಹಲವಾರು ಸಮಸ್ಯೆಗಳ ಎದುರು, ಪಕ್ಷನ್ನಿಷ್ಠೆ ಒಂದೇ ಇಟ್ಟುಕೊಂಡು, ಸಾಹುಕಾರ ಅವರ ಮಾರ್ಗದರ್ಶನದಲ್ಲಿ, ಸ್ವಾಭಿಮಾನಕ್ಕಾಗಿ ಗೆಲ್ಲುವ ಪ್ರಯತ್ನ ಮಾಡಿ, ಅದರಲ್ಲಿ ಯಶಸ್ಸು ಆಗಿದ್ದು, ಇದು ಇಡೀ ಗ್ರಾಮೀಣ ಬಿಜೆಪಿ ತಂಡಕ್ಕೆ ಅತ್ಯಂತ ಸಂತಸವನ್ನು ಉಂಟುಮಾಡಿ, ಹೊಸ ಚೈತನ್ಯ ನೀಡಿದೆ..

ಅದೇ ರೀತಿ ಬೆಳಗಾವಿ ಗ್ರಾಮೀಣ ಮತದಾರರಿಂದ ಬಿಜೆಪಿ ಪಕ್ಷಕ್ಕೆ ಉತ್ತಮ ಮುನ್ನಡೆಯ ದೊರೆತು, ತಾವು ಬಿಜೆಪಿ ಪರವಾಗಿ ಇದ್ದೇವೆ ಎಂಬ ಸಂದೇಶ ನೀಡಿದ್ದು, ಬಿಜೆಪಿ ನಾಯಕರಿಗೆ ನವಶಕ್ರಿ ಸಿಕ್ಕಂತಾಗಿದೆ.

ಅದೇ ಸಂತಸದ ಕಾರಣಕ್ಕೆ ಇಂದು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಅವರ ತಂಡ, ಬೆಳಗಾವಿಯ ನೂತನ ಬಿಜೆಪಿಯ ಸಂಸದರಾದ ಜಗದೀಶ್ ಶೆಟ್ಟರ್ ಅವರನ್ನು ಆತ್ಮೀಯವಾಗಿ ಗೌರವಿಸಿ, ಅಭಿನಂದಿಸಿದ್ದಾರೆ..

ಈ ವಿಶೇಷ ಸಂದರ್ಭದಲ್ಲಿ ಶಾಸಕರಾದ ರಮೇಶ ಜಾರಕಿಹೊಳಿ ಅವರೊಂದಿಗೆ, ಕಿರಣ ಜಾಧವ, ಮಹಾಂತೇಶ ಅಲಾಬಿದ್ದಿನ್, ಸತೀಶ ಶಹಪೂರ್ಕರ್, ಬಸವರಾಜ ಕಡೆಮನಿ, ಮಾರುತಿ ಮೊದಗೆ ಪ್ರಕಾಶ್ ಮೋದಗೆ, ಶೇಕರ್ ಕಾಲೇರಿ, ಮಹೇಶ್ ಕೊಲಾರಕೊಪ್ಪ, ಸಾಗರ ಹಣಬರ ರಮೇಶ್ ಕೇಮಜಿ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..