ಸ್ವಾರ್ಥದ ಕ್ರೌರ್ಯ ತೊರೆದು ಮಾನವೀಯ ಬಂಧಗಳಿಂದ ಬಾಳುವ ಸಂದೇಶ ಸಾರುವ ಗಾಯಗಳು ನಾಟಕ..

ಸ್ವಾರ್ಥದ ಕ್ರೌರ್ಯ ತೊರೆದು ಮಾನವೀಯ ಬಂಧಗಳಿಂದ ಬಾಳುವ ಸಂದೇಶ ಸಾರುವ ಗಾಯಗಳು ನಾಟಕ..

ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಭಂಗ ತರುವ ಭಂಡರ ಸೆದೆಬಡೇವ ಸಂದೇಶ…

ಬೆಳಗಾವಿ : ಗುರುವಾರ ಸಂಜೆ ನಗರದ ರಾಮದೇವ್ ಹೋಟೆಲ್ ಹಿಂಭಾಗದಲ್ಲಿ ಇರುವ ಕನ್ನಡ ಭವನ ರಂಗಮಂದಿರದಲ್ಲಿ ಪ್ರದರ್ಶಿತವಾದ ಗಾಯಗಳು ಎಂಬ ನಾಟಕವು ಪ್ರಾಚೀನ, ಮಧ್ಯಯುಗೀನ ಹಾಗೂ ಪ್ರಸ್ತುತ ಸಮಾಜಗಳ ಕೆಲ ಪ್ರಭಾವಿ ಸ್ವಾರ್ಥ ಜನರ ಅನುಕೂಲಕ್ಕಾಗಿ, ಜನಸಾಮಾನ್ಯರ ಕಚ್ಚಾಟ, ಹೋರಾಟ, ತೊಳಲಾಟಗಳ ಸಂಕಷ್ಟಗಳಿಂದ ಜೀವನವೇ ನರಕವಾಗಿ ಅಂತ್ಯವಾಗುತ್ತದೆ ಎಂಬ ಸಂದೇಶ ಸಾರುವ, ಅದ್ಬುತ ನಾಟಕವಾಗಿ ಮೂಡಿಬಂದಿದೆ..

ಬಹುಭಾಷಾ ನಟರು, ನಿರ್ದೇಶಕರು, ನಿರ್ಮಾಪಕರು, ಸಾಹಿತಿ, ವಿಚಾರವಾದಿ, ವಾಗ್ಮಿಗಳಾದ ಪ್ರಕಾಶ ರಾಜ್ ಅವರು ಅರ್ಪಿಸಿದ, ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ ನಿರ್ದಿಗಂತ ತಂಡದವರು, ರಂಗ ಪಯಣದ ಅಂಗವಾಗಿ ಈ ಗಾಯಗಳು ಎಂಬ ನಾಟಕವನ್ನು ಪ್ರದರ್ಶನ ಮಾಡಿದ್ದು, ಕಲಾವಿದರ ಅಭಿನಯ ಹಾಗೂ ಕಥಾವಸ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ..

ಹಿಂದೆ ರಾಜಮಹಾರಾಜರು ತಮ್ಮ ರಾಜ್ಯ ವಿಸ್ತಾರದ ಆಸೆಯಿಂದ ಯುದ್ಧ ಕಾಳಗ ಮಾಡಿಸಿ ಅಮಾಯಕ ಸೈನಿಕರ ರಕ್ತಪಾತ ನಡೆಸಿ, ಅವರ ಬದುಕು ಬರಡು ಮಾಡುತ್ತಿದ್ದರು, ಪ್ರಸ್ತುತ ರಾಜಕಾರಣ ಅದರ ಅಧಿಕಾರದ ಆಸೆಗೆ ಜಾತಿ, ಭಾಷೆ, ಗಡಿ, ಧರ್ಮದ ವಿಷಯದಲ್ಲಿ ದ್ವೇಷ ಕಾರುತ್ತಾ ಇಡೀ ಮನುಕುಲದ ಶಾಂತಿಯ ಭಂಗಕ್ಕೆ ಸಾಕ್ಷಿಯಾದಂತ ದೃಶ್ಯಗಳನ್ನು ಬಹಳ ನಾಜೂಕಾಗಿ ತಿಳಿಸುವ ಈ ನಾಟಕದ ಅವಶ್ಯಕತೆ ನಮ್ಮ ಸಮಾಜಕ್ಕೆ ತುಂಬಾ ಅವಶ್ಯಕತೆ ಇದೆ..

ಸರ್ವ ಜನಾಂಗದ ಶಾಂತಿಯ ತೋಟ, ವಿವಿಧತೆಯಲ್ಲಿ ಏಕತೆ ಮೆರೆಯುವ ನಮ್ಮ ಭಾರತ ದೇಶದಲ್ಲಿ, ಶಾಂತಿ ಸಮಾನತೆ ಸಹೋದರತೆಯ ನೆಲೆಯಲ್ಲಿ ಎಲ್ಲರೂ ಬಾಳೋಣ ಎನ್ನುವ ಸಂದೇಶಕ್ಕೆ ಸರ್ವರೂ ಮನಸೊಲುವರು..

ವರದಿ ಪ್ರಕಾಶ ಕುರಗುಂದ..