ಹನುಮಾನ ನಗರದ ನಿವಾಸಿಗಳ ಸಮಸ್ಯೆ ಬಗೆಹರಿಸಿ..
ನಿಯಮಬಾಹಿರ ಬಹುಮಹಡಿ ವಾಣಿಜ್ಯ ಕಟ್ಟಡಗಳಿಗೆ ಕಡಿವಾಣ ಹಾಕಬೇಕು..
ನಗರವಾಸಿಗಳ ಮನವಿ..
ಬೆಳಗಾವಿ : ಸರ್ಕಾರಿ ನೌಕರರ ವಸತಿ ಯೋಜನೆಯಲ್ಲಿ ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾದ ಹನುಮಾನ ನಗರದ ಜನವಸತಿ ಪ್ರದೇಶದಲ್ಲಿ ಇಂದು ಬಹುಮಹಡಿ ವಾಣಿಜ್ಯ ಕಟ್ಟಡಗಳು ತಲೆ ಎತ್ತುತ್ತಿದ್ದೂ, ಇವುಗಳಿಂದ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಆದಷ್ಟು ಬೇಗ ಪಾಲಿಕೆಯ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಹನುಮಾನ ನಗರದ ನಿವಾಸಿಗಳು ಮನವಿ ನೀಡಿದ್ದಾರೆ.
ಮಂಗಳವಾರ ದಿನಾಂಕ 23/12/2025 ರಂದು ಪಾಲಿಕೆಗೆ ಆಗಮಿಸಿ, ಸ್ಥಳೀಯ ನಗರ ಸೇವಕರಿಗೆ ಹಾಗೂ ಪಾಲಿಕೆಯ ಆಡಳಿತ ಪಕ್ಷದ ನಾಯಕರಿಗೆ ತಮ್ಮ ಮನವಿಯನ್ನು ನೀಡಿದ ಹನುಮಾನ ನಗರದ ರಹವಾಸಿಗಳು, ನಾವು ಇರುವಂತಹ ಈ ಪ್ರದೇಶ ಕೇವಲ ಮೂವತ್ತು ಅಡಿ ಅಗಲದ ರಸ್ತೆ ಆಗಿದ್ದು, ಇಲ್ಲಿ ಅಪಾರ್ಟಮೆಂಟ್ ಕಟ್ಟುವುದಕ್ಕೆ ಯಾವುದೇ ಅನಕೂಲತೆ ಇಲ್ಲಾ, ಸರಿಯಾದ ನಿಲುಗಡೆಯ ಸ್ಥಳವೂ ಇರುವದಿಲ್ಲ, ಮೂವತ್ತು ಅಡಿ ರಸ್ತೆಯಲ್ಲಿ ಅಪಾರ್ಟ್ಮೆಂಟ ಕಟ್ಟಲಿಕ್ಕೆ ಕೊಡಬಾರದು ಎಂಬ ನಿಯಮಗಳು ಕೂಡಾ ಇರುವಾಗ ಪಾಲಿಕೆಯ ಜನಪ್ರತಿನಿದಿನಗಳು ಹಾಗೂ ಅಧಿಕಾರಿಗಳು ಇಂತಹ ಅನಧಿಕೃತ ಕಟ್ಟಡಗಳ ನಿರ್ಮಾಣಗಳನ್ನು ನಿಲ್ಲಿಸಬೇಕೆಂದರು..

ಒನ್ ಪ್ಲಸ್ ಒನ್ ಕಟ್ಟಡ ನಿರ್ಮಿಸುವ ನಿಯಮ ಇದ್ದರೂ, ಪಾಲಿಕೆಯಿಂದ ಅನುಮತಿಯನ್ನು ಪಡೆದುಕೊಂಡು ಬಂದು ಏನೋನೋ ಮಾಡುತ್ತಿದ್ದಾರೆ, ಈಗಾಗಲೇ ಎಳೇoಟು ಅಪಾರ್ಟ್ ಮೆಂಟ್ ಆಗಿವೆ, ಹಾಗೆಲ್ಲ ಮಾಡಬಾರದು, ಅಲ್ಲಿ ನಿವೃತ್ತರಾದ ವಯೋವೃದ್ದರು ಇರುತ್ತಾರೆ, ಸರಿಯಾದ ನೀರು ಪೂರೈಕೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲಾ, ವಾಯುಮಾಲಿನ್ಯ ಶಬ್ದಮಾಲಿನ್ಯ ಆಗುವದರಿಂದ ಇಲ್ಲಿಯ ರಹವಾಸಿಗಳಿಗೆ ಜೀವನ ಮಾಡುವದು ಕಷ್ಟವಾಗಿದೆ ಎಂದಿದ್ದಾರೆ.
ಮುಂದೆ ಇದೇ ರೀತಿ ಸಮಸ್ಯೆ ಆಗಬಾರದೆಂದು ಸಂಬಂದಿಸಿದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ, ಬೆಳಿಗ್ಗೆ ಪಾಲಿಕೆಯಿಂದ ಕಸ ಸಂಗ್ರಹಣೆಗೆ ಬರುವ ಸಿಬ್ಬಂದಿಗಳಿಗೂ ತೊಂದರೆ ಆಗುತ್ತಿದೆ, ಸಮಸ್ಯೆ ಪರಿಹಾರ ಆಗುವವರೆಗೂ ಪ್ರಯತ್ನ ಮಾಡುತ್ತೇವೆ, ಆಗದಿದ್ದರೆ ಮುಂದೆ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ..
ವರದಿ ಪ್ರಕಾಶ ಬಿ ಕೆ..