ಹಲವು ವರ್ಷಗಳಿಂದ ನಗರದ ಕೆಲ ಕುಟುಂಬಗಳಿಗೆ ಕುಡಿಯುವ ನೀರಿನ ಪೂರೈಕೆ ಸಮಸ್ಯೆ.

ಹಲವು ವರ್ಷಗಳಿಂದ ನಗರದ ಕೆಲ ಕುಟುಂಬಗಳಿಗೆ ಕುಡಿಯುವ ನೀರಿನ ಪೂರೈಕೆ ಸಮಸ್ಯೆ.

ಯಾವುದೇ ಕಾರಣಕ್ಕೂ ನೀರಿನ ಬಿಲ್ ತುಂಬೋಲ್ಲವೆಂದ ಸ್ಥಳೀಯರು..

ಸಮಸ್ಯೆ ಪರಿಹಾರಕ್ಕೆ ಗಡುವು ನೀಡಿದ ಸ್ಥಳೀಯ ನಗರ ಸೇವಕರು.

ಬೆಳಗಾವಿ : ಸುಮಾರು ಮೂರ್ನಾಲ್ಕು ವರ್ಷಗಳಿಂದ ಕುಡಿಯುವ ನೀರಿನ ಸಂಪರ್ಕ ಇಲ್ಲ, ಕುಡಿಯುವ ನೀರಿಗಾಗಿ ಬೇರೆಯವರ ಮನೆ ಬಾಗಿಲಿಗೆ ಹೋಗಿ ನೀರು ತರುತ್ತೇವೆ, ಹೀಗಿರುವಾಗ ನಗರ ನೀರು ಸರಬರಾಜು ಇಲಾಖೆಯಿಂದ ಲಕ್ಷಗಟ್ಟಲೆ ನೀರಿನ ಬಿಲ್ ಬಂದರೆ ಏನು ಅರ್ಥ, ನಾವು ಸುತಾರಾಂ ನೀರಿನ ಬಿಲ್ ತುಂಬುವುದಿಲ್ಲ ಎಂದು ಬೆಳಗಾವಿ ನಗರದ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ವಾರ್ಡ ಸಂಖ್ಯೆ ನಾಲ್ಕರಲ್ಲಿ ಇರುವ ಕೋಣವಾಳ ಗಲ್ಲಿಯ ಮಹಿಳೆಯರು ನೀರಿನ ಪೂರೈಕೆಯ ಪರಿಶೀಲನೆಗೆ ಆಗಮಿಸಿದ ಎಲ್ ಅಂಡ್ ಟಿ ಸಂಸ್ಥೆಯ ಅಧಿಕಾರಿಗಳ ಮುಂದೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಕೆಲ ವರ್ಷಗಳಿಂದ ನಮಗೆ ನೀರಿನ ಸಂಪರ್ಕ ಇಲ್ಲದೇ ನಾವು ತುಂಬಾ ಕಷ್ಟ ಅನುಭವಿಸುತ್ತಿದ್ದೇವೆ, ಪಕ್ಕದ ಓಣಿಯಲ್ಲಿ ನೀರು ಬಂದರೂ ನಮ್ಮ ನಳಕ್ಕೆ ನೀರು ಬರುವದಿಲ್ಲ, ಎಷ್ಟೇ ದೂರು ನೀಡಿದರು ಸಮಸ್ಯೆ ನಿವಾರಣೆ ಆಗಿಲ್ಲ, ಹೀಗಿರುವಾಗ ನಾವು ನೀರು ಬಿಲ್ ಏಕೆ ತುಂಬಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಧಿಕಾರಿ ಹಾಗೂ ಸ್ಥಳೀಯ ನಗರ ಸೇವಕರ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡ ಸ್ಥಳೀಯ ಮಹಿಳೆಯರು, ಇಲ್ಲಿ ನಾಲ್ಕು ದಿನಕ್ಕೆ ಒಂದು ಸಲ ನೀರು ಬರುತ್ತವೆ, ಬಂದಾಗ ಕನಿಷ್ಠ ಎರಡು ಗಂಟೆಯಾದರೂ ನಮಗೆ ನೀರು ಬಿಡಿ ಎಂದಿದ್ದಾರೆ.

ಸ್ಥಳೀಯ ಮಹಿಳೆಯರು ಹಾಗೂ ಅಧಿಕಾರಿಗಳ ಜಟಾಪಟಿಯ ಮಧ್ಯ ಪ್ರವೇಶಿಸಿ ಮಾತನಾಡಿದ ನಗರ ಸೇವಕ ಜಯತೀರ್ಥ ಸವದತ್ತಿ ಅವರು, ತಮ್ಮ ನೀರಿನ ಸಮಸ್ಯೆ ಸರಿ ಆಗುವವರೆಗೆ ತಾವು ನೀರಿನ ಬಿಲ್ ಕಟ್ಟಬೇಡಿ, ನನ್ನ ಮನೆಯದೂ ಕೂಡಾ ಸಮಸ್ಯೆ ಇದೆ, ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಡಿಸೆಂಬರ ಅಂತ್ಯದವರೆಗೆ ನೀರಿನ ಪೂರೈಕೆಯ ಕೊರತೆಯಿರುವ ಇಲ್ಲಿಯ ಕೆಲ ಕುಟುಂಬಗಳ ಸಮಸ್ಯೆ ನಿವಾರಣೆ ಆಗುತ್ತದೆ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳೂ ಒಪ್ಪಿದ್ದಾರೆ ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..